ETV Bharat / state

ಇಡಿ ದಾಳಿ: ಸರ್ಕಾರ ಮಧ್ಯ ಪ್ರವೇಶಿಸಲ್ಲ - ಸಿಎಂ ಸಿದ್ದರಾಮಯ್ಯ - ED attack on Nagendra house

author img

By ETV Bharat Karnataka Team

Published : Jul 10, 2024, 5:00 PM IST

ಸಿಎಂ ಸಿದ್ದರಾಮಯ್ಯ ಮಾಜಿ ಸಚಿವ ನಾಗೇಂದ್ರ ಮನೆಯ ಮೇಲೆ ಇಡಿ ದಾಳಿ ಕುರಿತು ಮಾತನಾಡಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

cm-siddaramaiah
ಸಿಎಂ ಸಿದ್ದರಾಮಯ್ಯ (ETV Bharat)
ಸಿಎಂ ಸಿದ್ದರಾಮಯ್ಯ (ETV Bharat)

ಮೈಸೂರು : ಮಾಜಿ ಸಚಿವ ನಾಗೇಂದ್ರ ಮನೆಯ ಮೇಲೆ ಇಡಿ ದಾಳಿ ವಿಚಾರದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಅವರು ಅವರ ಕೆಲಸವನ್ನ ಕಾನೂನು ಪ್ರಕಾರ ಮಾಡಲಿ ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಇಂದು ಬೆಳಗ್ಗೆ ಮಾಜಿ ಸಚಿವ ನಾಗೇಂದ್ರ ಹಾಗೂ ಮತ್ತೊಬ್ಬ ಶಾಸಕನ ಮನೆಯ ಮೇಲೆ ಇಡಿ ರೇಡ್ ಆಗಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ಇಡಿ ಅವರ ಕೆಲಸ ಮಾಡಲಿ. ನಾವು ಮಧ್ಯ ಪ್ರವೇಶ ಮಾಡುವುದಿಲ್ಲ. ಆದರೆ, ಅವರು ಕಾನೂನು ಪ್ರಕಾರ ಕೆಲಸ ಮಾಡಲಿ ಎಂದು ಹೇಳಿದರು.

ಕ್ಯಾಬಿನೆಟ್​ನಲ್ಲಿ ಇಟ್ಟು ತೀರ್ಮಾನ : ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರು ಬದಲಾಯಿಸಿದೆ ಎಂದು ನಿನ್ನೆ ಡಿ. ಕೆ ಶಿವಕುಮಾರ್ ನೇತೃತ್ವದಲ್ಲಿ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಮುಖಂಡರು ಆಗಮಿಸಿದರು. ಅವರು ರಾಮನಗರವನ್ನ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಾವಣೆ ಮಾಡಿ ಎಂಬ ಬಗ್ಗೆ ಮನವಿ ಸಲ್ಲಿಸಿದ್ದಾರೆ. ನಾನು ಇದನ್ನ ಕ್ಯಾಬಿನೆಟ್​ನಲ್ಲಿ ಇಟ್ಟು ತೀರ್ಮಾನ ಮಾಡುವುದಾಗಿ ಹೇಳಿದ್ದೇನೆ ಎಂದರು.

ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮಾಡಿದರೆ ನಾವು ಅಧಿಕಾರಕ್ಕೆ ಬಂದರೆ ಪುನಃ ಅದನ್ನ ಕಿತ್ತುಹಾಕಿ ರಾಮನಗರ ಜಿಲ್ಲೆ ಮಾಡುತ್ತೇನೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಅಧಿಕಾರಕ್ಕೆ ಬಂದ್ರೆ ತಾನೆ ಕಿತ್ತು ಹಾಕುವುದು, ಇವರಿಗೆ ಜನ ಆರ್ಶೀವಾದ ಮಾಡುವುದಿಲ್ಲ. ಇನ್ನು ಹೆಸರನ್ನ ಕಿತ್ತುಹಾಕಲು ಹೇಗೆ ಸಾಧ್ಯ?. ನಮಗೆ ಜನ ಆರ್ಶೀವಾದ ಮಾಡಿದ್ದಾರೆ. ಆದ್ದರಿಂದ ನಾನು ಸಿಎಂ ಆಗಿದ್ದೇನೆ ಎಂದರು.

