ETV Bharat / state

ಮೋದಿ 3.0 ಸರ್ಕಾರದ ಭಾಗವಾಗಬೇಕೆಂಬ ಅಪೇಕ್ಷೆ ನನಗಿಲ್ಲ: ತೇಜಸ್ವಿ ಸೂರ್ಯ - Tejaswi Surya - TEJASWI SURYA

ದೇಶ, ಹಿಂದುತ್ವಕ್ಕಾಗಿ ಏನಾದರೂ ಮಾಡಬೇಕೆನ್ನುವ ಫೋಕಸ್ ಮಾತ್ರ ನನ್ನಲ್ಲಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ವಿಜೇತ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಹೇಳಿದರು.

ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ (ETV Bharat)
author img

By ETV Bharat Karnataka Team

Published : Jun 4, 2024, 9:28 PM IST

ತೇಜಸ್ವಿ ಸೂರ್ಯ (ETV Bharat)

ಬೆಂಗಳೂರು: ಮೋದಿ 3.0 ಸರ್ಕಾರದ ಭಾಗವಾಗಬೇಕೆಂಬ ಅಪೇಕ್ಷಿತ ನಾನಲ್ಲ. ದೇಶ, ಹಿಂದುತ್ವಕ್ಕಾಗಿ ಏನಾದರೂ ಮಾಡಬೇಕೆನ್ನುವ ಫೋಕಸ್ ಮಾತ್ರ ನನ್ನ ಮುಂದಿದೆ. ಬಿಜೆಪಿಗೆ ಸೇರಿದ್ದೇ ಈ ಕಾರಣಕ್ಕಾಗಿ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವಿಜೇತ ಅಭ್ಯರ್ಥಿ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಇಂದು ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡ ನಂತರ ಮತ ಎಣಿಕೆ ಕೇಂದ್ರದ ಬಳಿ 'ಈಟಿವಿ ಭಾರತ'ದ ಜೊತೆಗೆ ಮಾತನಾಡಿದ ಅವರು, ಬೆಂಗಳೂರು ದಕ್ಷಿಣ ಕ್ಷೇತ್ರದ ಮತದಾರರಿಗೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ಸತತ ಎರಡನೇ ಬಾರಿಗೆ ಜನ ಆಶೀರ್ವಾದ ಮಾಡಿದ್ದಾರೆ. 2,75,000 ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಬೇಕು, ತೇಜಸ್ವಿ ಸೂರ್ಯ ನಮ್ಮ ಧ್ವನಿಯಾಗಿ ಸಂಸತ್ತಿನಲ್ಲಿ ಕೆಲಸ ಮಾಡಬೇಕು ಎಂದು ಆಶೀರ್ವಾದ ಮಾಡಿದ್ದಾರೆ ಎಂದರು.

ಕಳೆದ ಐದು ವರ್ಷದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಕ್ಷೇತ್ರದ ಜನರಿಗೆ ಯಾವುದೇ ಕಷ್ಟ ಬಂದಾಗ ಕೋವಿಡ್ ನಂತದ ಸಂದರ್ಭ, ಬ್ಯಾಂಕ್ ಹಗರಣ, ಬಿಲ್ಡರ್ ಸಮಸ್ಯೆ ಸೇರಿ ಯಾವುದೇ ಸಣ್ಣಪುಟ್ಟ ಸಮಸ್ಯೆ ಇದ್ದಾಗ ಅವರೊಂದಿಗೆ ನಿಂತು ಕೆಲಸ ಮಾಡಿದ್ದೇನೆ. ಆ ಕಾರಣಕ್ಕಾಗಿ ಜನತೆ, ಮಾಧ್ಯಮ, ಬಿ ಪ್ಯಾಕ್, ಸಂಸತ್ ಎಲ್ಲರೂ ಕೂಡ ಉತ್ತಮ ಪರ್ಫಾರ್ಮರ್ ಸಂಸದ ಎಂದು ಸನ್ಮಾನ ಮಾಡಿದ್ದಾರೆ. ಮೊದಲ ಐದು ವರ್ಷದಲ್ಲಿ ಅನನುಭವಿಯಾಗಿ ಅನುಭವ ಪಡೆದುಕೊಳ್ಳುವಾಗ ಇಷ್ಟೆಲ್ಲಾ ಮಾಡಿದ್ದೇನೆ. ಈಗ ಬರುವ ಐದು ವರ್ಷದಲ್ಲಿ ಈ ಅನುಭವದ ಜೊತೆಗೆ ಇನ್ನಷ್ಟು ಪರಿಶ್ರಮದಿಂದ ಕೆಲಸ ಮಾಡುತ್ತೇನೆ. ಕೆಂಪೇಗೌಡರು ಕಟ್ಟಿರುವ ಸುಂದರ ನಗರವನ್ನು ವಿಶ್ವಸ್ಥರ ಮಟ್ಟದಲ್ಲಿ ಬೆಳೆಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ನಾವೆಲ್ಲರೂ ಕಂಕಣಬದ್ಧವಾಗಿ ಕೆಲಸ ಮಾಡುತ್ತೇವೆ ಎಂಬ ಭರವಸೆ ನೀಡಿದರು.

ದೇಶದಲ್ಲಿ ನಿರೀಕ್ಷೆಗಿಂತ ಸ್ವಲ್ಪ ಕಡಿಮೆ ಸ್ಥಾನಗಳು ಬಂದಿವೆ, ಇದನ್ನು ಒಪ್ಪಿಕೊಳ್ಳಬೇಕು. ಆದರೆ 2019ಕ್ಕೆ ಹೋಲಿಸಿದರೆ ನಮ್ಮ ಮತಗಳಿಕೆ ಪ್ರಮಾಣ ಹೆಚ್ಚಾಗಿದೆ. ಎರಡನೇ ವಿಶ್ವ ಯುದ್ದದ ನಂತರ ಪ್ರಪಂಚದ ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸತತ ಮೂರನೇ ಬಾರಿಗೆ ದೊಡ್ಡ ಬಹುಮತದಿಂದ ಆಯ್ಕೆಯಾದ ಉದಾಹರಣೆ ಇಲ್ಲ. ಆದರೆ ಮೋದಿ ಮಾತ್ರ ಅದನ್ನು ಮಾಡಿದ್ದಾರೆ. ಪ್ರತಿಪಕ್ಷಗಳ ಕೂಟ ಎಲ್ಲಾ ರೀತಿಯ ಸುಳ್ಳು ಭರವಸೆ ಹರಿಸಿದರೂ ಎನ್​ಡಿಎ ಪೂರ್ಣ ಬಹುಮತ ಪಡೆದುಕೊಂಡಿದೆ. ಮತ್ತೆ ಮೂರನೇ ಬಾರಿ ಮೋದಿ ಪ್ರಧಾನಿ ಆಗಲಿದ್ದಾರೆ. ಇದು ಐತಿಹಾಸಿಕ ಬಹುಮತ, ಜನತೆ ಮತ್ತೊಮ್ಮೆ ಮೋದಿಯವರನ್ನು ಗೆಲ್ಲಿಸಿದ್ದಾರೆ ಎಂದರು.

ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ವರ್ಕೌಟ್ ಆಗದ ಕಾಂಗ್ರೆಸ್ ಪ್ಲ್ಯಾನ್: ಮೊದಲ ಯತ್ನದಲ್ಲೇ ಕಾಗೇರಿಗೆ ದಾಖಲೆಯ ಗೆಲುವು - Vishveshwara Hegade Kageri

ETV Bharat Logo

Copyright © 2024 Ushodaya Enterprises Pvt. Ltd., All Rights Reserved.