ETV Bharat / state

ನನ್ನ ವಿರುದ್ಧ ಆಡಳಿತ ವಿರೋಧಿ ಅಲೆ ಇಲ್ಲ, ಭಾರಿ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ: ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ವಿಶ್ವಾಸ - PC Mohan

ಈ ಬಾರಿಯ ಚುನಾವಣೆಯಲ್ಲಿ ಕಳೆದ ಬಾರಿಗಿಂತಲೂ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನನ್ನ ವಿರುದ್ಧ ಆಡಳಿತ ವಿರೋಧಿ ಅಲೆ ಇಲ್ಲ, ಬಾರಿ ಅಂತರದಲ್ಲಿ ಗೆಲ್ಲುವ ವಿಶ್ವಾಸ ಇದೆ

author img

By ETV Bharat Karnataka Team

Published : Apr 20, 2024, 12:31 PM IST

Updated : Apr 20, 2024, 1:23 PM IST

ನನ್ನ ವಿರುದ್ಧ ಆಡಳಿತ ವಿರೋಧಿ ಅಲೆ ಇಲ್ಲ, ಭಾರಿ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ

ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಈ ಬಾರಿ ಜಿದ್ದಾಜಿದ್ದಿನ ಹೋರಾಟ ಏರ್ಪಟ್ಟಿದೆ. ಬಿಜೆಪಿಯಿಂದ ಪಿ.ಸಿ.ಮೋಹನ್ ನಾಲ್ಕನೇ ಬಾರಿ ಅದೃಷ್ಟ ಪರೀಕ್ಷೆಗೆ ಕಣಕ್ಕಿಳಿದಿದ್ದಾರೆ.

ಈ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್, ಕಳೆದ ಬಾರಿಗಿಂತಲೂ ದುಪ್ಪಟ್ಟು ಅಂತರದಲ್ಲಿ ಗೆಲುವು ಸಾಧಿಸುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಮನೆ ಮನೆಗೆ ತೆರಳುತ್ತಿದ್ದೇನೆ.‌ ಜನರ ಸಂಪರ್ಕದಲ್ಲಿದ್ದೇನೆ. ಜನರಿಂದ‌ ಉತ್ತಮ‌ ಪ್ರತಿಕ್ರಿಯೆ ಸಿಗುತ್ತಿದೆ, ವಾತಾವರಣ ಚೆನ್ನಾಗಿದೆ. ಕೇಂದ್ರ ಸರ್ಕಾರದ ಹತ್ತು ವರ್ಷದ ಕೆಲಸ ಹಾಗೂ ನಾನು ಬೆಂಗಳೂರಿಗೆ ಮಾಡಿದ ಅಭಿವೃದ್ಧಿ ಕೆಲಸದಿಂದ ಜನ ಗುರುತಿಸಿದ್ದಾರೆ. ಜನರು ನೆಮ್ಮದಿಯಿಂದಿದ್ದಾರೆ ಎಂದರು.

ಕಾಂಗ್ರೆಸ್ ಹೊಸ ಮುಖವನ್ನು ಕಣಕ್ಕಿಳಿಸಿದೆ. ಅದರಿಂದ ನಮಗೆ ಯಾವುದೇ ಸಮಸ್ಯೆ ಆಗಲ್ಲ. ನಾನು ಕಳೆದ 15 ವರ್ಷ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಹತ್ತು ವರ್ಷದಲ್ಲಿ ಕೇಂದ್ರದಿಂದ ಉತ್ತಮವಾಗಿ ಅನುದಾನ ತೆಗೆದುಕೊಂಡು ಬಂದಿದ್ದೇನೆ. ಕಳೆದ ಹದಿನೈದು ವರ್ಷದಲ್ಲಿ ಉಪ ನಗರ ರೈಲಿಗಾಗಿ ಸಂಸತ್ ಹೊರಗೆ, ಒಳಗೇ ನಾನು ಹೋರಾಟ ಮಾಡಿದ್ದೇನೆ.‌ ಇದನ್ನು ನಾನು ಜನರ ಮುಂದೆ ತೆಗೆದುಕೊಂಡು ಹೋಗುತ್ತೇನೆ. ಜನರು ಖಂಡಿತವಾಗಿ ಆಶೀರ್ವಾದ ಮಾಡುವ ವಿಶ್ವಾಸ ಇದೆ. ನಾನೂ ಕೆಲಸ ಮಾಡಿದ್ದೇನೆ. ಕೇಂದ್ರ ಸರ್ಕಾರವೂ ಕೆಲಸ ಮಾಡಿದೆ. ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆಗಬೇಕೆಂಬುದು ದೇಶದ ಬಹುತೇಕ ಜನರ ಆಸೆ ಇದೆ ಎಂದು ತಿಳಿಸಿದರು.

