ರಾಯಚೂರು: ಜಿಲ್ಲೆಯ ಸಿಂಧನೂರು ನಗರದಲ್ಲಿ ಆಯೋಜಿಸಿದ್ದ ರೈತ ದಸರಾ ಉದ್ಘಾಟನೆಗೆ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಆಗಮಿಸಿದ ವೇಳೆ, ನಗರದ ಸರ್ಕ್ಯೂಟ್ ಹೌಸ್ ಹೆಲಿಪ್ಯಾಡ್ ಬಳಿ, ಘೇರಾವ್ ಹಾಕಲು ಯತ್ನಿಸಿದ ಘಟನೆ ಇಂದು ನಡೆಯಿತು.
ಒಳ ಮೀಸಲಾತಿ ಜಾರಿಗಾಗಿ ಐಕ್ಯ ಹೋರಾಟ ಸಮಿತಿ ಕಾರ್ಯಕರ್ತರು ಘೇರಾವ್ ಹಾಕಲು ಯತ್ನಿಸಿದರು. ಘೋಷಣೆ ಕೂಗಿದ ಕಾರ್ಯಕರ್ತರು ಒಳಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ಡಿಸಿಎಂಗೆ ಮನವಿ ನೀಡಿದರು. ಈ ವೇಳೆ ನೂಕು ನುಗ್ಗಲು ಸಹ ಉಂಟಾಯಿತು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, "ಹರಿಯಾಣ ಹಾಗೂ ಜಮ್ಮು-ಕಾಶ್ಮಿರ ಎರಡು ರಾಜ್ಯಗಳ ಚುನಾವಣಾ ಫಲಿತಾಂಶ ಇನ್ನೂ ಬಂದಿಲ್ಲ. ಅಲ್ಲಿನ ಫಲಿತಾಂಶ ಬಹಳ ಏರುಪೇರು ಆಗುತ್ತಿದೆ. ಬೆಳಗ್ಗೆ ಹರಿಯಾಣದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು. ಈಗ ಹಿಂದಿದೆ ಎಂದು ಕೇಳಲ್ಪಟ್ಟೆ. ನಾನು ಈಗತಾನೆ ಹೆಲಿಕಾಪ್ಟರ್ನಿಂದ ಇಳಿದಿದ್ದೇನೆ. ಪೂರ್ಣ ತಿಳಿದುಕೊಂಡು ಮಾತನಾಡುತ್ತೇನೆ. ಜಾತಿಗಣತಿ ವರದಿ ವಿಚಾರದಲ್ಲಿ ನಮ್ಮ ಪಕ್ಷ ಏನು ಹೇಳುತ್ತದೆಯೋ, ಅದನ್ನೇ ನಾವೆಲ್ಲ ಮಾಡುತ್ತೇವೆ" ಎಂದು ತಿಳಿಸಿದರು.
ಇದನ್ನೂ ಓದಿ: ರಾಜ್ಯದಲ್ಲಿ ಏನೇನಾಗುತ್ತಿದೆ ಎಂಬ ಬಗ್ಗೆ ಹೈಕಮಾಂಡ್ ವರದಿ ತರಿಸಿಕೊಳ್ಳುತ್ತದೆ : ಡಿ ಕೆ ಶಿವಕುಮಾರ್ - DCM D K Shivakumar