ETV Bharat / business

ವಿಮಾನ ಹಾರಾಟದ ವೇಳೆಯೂ ಪಡೆಯಬಹುದು ವೈ- ಫೈ: ಭಾರತದಲ್ಲಿ ಮೊದಲ ಬಾರಿಗೆ ವಿಸ್ತಾರ ಏರ್​ಲೈನ್ಸ್​ನಲ್ಲಿ ಸೌಲಭ್ಯ - Wi Fi on international flights

author img

By ETV Bharat Karnataka Team

Published : Jul 27, 2024, 5:01 PM IST

ಅಂತಾರಾಷ್ಟ್ರೀಯ ವಿಮಾನ ಹಾರಾಟದ ವೇಳೆ ಪ್ರಯಾಣಿಕರಿಗೆ 20 ನಿಮಿಷ ಉಚಿತ ವೈಫೈ ಒದಗಿಸುವುದಾಗಿ ವಿಸ್ತಾರ ಏರ್​ಲೈನ್ಸ್​​ ಘೋಷಿಸಿದೆ.

Vistara airline will offer 20 minutes of free Wi Fi on international flights
ವಿಸ್ತಾರ ಏರ್​ಲೈನ್​ (ಐಎಎನ್​ಎಸ್​​)

ನವದೆಹಲಿ: ವಿದೇಶದ ವಿಮಾನ ಪ್ರಯಾಣ ಅನೇಕರಿಗೆ ಬೋರಿಂಗ್ ಆಗಿರುತ್ತದೆ. ಇಂಟರ್​ನೆಟ್​ ಹೆಚ್ಚು ಬಳಕೆ ಮಾಡುವ ಪ್ರಯಾಣಿಕರಿಗೆ ಆಗಸದಲ್ಲಿ ಮನೋರಂಜನೆ ಸೌಲಭ್ಯ ಇಲ್ಲದೇ ಸಾಗುವ ಈ ಪ್ರಯಾಣ ಅನೇಕರಿಗೆ ಪ್ರಯಾಸದಾಯಕವೇ ಸರಿ. ಆದರೆ, ಇದೀಗ ಕೊರತೆ ನೀಗಿಸಲು ವಿಸ್ತಾರ ಮುಂದಾಗಿದೆ. ಅಂತಾರಾಷ್ಟ್ರೀಯ ವಿಮಾನ ಹಾರಾಟದ ವೇಳೆ ಪ್ರಯಾಣಿಕರಿಗೆ 20 ನಿಮಿಷ ಉಚಿತ ವೈಫೈ ಒದಗಿಸುವುದಾಗಿ ಸಿಹಿ ಸುದ್ದಿ ಘೋಷಿಸಿದೆ. ಈ ರೀತಿ ಸೌಲಭ್ಯ ಕಲ್ಪಿಸಿದ ಭಾರತದ ಮೊದಲ ವಿಮಾನ ಸಂಸ್ಥೆ ಎಂಬ ಹೆಗ್ಗಳಿಕೆಗೆ ಇದೀಗ ವಿಸ್ತಾರ ಪಾತ್ರವಾಗಿದೆ.

ಟಾಟಾ - ಸಿಂಗಾಪೂರ್​​ ಏರ್​ಲೈನ್ಸ್​ ಜಂಟಿಯಾಗಿ ವಿಮಾನಗಳಲ್ಲಿ ವೈಫೈ ಸೌಲಭ್ಯ ಕಲ್ಪಿಸುವ ಪೂರಕ ವ್ಯವಸ್ಥೆ ನೀಡಿದೆ. ಎಲ್ಲ ಕ್ಯಾಬಿನ್​ನಲ್ಲಿ ಪ್ರಯಾಣಿಕರು 20 ನಿಮಿಷಗಳ ಕಾಲ ವೈ- ಫೈ ಸೌಲಭ್ಯ ಪಡೆಯಲಿದ್ದಾರೆ. ಒಂದು ವೇಳೆ ಹೆಚ್ಚಿನ ವೈ ಫೈ ಸೌಲಭ್ಯ ಬೇಕು ಎನ್ನುವುದಾದರೆ ಭಾರತೀಯರು ಕ್ರೆಡಿಟ್​/ ಡೆಬಿಟ್​ ಕಾರ್ಡ್​ಗಳನ್ನು ಬಳಕೆ ಮಾಡಿಕೊಂಡು ಯೋಜನೆಗಳನ್ನು ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ.

ಈ ಸೇವೆಯು ಬೋಯಿಂಗ್​​ 787 -9 ಡ್ರೀಮ್​​ಲೈನರ್​ ಮತ್ತು ಏರ್​ಬಸ್​ ಎ321 ನಿಯೋ ಏರ್​​ಕ್ರಾಫ್ಟ್​​​ನಲ್ಲಿ ಲಭ್ಯವಿದೆ. ಗ್ರಾಹಕರು ಇ-ಮೇಲ್​ ಮೂಲಕ ಒಟಿಪಿ ಮೂಲಕ ಪಡೆಯಬಹುದು. ಸಕ್ರಿಯ ಹಾರಾಟದಲ್ಲಿ ವಿಸ್ತೃತ ಇನ್ ಫ್ಲೈಟ್ ವೈ-ಫೈ ಖರೀದಿಸಲು ಅನುಕೂಲವನ್ನು ಕಲ್ಪಿಸಲಾಗಿದೆ ಎಂದು ವಿಸ್ತಾರ ತಿಳಿಸಿದೆ.

