ETV Bharat / state

ಹಾದಿ ಬೀದಿಯಲ್ಲಿ ಕಸ ಎಸೆಯುತ್ತಿದ್ರೆ ಜೋಕೆ!: ಇನ್ಮುಂದೆ ನಿಮ್ಮ ಮೇಲೆ 'ಮಾರ್ಷಲ್'ಗಳ ನಿಗಾ - MARSHALS TO PREVENT LITTERING

ನಗರವನ್ನು ಸ್ವಚ್ಛವಾಗಿಡಲು ದಾವಣಗೆರೆ ಮಹಾನಗರ ಪಾಲಿಕೆ ಮಹತ್ವದ ಕ್ರಮ ಕೈಗೊಂಡಿದೆ. ಈ ಕುರಿತು ಈಟಿವಿ ಭಾರತ ಕನ್ನಡ ವರದಿಗಾರ ನೂರ್​ ಮಾಡಿರುವ ವಿಶೇಷ ವರದಿ ಇಲ್ಲಿದೆ..

Davangere Municipal Corporation thinking of appointing marshals to prevent littering everywhere
ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಡೆಯಲು ದಾವಣಗೆರೆ ಮಹಾನಗರ ಪಾಲಿಕೆಯಿಂದ ಮಾರ್ಷಲ್​ಗಳ ನೇಮಕಕ್ಕೆ ಚಿಂತನೆ (ETV Bharat)
author img

By ETV Bharat Karnataka Team

Published : Nov 2, 2024, 7:31 PM IST

Updated : Nov 2, 2024, 7:53 PM IST

ದಾವಣಗೆರೆ: ಮಹಾನಗರ ಪಾಲಿಕೆ ನಗರದ ಅಂದವನ್ನು ಇಮ್ಮಡಿಗೊಳಿಸಲು ನಾನಾ ಪ್ರಯತ್ನಗಳನ್ನು ಮಾಡುತ್ತಿದೆ. ಅಲ್ಲದೆ ಕಸಮುಕ್ತ ನಗರವನ್ನಾಗಿಸಲು ಶ್ರಮಿಸುತ್ತಿದೆ.‌ ಅದರೆ ಕೆಲವರು ಮನೆ ಮುಂದೆಯೇ ಕಸದ ವಾಹನ ಬಂದರೂ ಕೂಡ ಕಸ ಹಾಕದೆ, ಅದೇ ಕಸವನ್ನು ಹಾದಿ ಬೀದಿಯಲ್ಲಿ ಎಸೆಯುತ್ತಿರುವುದು ಪಾಲಿಕೆ ಅಧಿಕಾರಿಗಳಿಗೆ ತಲೆಬಿಸಿಯಾಗಿ ಪರಿಣಮಿಸಿದೆ.‌ ಅದಕ್ಕಾಗಿ ಇದೀಗ ಪಾಲಿಕೆ ಎಲ್ಲೆಂದರಲ್ಲಿ ಕಸ ಎಸೆಯುವವರ ಮೇಲೆ ನಿಗಾ ಇಡಲು 'ಮಾರ್ಷಲ್‌'ಗಳನ್ನು ನೇಮಕ ಮಾಡಿಕೊಳ್ಳಲು ಆಲೋಚಿಸಿದೆ. ಇದೇ ಮಾರ್ಷಲ್​ಗಳು ನಗರದಾದ್ಯಂತ ಬೀಟ್ ಹಾಕುತ್ತಾ ಕಸ ಎಸೆಯುವವರ ಮೇಲೆ ನಿಗಾ ಇಡಲಿದ್ದಾರೆ. ಅಲ್ಲದೆ ಅವರಿಗೆ ದಂಡ ಜಡಿಯುವ ಹಕ್ಕನ್ನು ಪಾಲಿಕೆ ನೀಡಲಿದೆ.

ಈ ಕುರಿತು ಈಟಿವಿ ಭಾರತ ಕನ್ನಡ ದೊಂದಿಗೆ ಮಾತನಾಡಿದ ಮೇಯರ್ ಕೆ. ಚಮನ್ ಸಾಬ್, "20 ಮಾಜಿ ಸೈನಿಕರ ತಂಡವನ್ನು ಮಾರ್ಷಲ್‌ಗಳಾಗಿ ನೇಮಕ ಮಾಡಲಿದ್ದು, ಇವರು ನಗರದಲ್ಲಿ ಬೀಟ್ ಹಾಕುತ್ತ ಕಸ ಎಸೆಯುವವರ ಮೇಲೆ ನಿಗಾ ಇರಿಸಲಿದ್ದಾರೆ. ಅಲ್ಲದೆ ಇವರಿಗೆ ನಗರದಲ್ಲಿ ಗಸ್ತು ತಿರುಗಲು ಪಾಲಿಕೆ ದ್ವಿಚಕ್ರ ವಾಹನ ಕೂಡ ನೀಡಲಿದ್ದೇವೆ. ಇನ್ನು ಆರೋಗ್ಯಾಧಿಕಾರಿ ನೇತೃತ್ವದಲ್ಲಿ ದಂಡ ಹಾಕುವ ಅಧಿಕಾರವನ್ನೂ ಅವರಿಗೆ ನೀಡುವ ಬಗ್ಗೆ ಚಿಂತನೆ ನಡೆಯುತ್ತಿದೆ" ತಿಳಿಸಿದರು.

ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಡೆಯಲು ದಾವಣಗೆರೆ ಮಹಾನಗರ ಪಾಲಿಕೆಯಿಂದ ಮಾರ್ಷಲ್​ಗಳ ನೇಮಕಕ್ಕೆ ಚಿಂತನೆ (ETV Bharat)

ಮಾರ್ಷಲ್ ನೇಮಕಾತಿಗಾಗಿ ಸಾಮಾನ್ಯ ಸಭೆಯಲ್ಲೂ ಚರ್ಚೆ: "ಮಾರ್ಷಲ್ ನೇಮಕಾತಿ ಬಗ್ಗೆ ಈಗಾಗಲೇ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿದೆ. ಕಾರ್ಮಿಕ ಕಾಯ್ದೆಯ ಪ್ರಕಾರ ಅವರಿಗೆ, ಭವಿಷ್ಯ ನಿಧಿ, ಸಂಬಳ, ಸೇರಿದಂತೆ ಇತರ ಸೌಲಭ್ಯಗಳನ್ನು ನೀಡಲಾಗುವುದು. ಮನೆ ಮುಂದೆ ಪಾಲಿಕೆ ಕಸದ ವಾಹನ ಹೋದರೂ ಕಸ ಹಾಕದೆ, ಜನ ಬೀದಿಯಲ್ಲಿ ಕಸ ಎಸೆಯುತ್ತಿದ್ದಾರೆ. ಮಾರ್ಷಲ್​ಗಳು ಕಸ ಹಾಕುವವರಿಗೆ ಸ್ಪಾಟಲ್ಲೇ ದಂಡ ಜಡಿಯುವ ಕೆಲಸ ಮಾಡಲಿದ್ದಾರೆ. ಮೊದಲ ಬಾರಿಗೆ ಕಸ ಹಾಕಿದ್ರೆ 500, ಎರಡನೇ ಬಾರಿಗೆ 1000 ರೂ., ಮೂರನೇ ಬಾರಿಗೆ 2000 ರೂ. ದಂಡ ವಿಧಿಸಲಾಗುವುದು. ಎಲ್ಲಾ ಕಡೆ ಸ್ವಚ್ಛ ಮಾಡಿದ್ರು ಕೂಡ ಬೆಳಗಾಗುವಷ್ಟರಲ್ಲಿ ಕಸ ಹಾಕಿರುತ್ತಾರೆ. ಹಾಗಾಗಿ ಈ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ" ಎಂದು ವಿವರಿಸಿದರು.‌

ಇಲ್ಲಿತನಕ 6,500 ಜನರಿಂದ, 17 ಲಕ್ಷ ರೂ. ದಂಡ ವಸೂಲು: ಈಗಾಗಲೇ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಕಸ ಎಸೆದವರಿಗೆ ದಂಡ ವಿಧಿಸಲಾಗುತ್ತಿದೆ.‌ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಇಲ್ಲಿ ತನಕ ಒಟ್ಟು 6,500 ಜನರಿಗೆ ದಂಡ ವಿಧಿಸಲಾಗಿದೆ. ಎಲ್ಲೆಂದರಲ್ಲಿ ಕಸ ಹಾಕುತ್ತಿದ್ದವರಿಗೆ ಸ್ಪಾಟ್ ಫೈನ್ ಹಾಕಿ ಬಿಸಿ ಮುಟ್ಟಿಸುತ್ತಿದ್ದೇವೆ. ಅದರೂ ಕಸ ಎಸೆಯುವುದು ಕಡಿಮೆ‌ ಆಗಿಲ್ಲ. ಕಸ ಎಸೆಯುವವರಿಗೆ, ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳದಿದ್ದವರಿಗೆ ದಂಡ ವಿಧಿಸುತ್ತಿದ್ದೇವೆ. ಜನವರಿಯಿಂದ ಅಕ್ಟೋಬರ್ ತನಕ ಒಟ್ಟು 6,500 ಜನರಿಗೆ ಸ್ಪಾಟ್ ಫೈನ್ ಹಾಕಿದ್ದು, 17 ಲಕ್ಷ ರೂ. ದಂಡ ವಸೂಲು ಮಾಡಿದ್ದೇವೆ" ಎಂದು ಎಂದು ಪಾಲಿಕೆ ಆಯುಕ್ತೆ ರೇಣುಕಾ ಮಾಹಿತಿ ನೀಡಿದರು.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಕಸ ಸಂಗ್ರಹಿಸುವ ಮಹಿಳೆಗೆ ಒಲಿಯಿತು ನಗರಸಭೆ ಉಪಾಧ್ಯಕ್ಷೆ ಸ್ಥಾನ - Garbage collector woman now VP

Last Updated : Nov 2, 2024, 7:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.