ETV Bharat / state

ವಕ್ಫ್ ಹೆಸರಲ್ಲಿ ಕಾಂಗ್ರೆಸ್‌ನಿಂದ ಒಡೆದು ಆಳುವ ನೀತಿ: ಆರ್.ಅಶೋಕ್ - WAQF DEBATE IN SESSION

ಅಧಿವೇಶನದ ವೇಳೆ ವಕ್ಫ್​ ಪ್ರಕರಣ ಕುರಿತು ಚರ್ಚೆ ಪ್ರಾರಂಭಿಸಿದ ಆಡಳಿತ ಹಾಗೂ ವಿಪಕ್ಷ ನಾಯಕರು ಕೊನೆಗೆ ಸವಾಲಿಗೆ ಪ್ರತಿ ಸವಾಲು ಹಾಕಿಕೊಂಡರು.

Opposition leader R Ashok
ವಿಪಕ್ಷ ನಾಯಕ ಆರ್​. ಅಶೋಕ್​ (ETV Bharat)
author img

By ETV Bharat Karnataka Team

Published : Dec 13, 2024, 7:52 PM IST

ಬೆಳಗಾವಿ: "ಕಾಂಗ್ರೆಸ್​ನವರು ವಕ್ಫ್ ಹೆಸರಲ್ಲಿ ಹಿಂದೂ ಮುಸ್ಲಿಮರನ್ನು ಒಡೆಯುತ್ತಿದ್ದಾರೆ. ಕಾಂಗ್ರೆಸ್ ಒಡೆದಾಳುವ ನೀತಿ ಅನುಸರಿಸುತ್ತಿದೆ" ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.‌

ಸುವರ್ಣಸೌಧದಲ್ಲಿಂದು ನಿಯಮ 69 ಅಡಿಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, "ಹಿಂದೂಗಳ ಆಸ್ತಿಯನ್ನು ಕಾಂಗ್ರೆಸ್ ಒಡೆಯುತ್ತಿದೆ. ಸಮಾಜದಲ್ಲಿ ಕಾಂಗ್ರೆಸ್ ವಕ್ಫ್ ಮೂಲಕ ಸಾಮರಸ್ಯ ಕೆಡಿಸುತ್ತಿದೆ. ವಕ್ಫ್ ನೋಟಿಸ್, ಪಹಣಿ ಗೊಂದಲ ನಿವಾರಣೆ ಮಾಡಬೇಕು. ಆಯಾಯ ರೈತರ ಹೆಸರಿಗೆ ಮತ್ತೆ ಪಹಣಿ ಬದಲಾವಣೆ ಆಗಬೇಕು. 1974 ರ ವಕ್ಫ್ ಗೆಜೆಟ್ ಅಧಿಸೂಚನೆ ವಾಪಾಸು ಪಡೆಯಬೇಕು. ಕೇಂದ್ರದ ವಕ್ಫ್ ತಿದ್ದುಪಡಿ ನಿಯಮಾವಳಿಗಳನ್ನು ನಮ್ಮ ರಾಜ್ಯ ಸರಳ ಬಹುಮತದಲ್ಲಿ ಪಾಸ್ ಮಾಡಬೇಕು" ಎಂದು ಒತ್ತಾಯಿಸಿದರು.

ವಕ್ಫ್​ನಿಂದ ರೈತರಿಗೆ ನೋಟಿಸ್ ವಿಚಾರವಾಗಿ ಸದನದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ವಿರೋಧ ಪಕ್ಷದ ನಾಯಕ ಆರ್.‌ಅಶೋಕ್ ನಡುವೆ ವಾಕ್ಸಮರ ನಡೆಯಿತು. ವಿರೋಧ ಪಕ್ಷದ ನಾಯಕ ಆರ್.ಅಶೋಕ್, "ವಕ್ಫ್ ಬೋರ್ಡ್ ನೋಟಿಸ್ ಕೊಟ್ಟಿರೋದು ತಪ್ಪಿಲ್ಲ ಅಂದರೆ ನಾನು ಪ್ರತಿಪಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಗೆ ನಿಲ್ಲುತ್ತೇನೆ. ಬೇಕಿದ್ರೆ ಸ್ಪೀಕರ್ ನನಗೆ ಛೀಮಾರಿ ಹಾಕಲಿ" ಎಂದು ಸವಾಲು ಹಾಕಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಜಮೀರ್ ಅಹ್ಮದ್ ಖಾನ್ ಪ್ರತಿ ಸವಾಲು ಹಾಕಿದರು. "101 ನೋಟಿಸ್ ಕೊಟ್ಟಿದ್ದಾರೆ ಅಂದ್ರಲ್ಲ, ಅದಕ್ಕೆ ದಾಖಲೆ ಕೊಡಿ. ಇವಾಗ್ಲೇ ನಾನು ನನ್ನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ" ಎಂದು ಜಮೀರ್ ಅಹ್ಮದ್ ಹೇಳಿದರು.

