ETV Bharat / state

ಮುಡಾ ಹಗರಣ ಡೈವರ್ಟ್ ಮಾಡಲು ದರ್ಶನ್​ ಜೈಲು ಫೋಟೋ ವೈರಲ್: ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ - Union Minister Pralhad Joshi - UNION MINISTER PRALHAD JOSHI

ಮುಡಾ ಹಾಗೂ ವಾಲ್ಮೀಕಿ ಹಗರಣದ ವಿಷಯ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿದ್ದಂತೆ, ಅದನ್ನು ಡೈವರ್ಟ್​ ಮಾಡಲು ದರ್ಶನ್​ ಅವರಿಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ದೊರೆಯುತ್ತಿರುವ ಫೋಟೋವನ್ನು ವೈರಲ್​ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪಹ್ಲಾದ್​ ಕಾಂಗ್ರೆಸ್​ ವಿರುದ್ಧ ಆರೋಪಿಸಿದ್ದಾರೆ.

Union Minister Pralhad Joshi
ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ (ETV Bharat)
author img

By ETV Bharat Karnataka Team

Published : Sep 6, 2024, 8:34 PM IST

ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ (ETV Bharat)

ಹುಬ್ಬಳ್ಳಿ: "ಮುಡಾ ಹಗರಣ ಹಾಗೂ ವಾಲ್ಮೀಕಿ ಹಗರಣವನ್ನು ಡೈವರ್ಟ್ ಮಾಡುವ ಹಾಗೂ ಮಾಧ್ಯಮ ಮುಂದೆ ಮುಡಾ ಹಗರಣದಿಂದ ತಪ್ಪಿಸಿಕೊಳ್ಳುವ ದುರಾಲೋಚನೆಯಿಂದ ದರ್ಶನ್​ ಫೋಟೋ ವೈರಲ್ ಮಾಡುವ ನಾಟಕವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ" ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಕಿಡಿ ಕಾರಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, "ಪರಪ್ಪನ ಅಗ್ರಹಾರ ಜೈಲಿನೊಳಗಿದ್ದ ದರ್ಶನ್​ ಫೋಟೋ ಹೊರಗಡೆ ಬಿಟ್ಟಿರುವುದು ಕೂಡ ರಾಜ್ಯ ಸರ್ಕಾರವೇ. ದರ್ಶನ ಪ್ರಕರಣ ಸಾಕಷ್ಟು ಚರ್ಚೆಗೆ ಬಂದಿದ್ದ ವಿಷಯವಾಗಿತ್ತು. ಮುಡಾ, ವಾಲ್ಮೀಕಿ ಪ್ರಕರಣಗಳು ಮುನ್ನೆಲೆ ಬಂದಾಗಲೂ ಎಲ್ಲಾ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಗೆಯಾಗಿತ್ತು. ಇದನ್ನು ಡೈವರ್ಟ್ ಮಾಡಲು ಇಂತಹದೊಂದು ಫೋಟೋ ವೈರಲ್ ಮಾಡುವ ಕಾರ್ಯವನ್ನು ಸರ್ಕಾರ ಮಾಡಿದೆ" ಎಂದರು.

"ದರ್ಶನ್​ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಕೊಟ್ಟಿರುವ ದಾಖಲೆಯನ್ನು ಬಹಿರಂಗ ಪಡಿಸುವ ಕಾರ್ಯವನ್ನು ಸರ್ಕಾರ ಮಾಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಕಳ್ಳತನ ಬಯಲಿಗೆ ಬಂದಾಗ ಕೋವಿಡ್ ನೆನಪಾಗಿದೆ: "ನಾವು ಕಾಂಗ್ರೆಸ್ಸಿನವರ ಕಳ್ಳತನ ಪ್ರಕರಣ ಬಯಲಿಗೆ ತಂದಿದ್ದೇವೆ. ಆದರೆ ಕಾಂಗ್ರೆಸ್ಸಿಗರು, ತಮ್ಮ ಕಳ್ಳತನ ಮುಚ್ಚಿ ಹಾಕಲು ಬೇರೆಯವರನ್ನು ಕಳ್ಳರು ಎಂದು ಬಿಂಬಿಸಲು ಕೋವಿಡ್ ಸ್ಕ್ಯಾಮ್ ಅಂತ ಬಿಂಬಿಸುತ್ತಿದ್ದಾರೆ. ಒಂದೂವರೆ ವರ್ಷ ಬಿಟ್ಟು ಈಗ ಯಾಕೆ ಕೋವಿಡ್ ಹಗರಣದ ತನಿಖೆ?" ಎಂದು ಪ್ರಶ್ನಿಸಿದರು.

"ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾಗಿದೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ವರದಿಯನ್ನು ಹೊರಗೆ ಬಿಟ್ಟಿದ್ದಾರೆ. 2021-22 ರ ವರದಿ ಇದಾಗಿದೆ. ಇಲ್ಲಿಯವರೆಗೂ ಯಾಕೆ ಬಿಡುಗಡೆ ಮಾಡಿರಲಿಲ್ಲ? ನೀವು ಕಳ್ಳತನ ಮಾಡಿದಾಗ ನಿಮ್ಮನ್ನು ಹಿಡಿದಾಗ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಯತ್ನ. ಅವರೂ ಕಳ್ಳತನ ಮಾಡಿದ್ದಾರೆ ಅಂತ ಬಿಂಬಿಸಿ ಬಚಾವಾಗುವ ಯತ್ನ" ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಇದೆಲ್ಲ ನಡೆಯೋದಿಲ್ಲ. ಅವರು ಏನು ತನಿಖೆ ಮಾಡ್ತಾರೋ ಮಾಡಲಿ. ಹಿಂದೆ ಆರೋಗ್ಯ ಸಚಿವರಾಗಿದ್ದ ಸುಧಾಕರ್ ಅವರೇ ಏನು ಬೇಕಾದರೂ ತನಿಖೆ ಮಾಡಿ ನನಗೇನು ಭಯ ಇಲ್ಲ ಅಂತ ಹೇಳಿದ್ದಾರೆ. ವಿಜಯೇಂದ್ರ, ಅಶೋಕ್​ ಅವರೂ ತನಿಖೆ ಮಾಡಲಿ ಅಂದಿದ್ದಾರೆ. ಜನಾರ್ದನ್ ರೆಡ್ಡಿ ಪ್ರಕರಣದಿಂದ ಹಿಡಿದು ಎಲ್ಲವೂ ಮುಡಾ ಹಗರಣ ಆದ ನಂತರ ಶುರುವಾಗಿವೆ" ಎಂದು ಹೇಳಿದರು.

ರಾಜ್ಯ ಸರ್ಕಾರದವರು ಪ್ರಧಾನಿ ಬಳಿ ನಿಯೋಗ ಬರಲಿ: ಮಹದಾಯಿ ವಿಚಾರದಲ್ಲಿ ರಾಜ್ಯ ಸರ್ಕಾರದವರು ಪ್ರಧಾನಿ ಬಳಿ ನಿಯೋಗ ಬರುವುದಾದರೆ ಮುಕ್ತ ಸ್ವಾಗತ ಎಂದು ಇದೇ ವೇಳೆ ಪ್ರಲ್ಹಾದ್​ ಜೋಶಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ನಿಯೋಗ ಬರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಒಂದು ವೇಳೆ ಬಂದರೆ ಸ್ವಾಗತಿಸುತ್ತೇವೆ. ಈ ವಿಚಾರದಲ್ಲಿ ಸರ್ವ ರೀತಿಯಲ್ಲೂ ರಾಜ್ಯಕ್ಕೆ ಸಹಾಯ ಮಾಡಲು ಕೇಂದ್ರ ಸಿದ್ಧವಿದೆ. ಸಚಿವ ಭೂಪೇಂದ್ರ ಯಾದವ್ ಅವರೊಂದಿಗೆ ಚರ್ಚೆ ಮಾಡುತ್ತೇವೆ ಎಂದರು.

ಕಾಂಗ್ರೆಸ್ ಏನೂ ಮಾಡಿಲ್ಲ: ಮಹದಾಯಿ ಕುರಿತಂತೆ ಕಾಂಗ್ರೆಸ್ ಏನೂ ಪ್ರಯತ್ನ ಮಾಡಿಲ್ಲ. ರಾಜ್ಯ ಹಾಗೂ ಗೋವಾದಲ್ಲಿ ಅವರದ್ದೇ ಸರ್ಕಾರ ಇದ್ದಾಗಲೂ ಕಾಂಗ್ರೆಸ್​ನವರು ಏನೂ ಮಾಡಿಲ್ಲ ಎಂದು ಜೋಶಿ ಆರೋಪಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲೇ ಎಲ್ಲವೂ ಆಗಿದೆ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಹದಾಯಿಗೆ ಪ್ರಯತ್ನ ನಡೆದಿದೆ. ನ್ಯಾಯಾಧಿಕರಣ, ಕಚೇರಿ, ಸಿಬ್ಬಂದಿ ನೇಮಕ, ಗೆಜೆಟ್ ನೊಟಿಫಿಕೇಷನ್, DPR ಅನುಮೋದನೆ ಹೀಗೆ ಪ್ರತಿಯೊಂದೂ ಬಿಜೆಪಿ ಅವಧಿಯಲ್ಲೇ ಆಗಿದೆ. ಮಹದಾಯಿ ಅರಣ್ಯ ಭೂಮಿ ವ್ಯಾಪ್ತಿಯಲ್ಲಿ ಬರುವುದರಿಂದ ಈಗ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅನುಮತಿ ಬೇಕಿದೆ. ಇದಕ್ಕಾಗಿ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.

ಇದನ್ನೂ ಓದಿ: ರಾಜೀನಾಮೆ ಕೊಡುವ ಪರಿಸ್ಥಿತಿ ಅರಗಿಸಿಕೊಳ್ಳಲಾಗದೇ ಬಿಜೆಪಿ ವಿರುದ್ಧ ಪಿತೂರಿ: ಬಿ.ವೈ. ವಿಜಯೇಂದ್ರ ಆರೋಪ - B Y VIJAYENDRA reaction on congress

ETV Bharat Logo

Copyright © 2024 Ushodaya Enterprises Pvt. Ltd., All Rights Reserved.