ETV Bharat / state

ಹೈ-ಬೀಮ್ ಹೆಡ್ ಲೈಟ್​ ಬಳಸುವ ವಾಹನ ಸವಾರರಿಗೆ ಬಿಸಿ: ರಾಜ್ಯದಲ್ಲಿ 4 ದಿನದಲ್ಲಿ 5 ಸಾವಿರ ಕೇಸ್ ದಾಖಲು - high beam headlights effect

ಕಣ್ಣು ಕುಕ್ಕುವ ಹೈ-ಬೀಮ್ ಹೆಡ್ ಲೈಟ್ ಬಳಸಿ ವಾಹನ ಚಲಾಯಿಸಿದ ಚಾಲಕರ ವಿರುದ್ಧ 5ಸಾವಿರ ಪ್ರಕರಣ ದಾಖಲಿಸಲಾಗಿದೆ.

author img

By ETV Bharat Karnataka Team

Published : Jul 7, 2024, 9:12 AM IST

Updated : Jul 7, 2024, 9:44 AM IST

ಹೈ-ಬೀಮ್ ಹೆಡ್ ಲೈಟ್​ ಬಳಸಿದ್ದ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲು
ಹೈ-ಬೀಮ್ ಹೆಡ್ ಲೈಟ್​ ಬಳಸಿದ್ದ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲು (Video Snap)

ಬೆಂಗಳೂರು: ಹೆಚ್ಚು ಬೆಳಕು ಹೊರಸೂಸುವ ಹಾಗೂ ಕಣ್ಣು ಕುಕ್ಕುವ ಹೈ-ಬೀಮ್ ಹೆಡ್ ಲೈಟ್ ಬಳಸಿ ವಾಹನ ಚಲಾಯಿಸಿದ ಚಾಲಕರಿಗೆ ಬಿಸಿ ಮುಟ್ಟಿಸುತ್ತಿರುವ ರಾಜ್ಯ ಪೊಲೀಸರು, ಕಳೆದ ನಾಲ್ಕು ದಿನಗಳಲ್ಲಿ 5 ಸಾವಿರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಣ್ಣು ಕುಕ್ಕುವ ರೀತಿ ಎಲ್​ಇಡಿ ದೀಪ ಬಳಸಿ ವಾಹನ ಚಲಾಯಿಸಿದ ಲಾರಿ, ಟ್ರಕ್, ಬಸ್, ಆಟೋ ಸೇರಿದಂತೆ ಇನ್ನಿತರ ವಾಹನಗಳ ಚಾಲಕರ ಮೇಲೆ ರಾಜ್ಯ ಪೊಲೀಸರು ಐದು ಸಾವಿರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ 2,153, ಮೈಸೂರಿನಲ್ಲಿ 302, ತುಮಕೂರು 237, ಉತ್ತರ ಕನ್ನಡ 236, ರಾಯಚೂರು 260 ವಿಜಯನಗರ 182 ಸೇರಿದಂತೆ ರಾಜ್ಯದೆಲ್ಲೆಡೆ ಜುಲೈ 4ರ ಅಂತ್ಯಕ್ಕೆ ಐದು ಸಾವಿರ ಕೇಸ್ ದಾಖಲಿಸಿಕೊಂಡಿದ್ದಾರೆ.

ಅಧಿಕ ಬೆಳಕು ಹೊರಹಾಕುವ ಎಲ್ಇಡಿ ದೀಪಗಳಿಂದ ಎದುರುಗಡೆಯಿಂದ ಬರುವ ವಾಹನ ಸವಾರರಿಗೆ ತೀವ್ರ ತೊಂದರೆ ಆಗುತ್ತಿದೆ. ಇದರಿಂದ ಅಪಘಾತ ಸಂಖ್ಯೆ ಹೆಚ್ಚಾಗಿವೆ. ಕೇಂದ್ರ ಮೋಟಾರ್​ ಕಾಯ್ದೆಯಡಿ (ಸಿಎಂವಿ) ನಮೂದಿಸಿರುವ ಮಾನದಂಡದಂತೆ ವಾಹನ ಸವಾರರು ಹೆಡ್ ಲೈಟ್ ಅಳವಡಿಕೆ ಮಾಡಿಕೊಳ್ಳಬೇಕು. ಮಾರ್ಗಸೂಚಿ ಪಾಲನೆ ಮಾಡದಿದ್ದರೆ ಮೋಟಾರು ವಾಹನ ಕಾಯ್ದೆ 177ರಡಿ ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸಲಾಗುವುದು ಎಂದು ರಾಜ್ಯ ರಸ್ತೆ ಹಾಗೂ ಸುರಕ್ಷತೆ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಎಚ್ಚರಿಕೆ ನೀಡಿದ್ದರು.

