ETV Bharat / state

ನಿರ್ಮಾಪಕ ಉಮಾಪತಿ ಗೌಡ ಕುರಿತು ಅವಹೇಳನ ಆರೋಪ: ದರ್ಶನ್ ಅಭಿಮಾನಿಯ ಬಂಧನ - Darshan fan Arrest - DARSHAN FAN ARREST

ಉಮಾಪತಿ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ದರ್ಶನ್​ ಅವರ ಅಭಿಮಾನಿ ಚೇತನ್​ ಎಂಬುವವನನ್ನು ಪೊಲೀಸರು ಬಂಧಿಸಿದ್ದಾರೆ.

Darshan fan Chethan
ದರ್ಶನ್​ ಅಭಿಮಾನಿ ಬಂಧನ (ETV Bharat)
author img

By ETV Bharat Karnataka Team

Published : Jun 25, 2024, 2:09 PM IST

ಬೆಂಗಳೂರು: ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ‌ ಬಂಧನದಲ್ಲಿರುವ ನಟ ದರ್ಶನ್ ಅವರ ಅಭಿಮಾನಿಗಳನ್ನು ಪ್ರಚೋದಿಸುತ್ತಿದ್ದ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದಲ್ಲಿ ಚೇತನ್ ಎಂಬಾತನನ್ನು ಬಸವೇಶ್ವರ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಅವರ ಕುರಿತು ನಿರ್ಮಾಪಕ ಉಮಾಪತಿ ಗೌಡ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು. ಉಮಾಪತಿಯವರ ಪ್ರತಿಕ್ರಿಯೆಯನ್ನು ವಿರೋಧಿಸಿದ್ದ ಚೇತನ್, ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದ. ಅಲ್ಲದೇ ಉಮಾಪತಿ ಅವರ ವಿರುದ್ಧ ದರ್ಶನ್ ಅಭಿಮಾನಿಗಳನ್ನು ಪ್ರಚೋದಿಸುವಂತೆ ಮಾತನಾಡಿದ್ದ. ಈ ಬಗ್ಗೆ ನಿರ್ಮಾಪಕ ಉಮಾಪತಿ ಗೌಡ ದೂರು ನೀಡಿದ್ದರು. ಸದ್ಯ ಬಸವೇಶ್ವರ ನಗರ ಠಾಣಾ ಪೊಲೀಸರು ಆರೋಪಿ ಚೇತನ್​ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ದರ್ಶನ್ ಪ್ರಕರಣದ ಬಗ್ಗೆ ನಿರ್ಮಾಪಕ ಉಮಾಪತಿ ಹೇಳಿದ್ದೇನು? - Umapathy on Darshan case

ETV Bharat Logo

Copyright © 2025 Ushodaya Enterprises Pvt. Ltd., All Rights Reserved.