ETV Bharat / bharat

ತಿಹಾರ್ ಜೈಲಿನಲ್ಲಿ ಗ್ಯಾಂಗ್ ವಾರ್: ಇಬ್ಬರು ಕೈದಿಗಳ ಸ್ಥಿತಿ ಗಂಭೀರ, ತಲೆಬಿಸಿಯಾದ ವಿವಿಐಪಿ ಕೈದಿಗಳ ಸುರಕ್ಷತೆ - Gang War

ದೆಹಲಿಯ ತಿಹಾರ್ ಜೈಲಿನಲ್ಲಿ ಇಬ್ಬರು ಕೈದಿಗಳ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಇಬ್ಬರೂ ಕೈದಿಗಳನ್ನು ಸದ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದೆಹಲಿ ಸಿಎಂ ಸೇರಿದಂತೆ ದೊಡ್ಡ ದೊಡ್ಡ ವ್ಯಕ್ತಿಗಳು ಹೆಚ್ಚಾಗಿರುವ ಈ ಜೈಲಿನಲ್ಲಿ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿರುವುದರಿಂದ ಭದ್ರತಾ ವ್ಯವಸ್ಥೆ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

TIHAR JAIL
ದೆಹಲಿಯ ತಿಹಾರ್ ಜೈಲು (ETV Bharat)
author img

By ETV Bharat Karnataka Team

Published : Jul 27, 2024, 5:12 PM IST

ದೆಹಲಿಯ: ಇಲ್ಲಿನ ತಿಹಾರ್ ಜೈಲಿನಲ್ಲಿ ಇಂದು ಮತ್ತೆ ಗ್ಯಾಂಗ್ ವಾರ್ ನಡೆದಿದೆ. ತನ್ನ ಸಹೋದರನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು, ಒಬ್ಬ ಕೈದಿ ತನ್ನ ಸಹಚರರೊಂದಿಗೆ ಸೇರಿ ತಿಹಾರ್‌ನಲ್ಲಿ ಇಬ್ಬರು ಕೈದಿಗಳ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ದಾಳಿಯಲ್ಲಿ ಇಬ್ಬರು ಕೈದಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ವಿವಿಐಪಿಗಳು ಹೆಚ್ಚಾಗಿರುವ ಈ ಜೈಲಿನಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದರಿಂದ ಭದ್ರತಾ ವ್ಯವಸ್ಥೆ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

ಲವ್ಲಿ ಮತ್ತು ಲವಿಶ್ ಎಂಬ ಕೈದಿಗಳ ಮೇಲೆ ಚಾಕುವಿನಿಂದ ಈ ಹಲ್ಲೆ ನಡೆದಿದ್ದು, ಕೈದಿ ಲೋಕೇಶ್ ತನ್ನ ಇಬ್ಬರು ಸಹಚರರೊಂದಿಗೆ ಸೇರಿ ಈ ದಾಳಿ ನಡೆಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಹಲ್ಲೆಯಿಂದ ಗಾಯಗೊಂಡಿರುವ ಲವ್ಲಿ ಮತ್ತು ಲವಿಶ್ ಅವರನ್ನು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

2020ರಲ್ಲಿ ಲೋಕೇಶನ ಸಹೋದರ ವಿನಯ್ ಎಂಬ ವ್ಯಕ್ತಿಯನ್ನು ಕೊಲೆ ಮಾಡಿರುವ ಆರೋಪದ ಹಿನ್ನೆಲೆ ಲವ್ಲಿ ಮತ್ತು ಲವಿಶ್ ಜೈಲು ಸೇರಿದ್ದರು. ಲೋಕೇಶ್ ಕೂಡ ಯಾವುದೋ ಪ್ರಕರಣದಲ್ಲಿ ಬಂಧಿತನಾಗಿ ತಿಹಾರ್ ಜೈಲಿಗೆ ಬಂದಿದ್ದು, ಅಂದಿನಿಂದ ಅಣ್ಣನ ಸಾವಿಗೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದ. ಅವಕಾಶ ಸಿಕ್ಕ ತಕ್ಷಣ ತನ್ನ ಸಹಚರರಾದ ಅಭಿಷೇಕ್ ಮತ್ತು ಹಿಮಾಂಶು ಜೊತೆಗೂಡಿ ದಾಳಿ ನಡೆಸಿದ್ದಾನೆ. ಇಂದಿನ ದಾಳಿ ಭದ್ರತಾ ವ್ಯವಸ್ಥೆ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

