ETV Bharat / state

VIDEO:  ರೋಗಮುಕ್ತ ಜೀವನ ನಡೆಸಲು ಸಿರಿಧಾನ್ಯ ಸಹಕಾರಿ: ಡಾ. ಖಾದರ್‌ ವಲಿ ಸಂದರ್ಶನ - Dr Khader vali - DR KHADER VALI

ಸಿರಿಧಾನ್ಯ ಆಹಾರ ಬಳಸಿದರೆ ರೋಗಗಳಿಂದ ಮುಕ್ತವಾಗಬಹುದು ಹಾಗೂ ಆರೋಗ್ಯಯುತ, ದೀರ್ಘಾಯುಷ್ಯದ ಬದುಕನ್ನು ನಡೆಸಬಹುದು ಎಂದು ಆಹಾರ ವಿಜ್ಞಾನದ ಸಂತ ಎಂದೇ ಹೆಸರಾದ ಡಾ. ಖಾದರ್‌ ವಲಿ ಹೇಳಿದ್ದಾರೆ.

ಡಾ. ಖಾದರ್‌ ವಲಿ ಸಂದರ್ಶನ
ಡಾ. ಖಾದರ್‌ ವಲಿ ಸಂದರ್ಶನ (ETV Bharat)
author img

By ETV Bharat Karnataka Team

Published : Sep 14, 2024, 6:23 PM IST

Updated : Sep 14, 2024, 7:17 PM IST

ಡಾ. ಖಾದರ್‌ ವಲಿ ಸಂದರ್ಶನ (ETV Bharat)

ಮೈಸೂರು: ಪಾರಂಪರಿಕವಾಗಿ ನಮ್ಮ ಪೂರ್ವಜರು ಬಳಸುತ್ತಿದ್ದ ಸಿರಿಧಾನ್ಯ ಆಹಾರ ಬಳಸಿದರೆ ರೋಗಗಳಿಂದ ಮುಕ್ತವಾಗಬಹುದು ಹಾಗೂ ಆರೋಗ್ಯಯುತ, ದೀರ್ಘಾಯುಷ್ಯದ ಬದುಕನ್ನು ನಡೆಸಬಹುದು ಎಂದು ಆಹಾರ ವಿಜ್ಞಾನದ ಸಂತ ಎಂದೇ ಹೆಸರಾದ ಡಾ. ಖಾದರ್‌ ವಲಿ ಹೇಳಿದರು.

ನಗರದಲ್ಲಿ ಈಟಿವಿ ಭಾರತ ಜೊತೆಗೆ ಮಾತನಾಡಿದ ಅವರು, ಆಧುನಿಕ ಜಗತ್ತು ವೇಗವಾಗಿ ಓಡುತ್ತಿದೆ. ಇದರಿಂದ ಎಲ್ಲರೂ ಬೇಗ ಸಿಗುವ ಆಹಾರ ತಿಂದು ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಆದರೆ, ಭಾರತದಲ್ಲಿ ಪಾರಂಪರಿಕವಾಗಿ ನಮ್ಮ ಪೂರ್ವಜರು ತಿನ್ನುತ್ತಿದ್ದ ಅರ್ಕ, ನವಣೆ , ಸಾಮೆ , ಕೊರಲೆ, ಊದಲು , ಬರಗು, ಜೋಳ ಮತ್ತು ಸಜ್ಜೆ, ರಾಗಿ ಹೀಗೆ ವೈವಿಧ್ಯಮಯ ಸಿರಿಧಾನ್ಯಗಳನ್ನು ಬಳಸಿದರೆ ಕಾಯಿಲೆಗಳು ದೂರವಾಗುತ್ತವೆ ಎಂದು ತಿಳಿಸಿದರು.

ಪ್ರಸ್ತುತ ದಿನಗಳಲ್ಲಿ ನಾವು ಕೆಲವು ಆಹಾರ ಪದಾರ್ಥಗಳನ್ನ ಉಪಯೋಗಿಸುತ್ತಿದ್ದೇವೆ. ಇವುಗಳಿಂದ ಆರೋಗ್ಯ ಹದಗೆಡುತ್ತಿದೆ. ನಿಜವಾಗಿ ಔಷಧ ಗುಣ ಇರುವುದು ಸಿರಿಧಾನ್ಯಗಳಲ್ಲಿ. ಸಿರಿಧಾನ್ಯಗಳಿಂದ ಕಾಯಿಲೆ ಮುಕ್ತ ಜೀವನ ನಡೆಸಲು ಸಾಧ್ಯವಾಗುತ್ತದೆ. ಸಿರಿಧಾನ್ಯ ಉತ್ಪಾದನೆ ಕರ್ನಾಟಕ ನಂಬರ್‌ ಒನ್‌ ಆಗಿದೆ. ವಿಶೇಷವಾಗಿ ಅರ್ಕ, ಸಾಮೆ, ನವಣೆ, ಕೊರಲೆ, ಊದಲು ಈ ಐದು ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಇದರ ಜತೆಗೆ ರಾಗಿಯನ್ನು ಸಹ ಬೆಳೆಯುತ್ತಿದ್ದೇವೆ ಎಂದರು.

ರಾಜಸ್ಥಾನ ಮತ್ತು ಗುಜರಾತ್​ನಲ್ಲಿ ಸಜ್ಜೆ ಮತ್ತು ಜೋಳವನ್ನು ಹೆಚ್ಚಾಗಿ ಬೆಳೆಯುತ್ತಾರೆ. ನಾವು ನಮ್ಮ ಆಹಾರ ಪದ್ಧತಿಯಲ್ಲಿ ಆಧುನಿಕ ಆಹಾರಗಳನ್ನು ದೂರು ಮಾಡಿ ಸಿರಿಧಾನ್ಯಗಳನ್ನು ಪ್ರತಿದಿನ ಊಟದಲ್ಲಿ ಬಳಸಿದರೆ ರೋಗಗಳಿಂದ ಮುಕ್ತವಾಗಬಹುದು ಎಂದು ಅವರು ಪುನರುಚ್ಚರಿಸಿದರು.

ಇದನ್ನೂ ಓದಿ: ಬರದ ನಾಡಲ್ಲಿ ಡ್ರ್ಯಾಗನ್‌ಫ್ರೂಟ್​ ಬೆಳೆದ ಫಾರ್ಮಾಸಿಸ್ಟ್‌; ಕೈತುಂಬಾ ಆದಾಯ ನೀಡುತ್ತಿರುವ ಹಣ್ಣಿನ ಬೆಳೆ - DRAGON FRUIT

Last Updated : Sep 14, 2024, 7:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.