ನನ್ನ ಹೆಂಡತಿ ಹೆಸರಿನಲ್ಲಿ ವಿವಾದ ಮಾಡುತ್ತಿದ್ದಾರೆ : ಮುಡಾ ಹಗರಣಗಳ ಬಗ್ಗೆ ಕೇಳುತ್ತಿದ್ದಂತೆ ಗರಂ ಆದ ಸಿದ್ದರಾಮಯ್ಯ, ಮುಡಾ ವಿಚಾರದಲ್ಲಿ ನನ್ನ ಹೆಂಡತಿ ವಿಚಾರವನ್ನ ಇಟ್ಟುಕೊಂಡು ವಿವಾದ ಮಾಡುತ್ತಿದ್ದಾರೆ. ನಾವು ಅವರಿಗೆ ವಿಜಯನಗರದಲ್ಲಿ ಸೈಟ್ ಕೊಡಿ ಎಂದು ಕೇಳಿಲ್ಲ ಎಂದು ಹೇಳಿದರು.

ಮುಡಾದವರು ನಮ್ಮ ಜಮೀನನ್ನ ನಿಯಮಬಾಹಿರವಾಗಿ ಭೂ ಸ್ವಾದೀನ ಮಾಡಿಕೊಂಡಿದ್ದಾರೆ. ಅದಕ್ಕೆ ತಪ್ಪಾಯಿತು ಎಂದು ಬದಲಿ ನಿವೇಶನ ಕೊಟ್ಟಿದ್ದಾರೆ. ಇದರಲ್ಲಿ ವಿವಾದ ಯಾಕೆ ಬಂತು. ರಾಜಕೀಯಕ್ಕಾಗಿ ಬಿಜೆಪಿಯವರು ಈ ವಿಷಯವನ್ನು ವಿವಾದ ಮಾಡಿ ಪ್ರತಿಭಟನೆ, ಮುತ್ತಿಗೆ ಹಾಕುತ್ತೇನೆ ಎಂದು ಹೇಳುತ್ತಿದ್ದಾರೆ ಅಷ್ಟೇ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

ಮುಡಾ ಅಕ್ರಮಗಳ ಬಗ್ಗೆ ಇಬ್ಬರು ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ತನಿಖಾ ವರದಿ ಬಂದ ನಂತರ ತಪ್ಪಾಗಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದ ಸಿದ್ದರಾಮಯ್ಯ, ಈ ವಿಚಾರದಲ್ಲಿ ನಮ್ಮ ಪೊಲೀಸರು ಹಾಗೂ ಅಧಿಕಾರಿಗಳು ತನಿಖೆ ನಡೆಸಲು ಸಮರ್ಥರಿದ್ದಾರೆ. ಆದ್ದರಿಂದ ಮುಡಾ ಹಗರಣವನ್ನ ಸಿಬಿಐಗೆ ವಹಿಸುವುದಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯ ಬಗ್ಗೆ ‌ಮೀಸಲಾತಿ ನಿರ್ಣಯ ಆದ ಮೇಲೆ ಕೋರ್ಟ್ ಆದೇಶದಂತೆ ಚುನಾವಣೆ ನಡೆಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಹೇಳಿಕೆ ನೀಡಿದರು.

ಇದನ್ನೂ ಓದಿ : ಜಿಲ್ಲೆಯ ಹೆಸರು ಬದಲಾವಣೆ ಕೂಗು, ಪ್ರತಿಪಕ್ಷಗಳ ವಿರೋಧ: ರಾಜಕೀಯ ಹಗ್ಗಜಗ್ಗಾಟಕ್ಕೆ ಕಾರಣವಾದ ರಾಮನಗರದ ಇತಿಹಾಸವೇನು? - Ramanagara District Name change

ETV Bharat Logo

Copyright © 2024 Ushodaya Enterprises Pvt. Ltd., All Rights Reserved.