ಜೈಲಿನಲ್ಲಿ ಇಂತಹ ದಾಳಿಗಳು ನಡೆದಿರುವುದು ಇದೇ ಮೊದಲೇನೂ ಅಲ್ಲ. ಇದಕ್ಕೂ ಮೊದಲು, ಜೈಲು ಸಂಖ್ಯೆ 3ರಲ್ಲಿ ಎರಡು ಗ್ಯಾಂಗ್‌ ಕೈದಿಗಳು ಪರಸ್ಪರ ಹೊಡೆದಾಡಿಕೊಂಡಿದ್ದರು. ಇದರಲ್ಲಿ ನಾಲ್ವರು ಕೈದಿಗಳು ಗಾಯಗೊಂಡಿದ್ದರು.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿ ಹಲವು ವಿವಿಐಪಿಗಳು ಇಲ್ಲಿ ಬಂಧಿಯಾಗಿರುವ ಕಾರಣ ಈ ದಾಳಿ ಚರ್ಚೆಗೆ ಗ್ರಾಸವಾಗಿದೆ. ತಿಹಾರ್ ಜೈಲು ಏಷ್ಯಾದ ಅತ್ಯಂತ ಸುರಕ್ಷಿತ ಜೈಲುಗಳಲ್ಲಿ ಒಂದು. ಆದರೂ, ಇತ್ತೀಚೆಗೆ ಕೈದಿಗಳ ಮೇಲೆ ಹಲ್ಲೆ, ಕೊಲೆ ಪ್ರಕರಣಗಳು ವರದಿಯಾಗುತ್ತಿವೆ. ಹಾಗಾಗಿ ವಿವಿಐಪಿ ಕೈದಿಗಳ ಭದ್ರತೆ ಯಕ್ಷ ಪ್ರಶ್ನೆಯಾಗಿದೆ.

ಜೈಲಿನಲ್ಲಿರುವ ವಿವಿಐಪಿಗಳು: ಸದ್ಯ ತಿಹಾರ್ ಜೈಲಿನಲ್ಲಿ ನಂಬರ್ ಎರಡರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ದೆಹಲಿಯ ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಮತ್ತು ಬಿಆರ್‌ಎಸ್ ನಾಯಕ ಕೆ. ಕವಿತಾ ಸೇರಿದಂತೆ ಹಲವು ವಿವಿಐಪಿಗಳನ್ನು ಬಂಧಿಸಿ ಇಡಲಾಗಿದೆ. ನಾಲ್ಕು ಜಿಆರ್‌ಟಿ ತಂಡ, ತಮಿಳುನಾಡು ಪೊಲೀಸರು ಮತ್ತು ತಿಹಾರ್ ಜೈಲಿನ ಭದ್ರತಾ ಸಿಬ್ಬಂದಿ ಯಾವಾಗಲೂ ಅವರ ರಕ್ಷಣೆಯಲ್ಲಿ ಇರುತ್ತಾರೆ.