"ಲವ್ ಜಿಹಾದ್ ಆಯ್ತು, ಇದೀಗ ಲ್ಯಾಂಡ್ ಜಿಹಾದ್ ನಡೆಯುತ್ತಿದೆ. ವಕ್ಫ್ ಹಗರಣದಿಂದ ಜನರು ಭಯಭೀತರಾಗಿದ್ದಾರೆ. ವಕ್ಫ್ ಬೋರ್ಡ್ ಅವಾಂತರದಿಂದ ಗೋಮಾಳ, ಸ್ಮಶಾನ, ಪಿತ್ರಾರ್ಜಿತ ಆಸ್ತಿ ಪಹಣಿ ಬದಲಾವಣೆ ಆಗಿದೆ. ಕಂಡ ಕಂಡ ಆಸ್ತಿಯೆಲ್ಲಾ ನಮ್ಮದೆಂದು ಹೇಳಲಾಗುತ್ತಿದೆ‌. ಪಹಣಿ ರಾತ್ರೋ ರಾತ್ರಿ ಬದಲಾವಣೆ ಆಗ್ತಿದೆ. ರೈತಾಪಿ ವರ್ಗ ಆತಂಕದಲ್ಲಿದೆ. ಜಮೀನೇ ಇಲ್ಲ ಅಂದರೆ ಏನು ಮಾಡಬೇಕು?‌ ಯಾಕಾಗಿ ಈ ಸರ್ಕಾರ ಬಂತೋ ಎಂದು ಜನ ಭಾವಿಸುತ್ತಿದ್ದಾರೆ. ವಕ್ಫ್ ಆಸ್ತಿ ಅತಿಕ್ರಮಣ ಆಗಿದೆ ಎಂದು ಜನರು ಸರ್ಕಾರಿ ಕಚೇರಿ ಮುಂದೆ ಕ್ಯೂ ನಿಂತಿದ್ದಾರೆ‌" ಎಂದು ಅಶೋಕ್​ ಹೇಳಿದರು.

ವಕ್ಫ್ ಎನ್ನುವ ಪದ ಕುರಾನ್​ನಲ್ಲಿ ಇಲ್ಲ. ಓರ್ವ ಮುಸ್ಲಿಮನ ಸ್ವಯಾರ್ಜಿತ ಆಸ್ತಿಯನ್ನು ದೇವರ ಹೆಸರಿನಲ್ಲಿ ಅರ್ಪಿಸುವುದನ್ನು ವಕ್ಫ್ ಎನ್ನುತ್ತಾರೆ. 1913 ರಲ್ಲಿ ಭಾರತದಲ್ಲಿ ಮೊದಲ ಬಾರಿ ವಕ್ಫ್ ಬೋರ್ಡ್ ರಚನೆ ಆಯ್ತು. 1923 ರಲ್ಲಿ ಮುಸ್ಲಿಂ ವಕ್ಫ್ ಆ್ಯಕ್ಟ್ ಜಾರಿಗೆ ಬಂತು. ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದವರ ಜಮೀನನ್ನು ಸರ್ಕಾರ ವಶಕ್ಕೆ ತೆಗೆದುಕೊಂಡಿತು. ಆದರೆ, ಭಾರತದಿಂದ ವಲಸೆ ಹೋದವರ ಜಮೀನು ವಕ್ಫ್​ಗೆ ನೀಡಲಾಯಿತು. ಇಲ್ಲಿಂದ ತಾರತಮ್ಯ ಶುರುವಾಯ್ತು. ಅದಕ್ಕೆ ಇವತ್ತಿಗೂ ಬೆಲೆ ತೆರುತ್ತಿದ್ದೇವೆ" ಎಂದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆ, 133 ಮಂದಿ ಸಾವು: ಕೃಷ್ಣ ಬೈರೇಗೌಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.