ಈ ನಮ್ಮ ಹೆಚ್ಚುವರಿ ಸೇವೆಯ ಹೊಸ ನಡೆಯನ್ನು ಗ್ರಾಹಕರು ಮೆಚ್ಚುತ್ತಾರೆ ಎಂಬ ನಂಬಿಕೆ ಇದೆ. ಇದು ವಿಸ್ತಾರ ಪ್ರಯಾಣವನ್ನು ಮತ್ತಷ್ಟು ಆರಾಮದಾಯಕ, ಉತ್ಪಾದಕತೆ ಮತ್ತು ತಡೆ ರಹಿತವಾಗಿಸುತ್ತದೆ ಎಂದು ವಿಸ್ತಾರದ ಮುಖ್ಯ ವಾಣಿಜ್ಯ ಅಧಿಕಾರಿ ದೀಪಕ್​ ರಜವತ್​ ತಿಳಿಸಿದ್ದಾರೆ.

20 ನಿಮಿಷದ ಹೊರತಾಗಿ ಬ್ಯುಸಿನೆಸ್​ ಕ್ಲಾಸ್ ಮತ್ತು ಪ್ಲಾಟಿನಂ ಕ್ಲಬ್​​ ವಿಸ್ತಾರ ಸದಸ್ಯರಿಗೆ ಹೆಚ್ಚುವರಿಯಾಗಿ 50 ಎಂಬಿಗಳನ್ನು ವೈಫೈ ಪೂರಕ ಸೇವೆಯಾಗಿ ನೀಡಲಾಗುವುದು. ಏರ್​ಲೈನ್​ ಪ್ರಕಾರ, ಸದಸ್ಯೇತರ ಪ್ರಯಾಣಿಕರು ವಾಟ್ಸ್​ಆ್ಯಪ್​​ ​ನಂತಹ ಮೆಸೇಜಿಂಗ್​ ಆ್ಯಪ್​ಗಳ ಸೌಲಭ್ಯಕ್ಕೆ ಅನಿಯಮಿತ ಡೇಟಾಗೆ 327.74 ಪ್ಲಸ್​ ಜಿಎಸ್​ಟಿ ಹಣ ನೀಡಬೇಕು.

ವಿಮಾನದೊಳಗೆ ಇಂಟರ್​ನೆಟ್​ ಸರ್ಫಿಂಗ್​ಗೆ 1,577.54 ಪ್ಲಸ್​ ಜಿಎಸ್​ಟಿ ನೀಡಬೇಕಿದೆ. ಇದರಿಂದ ಸಾಮಾಜಿಕ ಜಾಲತಾಣ ಮತ್ತು ವೆಬ್​ಗಳ ಆಡಿಯೋ ಮತ್ತು ವಿಡಿಯೋ ಸ್ಟ್ರೀಮಿಂಗ್​ ಸೌಲಭ್ಯ ಪಡೆಯಬಹುದು. ಅನಿಯಮಿತ ಡೇಟಾಗಳು ಎಲ್ಲ ಸ್ಟ್ರೀಮಿಂಗ್​ ಪ್ರೋಟೋಕಾಲ್​ ಅನುಮತಿಸಲು 2707.04 ಪ್ಲಸ್​ ಜಿಎಸ್​ಟಿಗೆ ಲಭ್ಯವಾಗಿದೆ

ಈ ಕುರಿತು ಮಾತನಾಡಿರುವ ಏರ್​ಲೈನ್ಸ್​​, ವಿಮಾನದೊಳಗಿನ ಮನೋರಂಜನೆ ವ್ಯವಸ್ಥೆ ಸರಿಸುಮಾರು 700 ಗಂಟೆಗಳ ಕಂಟೆಂಟ್​ ಒಳಗೊಂಡಿದ್ದು, ಇದು ಸಿನಿಮಾ ಟಿವಿ ಶೋ ಮತ್ತು ಆಡಿಯೋ ಟೈಟಲ್ಸ್​ಗಳು ಸೇರಿರಲಿದೆ. (ಐಎಎನ್​ಎಸ್​)

ಇದನ್ನೂ ಓದಿ: ಜಾಗತಿಕ ಪಾಸ್​​ಪೋರ್ಟ್​ ಸೂಚ್ಯಂಕದಲ್ಲಿ ಏರಿಕೆ ಕಂಡ ಭಾರತ; 58 ದೇಶಗಳಿಗೆ ವೀಸಾ ಮುಕ್ತ ಪ್ರವೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.