ಜೈಲಿನಲ್ಲಿರುವ ದರೋಡೆಕೋರರು: ಸದ್ಯ ಜೈಲಿನಲ್ಲಿರುವ ಒಟ್ಟು ಕೈದಿಗಳಲ್ಲಿ ಶೇಕಡಾ 32 ರಷ್ಟು ಜನರು ದೆಹಲಿಯ ಹೊರಗಿನವರೇ ಇದ್ದಾರೆ. ಇವರಲ್ಲಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ ಮೊದಲಾದ ರಾಜ್ಯಗಳ ಕೈದಿಗಳಿದ್ದರೆ, ಕೆಲವು ಕೈದಿಗಳು ಪಾಕಿಸ್ತಾನ, ಅಫ್ಘಾನಿಸ್ತಾನ, ನೈಜೀರಿಯಾ, ನೇಪಾಳ, ಇಟಲಿ, ಯುಕೆ ಮತ್ತು ಬಾಂಗ್ಲಾದೇಶ ಮೂಲದವರು ಇದ್ದಾರೆ. ಲಾರೆನ್ಸ್ ಬಿಷ್ಣೋಯ್, ಹಾಸಿಂ ಬಾಬಾ, ಸಂಪತ್ ನೆಹ್ರಾ, ನೀರಜ್ ಬವಾನಿಯಾ, ನಾಸಿರ್, ಅನಿಲ್ ಭಾಟಿ, ರವಿ ಗಂಗ್ವಾರ್, ರೋಹಿತ್ ಚೌಧರಿ ಮತ್ತು ಕೇಬಲ್ ಕ್ರಿಮಿನಲ್ ರಶೀದ್ ಸೇರಿದಂತೆ 20ಕ್ಕೂ ಹೆಚ್ಚು ದರೋಡೆಕೋರರು ತಿಹಾರ್ ನೀರಿನಲ್ಲಿ ಬಂಧಿಸಿ ಇಡಲಾಗಿದೆ. ಇವರಷ್ಟೇ ಅಲ್ಲದೇ ಇತ್ತೀಚೆಗಷ್ಟೇ ದೆಹಲಿ ಪೊಲೀಸರು ಮೆಕ್ಸಿಕೋ ಮೂಲದ ಪಾತಕಿ ದೀಪಕ್ ಬಾಕ್ಸರ್ ಎಂಬಾನನ್ನು ಬಂಧಿಸಿಡಲಾಗಿದೆ.

ಮಾಜಿ ಅಧಿಕಾರಿ ಸುನಿಲ್ ಗುಪ್ತಾ ಹೇಳಿದ್ದು ಹೀಗೆ: ಪರಿಶೀಲನೆ ಮಾಡಿದಾಗಲೆಲ್ಲ ಜೈಲಿನೊಳಗೆ ಮೊಬೈಲ್, ಹರಿತವಾದ ಆಯುಧಗಳು ಪತ್ತೆಯಾಗಿವೆ. ಡ್ರಗ್ಸ್ ಕೂಡ ಪತ್ತೆಯಾಗಿದ್ದು, ಇಲ್ಲಿನ ಭದ್ರತಾ ವ್ಯವಸ್ಥೆ ತಲೆ ಬಿಸಿಯಾಗಿದೆ. 2023ರಲ್ಲಿ, ದರೋಡೆಕೋರ ಟಿಲ್ಲಿ ತಾಜ್‌ಪುರಿಯಾ ಎಂಬಾತ ಕ್ರೂರವಾಗಿ ಹತ್ಯೆಯಾಗಿದ್ದ. ಆ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್​ ಆಗಿದ್ದರಿಂದ ಒಂಬತ್ತು ಜೈಲು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿತ್ತು. ಭದ್ರತೆಗೆಂದೇ ಬಹುತೇಕ ಡ್ಯಾನಿಕ್ಸ್ ಕೇಡರ್‌ನ ಅಧಿಕಾರಿಗಳನ್ನು ಜೈಲಿನಲ್ಲಿ ನಿಯೋಜಿಸಲಾಗಿದೆ. ಜೈಲಿನ ವಿಷಯಗಳನ್ನು ನಿಭಾಯಿಸಲು ಅವರಿಗೆ ಸಾಕಷ್ಟು ಅನುಭವ ಮತ್ತು ಸಾಮರ್ಥ್ಯದ ಕೊರತೆ ಇರಬಹುದು. ಜತೆಗೆ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆಯೂ ಇದ್ದಿರಬಹುದು. ಜೈಲು ಸಿಬ್ಬಂದಿ ಕೈದಿಗಳೊಂದಿಗೆ ಶಾಮೀಲಾಗಿರುವುದು ಕಂಡು ಬಂದಲ್ಲಿ ಕೂಡಲೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ: ಬಂಧಿಸಲು ಬಂದ ಪೊಲೀಸರ ಮೇಲೆ ಕಲ್ಲೆಸೆದು ಕಳ್ಳ​ರು ಪರಾರಿ - Thieves Escape

ETV Bharat Logo

Copyright © 2024 Ushodaya Enterprises Pvt. Ltd., All Rights Reserved.