ನಿಯಮ ಉಲ್ಲಂಘಿಸಿದ ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೊದಲ ಬಾರಿಗೆ ನಿಯಮ ಉಲ್ಲಂಘಿಸಿದರೆ 500 ರೂ., ಎರಡನೇ ಬಾರಿ ಉಲ್ಲಂಘಿಸಿದರೆ 1 ಸಾವಿರ ರೂ ದಂಡ ವಿಧಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಲೋಕ್ ಕುಮಾರ್, ಇತ್ತೀಚಿನ ದಿನಗಳಲ್ಲಿ ಎಲ್​ಇಡಿ ದೀಪ ಬಳಕೆಯಿಂದಾಗಿ ಅಪಘಾತ ಹೆಚ್ಚಾಗಿದೆ. ಪ್ರಖರ ಬೆಳಕು ಹೊರಸೂಸುವ ಹಾಗೂ ಕಣ್ಣು ಕುಕ್ಕುವ ಹಾಗೆ ಹೈ ಬೀಮ್​ ಹೆಡ್​ ಲೈಟ್​ ಬಳಸದೆ ಕೇಂದ್ರ ಮೋಟಾರ್​ ಕಾಯ್ದೆಯ ಮಾರ್ಗಸೂಚಿ ಅನುಸರಿಸಬೇಕು ಎಂದು ತಿಳಿಸಿದ್ದಾರೆ.

ಹೈ-ಬೀಮ್ ಹೆಡ್‌ಲೈಟ್‌ಗಳು ಸಾಮಾನ್ಯ ಹೆಡ್​​ಲೈಟ್‌ಗಳಿಗಿಂತಲೂ ಹೆಚ್ಚು ಪ್ರಕಾಶವಾದ ಬೆಳಕನ್ನು ಹೊರಸೂಸುತ್ತವೆ. ಅವುಗಳನ್ನು ಸೂಕ್ತವಾಗಿ ಬಳಸದಿದ್ದರೆ ಇತರ ವಾಹನ ಚಾಲಕರಿಗೆ ಅಡ್ಡಿಯಾಗಬಹುದು ಅಥವಾ ಅಪಾಯ ತಂದೊಡ್ಡುವ ಸಾಧ್ಯತೆಯಿರುತ್ತದೆ. 1989ರ ಕೇಂದ್ರ ಮೋಟಾರು ವಾಹನ ಕಾಯ್ದೆಯ ಅನುಸಾರ ವಾಹನದ ಮುಂಬದಿಯ ರಸ್ತೆ ಗೋಚರಿಸದಿದ್ದಾಗ (ಮಂಜು, ಹೊಗೆ, ಮಳೆ, ದಟ್ಟ ಕತ್ತಲು ಕವಿದ ಮತ್ತಿತರ ಸಂದರ್ಭಗಳಲ್ಲಿ) ಹೈ ಬೀಮ್ ಹೆಡ್ ಲೈಟ್ಸ್ ಬಳಸಬಹುದು.

ಆದರೆ ನಿಮ್ಮ ವಾಹನದ ಮುಂದಿರುವ ವಾಹನದ ಹಿಂದಿನ ದೀಪಗಳ ಬೆಳಕು ನಿಮಗೆ ರಸ್ತೆ ಗೋಚರಿಸಲು ಸಹಾಯವಾಗುತ್ತಿಲ್ಲ ಅಥವಾ ಮುಂದೆ ಯಾರೂ ಇಲ್ಲ ಎಂದರಷ್ಟೇ ಹೈ ಬೀಮ್ ಬಳಸಬಹುದಾಗಿದೆ. ಮತ್ತು ಎದುರು ದಿಕ್ಕಿನಿಂದ ಮತ್ತೊಂದು ವಾಹನ ಬಂದಾಗ / ಜನವಸತಿ ಪ್ರದೇಶಗಳಲ್ಲಿ / ನಗರ ಪ್ರದೇಶಗಳಲ್ಲಿ / ಸಂಚಾರ ದಟ್ಟಣೆಯಿರುವ ಕಡೆಗಳಲ್ಲಿ ಹೈ ಬೀಮ್ ಬಳಸುವಂತಿಲ್ಲ ಎಂದು ಕಾಯ್ದೆಯಲ್ಲಿ ತಿಳಿಸಲಾಗಿದೆ.

ಪ್ರಕರಣ ದಾಖಲಾದ ಜಿಲ್ಲಾವಾರು ಮಾಹಿತಿ (ಜುಲೈ 4 ಅಂತ್ಯಕ್ಕೆ):

ಜಿಲ್ಲೆ ಪ್ರಕರಣಗಳ ಸಂಖ್ಯೆ:

ಬೆಂಗಳೂರು - 2153
ಮೈಸೂರು - 302
ಮಂಗಳೂರು ನಗರ - 187
ತುಮಕೂರು - 237
ಉತ್ತರ ಕನ್ನಡ - 236
ರಾಯಚೂರು - 260
ವಿಜಯನಗರ - 182
ಧಾರವಾಡ - 144

ಇದನ್ನೂ ಓದಿ: ಬೆಂಗಳೂರು ರಸ್ತೆಗಿಳಿಯಲಿದೆ ಮತ್ತಷ್ಟು ಆಟೋ: 1 ಲಕ್ಷ ಹೊಸ ಆಟೋ ರಿಕ್ಷಾ ಪರ್ಮಿಟ್ ನೀಡಲು ಸಾರಿಗೆ ಇಲಾಖೆ ಗ್ರೀನ್ ಸಿಗ್ನಲ್ - AUTO RICKSHAW IN BENGALURU

Last Updated : Jul 7, 2024, 9:44 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.