ETV Bharat / state

ದಸರಾ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ - Mysuru Dasara Flower Show - MYSURU DASARA FLOWER SHOW

ಮೈಸೂರು ದಸರಾ ಅಂಗವಾಗಿ ಏರ್ಪಡಿಸಲಾಗಿರುವ ಫಲಪುಷ್ಪ ಪ್ರದರ್ಶನವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ.

cm-siddaramaiah
ದಸರಾ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದ ಸಿಎಂ (ETV Bharat)
author img

By ETV Bharat Karnataka Team

Published : Oct 3, 2024, 7:30 PM IST

ಮೈಸೂರು: ನಗರದ ಕುಪ್ಪಣ್ಣ ಉದ್ಯಾನವನದಲ್ಲಿ ನಾಡಹಬ್ಬ ದಸರಾದ ಅಂಗವಾಗಿ ಏರ್ಪಡಿಸಲಾಗಿರುವ ಫಲಪುಷ್ಪ ಪ್ರದರ್ಶನವನ್ನು ಇಂದು ಸಿಎಂ ಸಿದ್ಧರಾಮಯ್ಯ ಉದ್ಘಾಟಿಸಿದರು. ತೋಟಗಾರಿಕಾ ಇಲಾಖೆ, ಜಿಲ್ಲಾ ಪಂಚಾಯತ್ ಮೈಸೂರು ಮತ್ತು ಜಿಲ್ಲಾ ತೋಟಗಾರಿಕೆ ಸಂಘ(ರಿ) ಪ್ರದರ್ಶನ ಏರ್ಪಡಿಸಿದೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಮೈಸೂರಿನಲ್ಲಿ ಸ್ಥಾಪನೆಯಾದ ಭದ್ರಾವತಿ ಕಾರ್ಖಾನೆ, ಶಿವನಸಮುದ್ರ ವಿದ್ಯುತ್ ಉತ್ಪಾದನೆ, ಮೈಸೂರು ವಿಶ್ವವಿದ್ಯಾಲಯ ಹಾಗೂ ಮೈಸೂರು ಆಕಾಶವಾಣಿ ಫಲಪುಷ್ಪ ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿದೆ.

cm-siddaramaiah
ದಸರಾ ಫಲಪುಷ್ಪ ಪ್ರದರ್ಶನ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ (ETV Bharat)

ಕರ್ನಾಟಕ ಸಂಭ್ರಮ- 50 ಕುಪ್ಪಳ್ಳಿ ಪಾರ್ಕ್​ನ ಮುಖ್ಯದ್ವಾರದಲ್ಲಿ ಇತ್ತೀಚಿಗೆ ಸಂಭ್ರಮಿಸಿದ ಕನ್ನಡಿಗರ ಹೆಮ್ಮೆಯ ಕರ್ನಾಟಕ ಸಂಭ್ರಮ: 50ರ ಕುರಿತು ಹಳದಿ ಮತ್ತು ಕೆಂಪು ಬಣ್ಣದ ಗುಲಾಬಿ ಹೂವಿನಿಂದ ನಿರ್ಮಿಸಲಾದ ಕರ್ನಾಟಕ ಭೂಪಟ, ಎಡ ಬಲದಲ್ಲಿ ಆನೆಯ ಮಾದರಿ, ಅಲ್ಲದೆ ಹೂವಿನಿಂದ ಅರಳಿದ ಟೀಮ್ ಇಂಡಿಯಾ ವಿಶ್ವಕಪ್ ಮಾದರಿ ಕ್ರೀಡಾಪ್ರಿಯರನ್ನು ಸೆಳೆಯುತ್ತಿದೆ.

ಭಾರತದ ಮೊದಲ ಮಹಿಳಾ ಶಿಕ್ಷಕಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ಕ್ರಾಂತಿಯ ಬಗ್ಗೆ ಬೆಳಕು ಚೆಲ್ಲಿದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ, ಒಂದೇ ಮಾನವನ ದೇಹದಲ್ಲಿ ಅರ್ಧಭಾಗ ರೈತ, ಇನ್ನರ್ಧ ಭಾಗ ಗಡಿ ಕಾಯುವ ಸೈನಿಕನ ಮಾದರಿ ವಿಶೇಷವಾಗಿದೆ.

