ETV Bharat / state

ಮೈಸೂರು ಪ್ರವಾಸಿ ತಾಣಗಳ ಪ್ರಚಾರಕ್ಕೆ ಬ್ಲಾಗರ್ಸ್‌ ಮೀಟ್‌: ಪ್ರವಾಸೋದ್ಯಮ ಇಲಾಖೆಯ ನೂತನ ಪ್ರಚಾರ ತಂತ್ರ - Bloggers meet - BLOGGERS MEET

ಮೈಸೂರು ದಸರಾ ಹಿನ್ನೆಲೆ ಜಿಲ್ಲೆಯ ಪ್ರವಾಸಿ ತಾಣಗಳ ಪ್ರಚಾರಕ್ಕಾಗಿ "ಡಿಸ್ಕವರಿ ಮೈಸೂರು" ಹೆಸರಿನ ಪ್ರವಾಸೋದ್ಯಮಕ್ಕೆ ಉತ್ತೇಜನ ಕಾರ್ಯಕ್ರಮವನ್ನು ಆಯೋಜಿಸಿದೆ. ಇದರಲ್ಲಿ ಬ್ಲಾಗರ್ಸ್​ಗಳು ಪ್ರವಾಸೋದ್ಯಮ ಸ್ಥಳಗಳಿಗೆ ಭೇಟಿ ನೀಡಿ, ಅವುಗಳ ಬಗ್ಗೆ ತಮ್ಮ ಜಾಲತಾಣಗಳಲ್ಲಿ ಪ್ರಚಾರ ಮಾಡಲಿದ್ದಾರೆ.

Bloggers meet
ಬ್ಲಾಗರ್ಸ್‌ ಮೀಟ್‌ (ETV Bharat)
author img

By ETV Bharat Karnataka Team

Published : Sep 12, 2024, 7:48 PM IST

ಮೈಸೂರು ಪ್ರವಾಸಿ ತಾಣಗಳ ಪ್ರಚಾರಕ್ಕೆ ಬ್ಲಾಗರ್ಸ್‌ ಮೀಟ್‌ (ETV Bharat)

ಮೈಸೂರು: ಪ್ರವಾಸಿ ತಾಣಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವ ಬ್ಲಾಗರ್ಸ್‌ ಮೀಟ್‌ ಕಾರ್ಯಕ್ರಮವನ್ನು ಇಂದು ಮೈಸೂರಿನ ವಿಶ್ವ ಪಾರಂಪರ್ಯ ಪಟ್ಟಿಯಲ್ಲಿರುವ ಸೋಮನಾಥಪುರ ದೇವಾಲಯದಲ್ಲಿ ನಡೆಸಲಾಯಿತು.

ಅ.3 ರಿಂದ 12ರ ವರೆಗೆ ವಿಶ್ವವಿಖ್ಯಾತ ಮೈಸೂರು ದಸರಾ ನಡೆಯಲಿದ್ದು, ಈ ಅವಧಿಯಲ್ಲಿ ವಿವಿಧ ಕಾರ್ಯಕ್ರಮಗಳು ಮೈಸೂರಿನ ವಿವಿಧ ಕಡೆ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆ ಸಾಮಾಜಿಕ ಜಾಲತಾಣಗಳನ್ನು ಕೇಂದ್ರೀಕರಿಸಿ ಪ್ರವಾಸೋದ್ಯಮ ತಾಣಗಳ ಪ್ರಚಾರವನ್ನು ಜಾಲತಾಣಗಳ ಮೂಲಕ ನಡೆಸಲು "ಡಿಸ್ಕವರಿ ಮೈಸೂರು" ಹೆಸರಿನ ಕಾರ್ಯಕ್ರಮವನ್ನು ಆಯೋಜಿಸಿದೆ. ಬ್ಲಾಗರ್ಸ್​ಗಳು ಪ್ರವಾಸೋದ್ಯಮ ಸ್ಥಳಗಳಿಗೆ ಭೇಟಿ ನೀಡಿ, ಅವುಗಳ ಬಗ್ಗೆ ತಮ್ಮ ಜಾಲತಾಣಗಳಲ್ಲಿ ಪ್ರಚಾರ ಮಾಡುವ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಕಾರ್ಯಕ್ರಮ ಇದಾಗಿದೆ.

Bloggers meet
ಬ್ಲಾಗರ್ಸ್‌ ಮೀಟ್‌ (ETV Bharat)

ಇಂದು ವಿ‍ಶ್ವ ಪರಂಪರೆ ಪಟ್ಟಿಯಲ್ಲಿರುವ ಸೋಮನಾಥಪುರದ ಚನ್ನಕೇಶವ ದೇವಾಲಯಕ್ಕೆ ಭೇಟಿ ನೀಡಿದ ಬ್ಲಾಗರ್ಸ್​ಗಳ ತಂಡ ದೇವಾಲಯದ ಇತಿಹಾಸ, ವಾಸ್ತುಶಿಲ್ಪ, ದೇವಾಸ್ಥಾನದ ಶಿಲ್ಪಕಲೆ, ಕೆತ್ತನೆಯ ಶೈಲಿ, ‍ಶ್ರೀಮಂತ ಸಂಸ್ಕೃತಿ ಬಗ್ಗೆ ಗೈಡ್ಸ್​ಗಳಿಂದ ಮಾಹಿತಿ ಪಡೆಯಿತು. ಆ ಮೂಲಕ ಜಿಲ್ಲೆಯ ಪ್ರವಾಸಿ ತಾಣಗಳ ಪ್ರಚಾರಕ್ಕೆ ಮೊದಲ ಬ್ಲಾಗರ್ಸ್‌ ಮೀಟ್‌ ಇಂದು ಆರಂಭವಾಗಿದೆ.

Bloggers meet
ಬ್ಲಾಗರ್ಸ್‌ ಮೀಟ್‌ (ETV Bharat)

ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯ, ರಾಜ್ಯ ಪ್ರವಾಸೋದ್ಯಮ ಇಲಾಖೆ ಮತ್ತು ಕರ್ನಾಟಕ ಟೂರಿಸಂ ಸೊಸೈಟಿ ಸಹಯೋಗದೊಂದಿಗೆ ಈ ಬ್ಲಾಗರ್ಸ್‌ ಮೀಟ್‌ ಏರ್ಪಡಿಸಲಾಗಿದ್ದು, ಪ್ರವಾಸೋದ್ಯಮ ಇಲಾಖೆಯ ವಿನೂತನ ಪ್ರಯತ್ನವನ್ನು ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಎಂ.ಕೆ. ಸವಿತಾ ಅವರ ಮಾರ್ಗದರ್ಶನದಲ್ಲಿ ಏರ್ಪಡಿಸಲಾಗಿತ್ತು.

ಇದನ್ನೂ ಓದಿ: ದಸರಾ ಜಂಬೂ ಸವಾರಿ ಕುಶಾಲತೋಪು ಸಿಡಿಸುವ ಫಿರಂಗಿಗಳಿಗೆ ಸಾಂಪ್ರದಾಯಿಕ ಪೂಜೆ - Firing Cannons Puja

ETV Bharat Logo

Copyright © 2025 Ushodaya Enterprises Pvt. Ltd., All Rights Reserved.