ETV Bharat / state

ಅಂತರ್ಜಾತಿ, ಅಂತರ್ ಧರ್ಮೀಯ ಮದುವೆಗಳಿಂದ ಜಾತಿ ವ್ಯವಸ್ಥೆ ಅಳಿಸಲು ಸಾಧ್ಯ : ಸಿಎಂ ಸಿದ್ದರಾಮಯ್ಯ - CM Siddaramaiah - CM SIDDARAMAIAH

ಸಿಎಂ ಸಿದ್ದರಾಮಯ್ಯ ಜಾತಿ ವ್ಯವಸ್ಥೆ ನಿರ್ಮೂಲನೆಯ ಕುರಿತು ಮಾತನಾಡಿದರು.

CM Siddaramaiah
ಸಿಎಂ ಸಿದ್ದರಾಮಯ್ಯ (ETV Bharat)
author img

By ETV Bharat Karnataka Team

Published : Jun 16, 2024, 6:24 PM IST

ಸಿಎಂ ಸಿದ್ದರಾಮಯ್ಯ (ETV Bharat)

ವಿಜಯಪುರ : ಅಂತರ್ಜಾತಿ, ಅಂತರ್ ಧರ್ಮೀಯ ಮದುವೆಗಳಿಂದ ಜಾತಿ ವ್ಯವಸ್ಥೆ ಅಳಿಸಲು ಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸ್ವಾತಂತ್ರ್ಯ ಸೇನಾನಿ ಹಾಗೂ ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಮಾಧವಾನಂದ ಪ್ರಭುಗಳ 44ನೇ ಪುಣ್ಯತಿಥಿ ಸಪ್ತಾಹದ ಅಂಗವಾಗಿ ನೂತನವಾಗಿ ನಿರ್ಮಿಸಿರುವ ಮಾಧವಾನಂದ ಪ್ರಭುಗಳ ದೇವಸ್ಥಾನ ಲೋಕಾರ್ಪಣೆಗೊಳಿಸಿ, ಬಳಿಕ ಕಳಸಾರೋಹಣದಲ್ಲಿ ಪಾಲ್ಗೊಂಡು ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾಧವಾನಂದ ಸ್ವಾಮೀಜಿ ಬಹುತ್ವದ ಪರವಾಗಿದ್ದರು. ಈ ಕಾರಣಕ್ಕೆ ಇವರನ್ನು ಸ್ಮರಿಸಬೇಕಾಗಿದೆ ಎಂದರು. ಪಾಳೇಗಾರಿಕೆ ಸಮಾಜಕ್ಕೆ, ಜನರ ಸ್ವಾತಂತ್ರ್ಯಕ್ಕೆ ಕಂಟಕ. ಹೀಗಾಗಿ ಬಲಾಢ್ಯರ ಕೈಯಲ್ಲಿ ಅಧಿಕಾರ ಇರಬಾರದು ಎಂದು ಮಹಾತ್ಮ ಗಾಂಧಿಯವರು ಹೇಳಿದ್ದರು ಎಂದು ಸಿಎಂ ವಿವರಿಸಿದರು.

ಸ್ವಾತಂತ್ರ್ಯ ಸೇನಾನಿಗಳಾದ ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು. ಭಾರತದೊಳಗಿದ್ದ ವರ್ಣ ವ್ಯವಸ್ಥೆ ಮತ್ತು ಜಾತಿ ವ್ಯವಸ್ಥೆ ಹಾಗೂ ಭಾರತದಲ್ಲಿನ 560 ಸಂಸ್ಥಾನಗಳಲ್ಲಿ ಇದ್ದ ಒಳ ಮುನಿಸನ್ನು ಬ್ರಿಟಿಷರು ಬಳಸಿಕೊಂಡು ಭಾರತವನ್ನು ಆಳಿದರು ಎಂದರು.

ಜಾತಿ ವ್ಯವಸ್ಥೆ ಕಾರಣಕ್ಕೆ ಭಾರತದ ಶೂದ್ರರು ಕೇವಲ ಉತ್ಪಾದನೆ ಮಾಡಬೇಕಿತ್ತು. ಆದರೆ, ತಾವು ಉತ್ಪಾದಿಸಿದ್ದನ್ನು ಅನುಭವಿಸುವ ಹಕ್ಕು ಮತ್ತು ಸ್ವಾತಂತ್ರ್ಯ ಇರಲಿಲ್ಲ. ಈ ಅಸಮಾನತೆ ವಿರುದ್ಧ ಶ್ರೀ ಮಾಧವಾನಂದ ಸ್ವಾಮೀಜಿಯವರು ಧ್ವನಿ ಎತ್ತಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡು ಜನರ ಮುಕ್ತಿಗಾಗಿ ಶ್ರಮಿಸಿದರು ಎಂದು ಮೆಚ್ಚುಗೆ ಸೂಚಿಸಿದರು.

ಬಸವಾದಿ ಶರಣರು 12ನೇ ಶತಮಾನದಲ್ಲಿ ಹೇಳಿದ್ದನ್ನು ಮಾಧವಾನಂದ ಪ್ರಭುಗಳು 20ನೇ ಶತಮಾನದಲ್ಲಿ ಸಾರಿದರು ಎಂದು ಹೇಳಿದರು.