ಹುಲಿಯನ್ನೇರಿದ ಮಹದೇಶ್ವರ ಸ್ವಾಮಿಯ ಪ್ರತಿಮೆ ಹಾಗೂ ಒಂದೇ ಗೋಪುರದಲ್ಲಿ ಅರಳಿದ ಕರ್ನಾಟಕದ ಅತಿ ದೊಡ್ಡ ದೇವಾಲಯವಾದ ನಂಜನಗೂಡಿನ ಶ್ರೀಕಂಠೇಶ್ವರ ಹಾಗೂ ಶ್ರೀ ಚಾಮುಂಡೇಶ್ವರಿ ದೇವಾಲಯವನ್ನು ವಿವಿಧ ಬಣ್ಣದ ಹೂವುಗಳಿಂದ ಅಲಂಕರಿಸಿರುವುದು ಭಕ್ತಿಪ್ರಿಯರನ್ನು ಕೈಬೀಸಿ ಕರೆಯುತ್ತಿದೆ.

ಈ ಬಾರಿ ವಿಶೇಷವಾಗಿ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಯುವನಿಧಿ, ಗೃಹಜ್ಯೋತಿ, ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಗಳ ವಿಷಯಾಧಾರಿತ ಪುಷ್ಪ ಕಲಾಕೃತಿ ಮಾದರಿಗಳನ್ನು ಪ್ರೇಕ್ಷಕರು ನೋಡಬಹುದು.

Flower show
ದಸರಾ ಫಲಪುಷ್ಪ ಪ್ರದರ್ಶನ (ETV Bharat)

ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ವಿಧಾನ ಪರಿಷತ್​ನ ಸದಸ್ಯರಾದ ಸಿ.ಎನ್.ಮಂಜೇಗೌಡ, ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ರವಿಶಂಕರ್, ಕೊಳ್ಳೇಗಾಲ ವಿಧಾನಸಭಾ ಶಾಸಕ ಎ.ಆರ್.ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀ ಕಾಂತರೆಡ್ಡಿ, ಜಿಲ್ಲಾ ಪಂಚಾಯತ್ ಸಿ.ಇ.ಒ ಕೆ.ಎಂ.ಗಾಯತ್ರಿ, ಮಹಾನಗರ ಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಶರೀಫ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಸೇರಿದಂತೆ ಇನ್ನಿತರ ಅಧಿಕಾರಿಗಳು ಗಾಜಿನ ಮನೆಯೊಳಗೆ ನಿರ್ಮಿಸಿದ ಶಾಕ್ಯ ರಾಜಮನೆತನ ಬೌದ್ಧ ಬೋಧನೆಗಳು ಹಾಗೂ ಬಸವಣ್ಣನವರ ಶ್ರೇಷ್ಠತೆ ಸಾರುವ ಅನುಭವ ಮಂಟಪ, ಪ್ರಜಾಪ್ರಭುತ್ವದ ನೆಲೆಯಲ್ಲಿ ರೂಪಿಸಿರುವ ಸಂಸತ್ ಭವನವನ್ನು ವೀಕ್ಷಿಸಿದರು.

ವಿವಿಧ ಬಗೆಯ ಹೂವುಗಳು: ಆಫ್ರಿಕನ್ ಮಾರಿಗೋಲ್ಡ್, ಹಳದಿ, ಆರ್ಕಿಡ್​ಗಳು, ಸೆಲೋಸಿಯಾ, ಕಾರ್ನೇಷನ್, ಆಂಥೂರಿಯಂ, ಗರ್ಬೆರಾ, ರೋಸಸ್, ಕಾಸ್ಮೊಸ್, ಬ್ಲೂಡೈಸಿ, ಪಿಂಗ್ ಪಾಂಗ್, ಪೆಟುನಿಯಾ, ಟೊರೆನಿಯಾ, ಡ್ರಾಕೇನಾ, ಟಿಥೋನಿಯಾ , ಜಿನ್ನಿಯಾ ಎಂಬಂತ ನಾನಾ ಬಗೆಯ ಹೂವುಗಳನ್ನು ಪ್ರದರ್ಶನದಲ್ಲಿ ಹೇರಳವಾಗಿ ಬಳಸಲಾಗಿದೆ.

ಆಹಾರ ಮೇಳಕ್ಕೆ ಚಾಲನೆ: ಮಹಾರಾಜ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಆಹಾರ ಮೇಳ ಕಾರ್ಯಕ್ರಮವನ್ನು ಸಿಎಂ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಉಪಸ್ಥಿತರಿದ್ದರು.

ಇದನ್ನೂ ಓದಿ: 'ಯುದ್ಧಗಳು ನಿಲ್ಲಲಿ, ಸರ್ಕಾರ ಉರುಳಿಸುವ ದುರಾಲೋಚನೆ ಬಾರದಿರಲಿ': ಹಂಪ ನಾಗರಾಜಯ್ಯ ಪ್ರಾರ್ಥನೆ - Hampa Nagarajaiah Inagurates Dasara

ETV Bharat Logo

Copyright © 2024 Ushodaya Enterprises Pvt. Ltd., All Rights Reserved.