ನಾವು ಸೋತಿಲ್ಲ, ಬಿಜೆಪಿಯವರು ಸೋತಿದ್ದಾರೆ: ಪೆಟ್ರೋಲ್, ಡಿಸೇಲ್ ದರ ಲೋಕಸಭಾ ಚುನಾವಣೆಯಲ್ಲಿನ ಸೋಲಿನ ಸೇಡು ಎಂಬ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರ ಆರೋಪವನ್ನು ಸಿಎಂ ಸಿದ್ದರಾಮಯ್ಯ ಅಲ್ಲಗಳೆದಿದ್ದಾರೆ. ಇಂಚಗೇರಿ ಹೆಲಿಪ್ಯಾಡ್​ನಲ್ಲಿ ವಿಜಯಪುರ ಜಿಲ್ಲಾ ಪೊಲೀಸರಿಂದ ಗೌರವ ವಂದನೆ ಪಡೆದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ‌ ಚುನಾವಣೆಯಲ್ಲಿ ನಾವು ಒಂದೇ ಸ್ಥಾನ ಗಳಿಸಿದ್ದೆವು. 2024ರ ಚುನಾವಣೆಯಲ್ಲಿ ಒಂದರಿಂದ‌ ಒಂಬತ್ತಕ್ಕೆ ಬಂದಿದ್ದೇವೆ. ಅವರು 25 ಸ್ಥಾನಗಳಿಂದ 17ನೇ ಸ್ಥಾನಕ್ಕೆ ಕುಸಿದಿದ್ದಾರೆ ಎಂದು ತಿರುಗೇಟು ಕೊಟ್ಟರು.

ಲೋಕಸಭಾ ಚುನಾವಣೆಯಲ್ಲಿ ನಾವು ಸೋತಿಲ್ಲ. ಬಿಜೆಪಿಯವರು ಸೋತಿದ್ದಾರೆ. ಪೆಟ್ರೋಲ್, ಡಿಸೇಲ್ ದರ ಏರಿಕೆಗೂ, ಚುನಾವಣೆಗೂ ಸಂಬಂಧವಿಲ್ಲ. 2021 ರಲ್ಲಿ ಪೆಟ್ರೋಲ್​ ದರದಲ್ಲಿ ಶೇ. 35 ತೆರಿಗೆ ಇತ್ತು. ಡಿಸೇಲ್​ ಶೇ. 24 ತೆರಿಗೆ ಇತ್ತು. ಇದಕ್ಕೆ ಕಾರಣ ಬಿಜೆಪಿ ಎಂದು ಸಿಎಂ ಆರೋಪಿಸಿದರು.

ಈಗಿನ ದರದ ಶೇಕಡಾವಾರು ತೆರಿಗೆ ಬಗ್ಗೆ ಮಾತನಾಡಿದ ಸಿಎಂ, ರಾಜ್ಯದಲ್ಲಿ ಪೆಟ್ರೋಲ್​ ದರ 102.86 ಪೈಸೆ ಈಗ ಇದೆ. ತಮಿಳುನಾಡಿಗೆ ಸಮ ಆಗಿದೆ. ಕಾಸರಗೋಡು 106.06 ಪೈಸೆ, ಆಂಧ್ರಪ್ರದೇಶದಲ್ಲಿ 109 ಇದೆ. ಹೈದರಾಬಾದ್​ನಲ್ಲೂ ಹೆಚ್ಚಿದೆ. ಮಹಾರಾಷ್ಟ್ರ 104 ಇದೆ. ರಾಜಸ್ಥಾನ 104.86 ಇದೆ. ಮಧ್ಯಪ್ರದೇಶದ 106.47 ಇದೆ. ಕುಮಾರಸ್ವಾಮಿ ಸಿಎಂ ಇದ್ದಾಗಲೂ ತೈಲ‌ಬೆಲೆ ಏರಿಕೆ ಮಾಡಿದ್ದರು. ಈಗ ಕುಮಾರಸ್ವಾಮಿ ತೈಲ ಬೆಲೆ ಬಗ್ಗೆ ಕೇಂದ್ರಕ್ಕೆ‌ ಕೇಳಲಿ. ನ್ಯಾಷನಲೈಸ್ ಮಾಡೋಕೆ ದರ ಏರಿಕೆ ಮಾಡಿದ್ದೇವೆ ಎಂದರು.

ಅನುದಾನ ವಿಚಾರದಲ್ಲಿ ಮುದ್ದೇಬಿಹಾಳ ಕ್ಷೇತ್ರದ ಶಾಸಕ ನಾಡಗೌಡ, ಜಿ. ಟಿ ಪಾಟೀಲ್ ಮುನಿಸು ವಿಚಾರವಾಗಿ ಮಾತನಾಡಿ, ಅವರು ಯಾವ ಸಂದರ್ಭದಲ್ಲಿ ಹೇಳಿದ್ದಾರೋ ನೋಡೋಣ. ಅನುದಾನ ಎಲ್ಲ ಕೊಟ್ಟಿದ್ದೇವೆ, ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲ್ಲ ಎಂದು ಪುನರುಚ್ಛಾರ ಮಾಡಿದರು.

ಇದನ್ನೂ ಓದಿ : ಗ್ಯಾರಂಟಿ ಯೋಜನೆಗಳೂ ಮುಂದುವರೆಯುತ್ತವೆ, ರಾಜ್ಯದ ಆರ್ಥಿಕತೆಯೂ ಸುಭದ್ರವಾಗಿರುತ್ತದೆ: ಸಿದ್ದರಾಮಯ್ಯ - CM Siddaramaiah

ETV Bharat Logo

Copyright © 2025 Ushodaya Enterprises Pvt. Ltd., All Rights Reserved.