ಜನರ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಆದ್ಯತೆ: ಬೆಂಗಳೂರಲ್ಲಿ ಟ್ರಾಫಿಕ್ ಹೆಚ್ಚಿದೆ. ಸಾರ್ವಜನಿಕ ಸಾರಿಗೆಗೆ ನಾನು ಹೆಚ್ಚಿನ ಆದ್ಯತೆ ನೀಡುತ್ತಿದ್ದೇನೆ. ಸಬ್ ಅರ್ಬನ್ ರೈಲು ಯೋಜನೆಗೆ ನನ್ನ ಪರಿಶ್ರಮದಿಂದ ಚಾಲನೆ ಸಿಕ್ಕಿದೆ. ಮುಂದಿನ ಐದು ವರ್ಷದಲ್ಲಿ ಅದನ್ನು ಮುಗಿಸಲು ಹೆಚ್ಚಿನ ಒತ್ತು ಕೊಡುತ್ತೇನೆ. ಮೆಟ್ರೋ ಹೊಸ ಮಾರ್ಗಗಳಿಗೆ ಬೇಡಿಕೆ ಇದೆ. ಅದಕ್ಕೆ ಮಂಜೂರಾತಿ ನೀಡುವುದು, ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರುವುದು, ಸ್ಮಾರ್ಟ್ ಸಿಟಿ ಯೋಜನೆಗೆ ಹೆಚ್ಚಿನ ಅನುದಾನ ತರುವ ಪ್ರಯತ್ನ ಮಾಡಲಿದ್ದೇನೆ ಎಂದರು.

ಮೂರು ಬಾರಿ ಜನ ನನ್ನ ಕೈ ಹಿಡಿದಿದ್ದಾರೆ. ನಾಲ್ಕನೇ ಬಾರಿಯೂ ಜನರು ನನಗೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸ ಇದೆ. ಕಾರಣ ನಾನು ಕೆಲಸ ಮಾಡಿದ್ದೇನೆ.‌ ಜನರು ನೋಡುವುದು ಸಂಸದ ಏನು ಕೆಲಸ ಮಾಡಿದ್ದಾನೆ, ಜನರ ಕೈಗೆ ಸಿಗುತ್ತಾನಾ?. ಅಭಿವೃದ್ಧಿ ಕೆಲಸ ಮಾಡಿದ್ದೇನಾ ಎಂಬುದರ ಜೊತೆಗೆ ಹತ್ತು ವರ್ಷದಲ್ಲಿ ಕೇಂದ್ರ ಸರ್ಕಾರದ ಸಾಧನೆಯನ್ನು ನೋಡುತ್ತಾರೆ ಎಂದರು.

ಕೈ ಗ್ಯಾರಂಟಿಗಳು ವಿಶ್ವಾಸ ಕಳೆದುಕೊಂಡಿವೆ: ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಜನರು ವಿಶ್ವಾಸ ಕಳೆದಕೊಂಡಿದ್ದಾರೆ. 200 ಯುನಿಟ್ ಉಚಿತ ವಿದ್ಯುತ್ ಎಂದು ಹೇಳಿ, ಬೇರೆಯವರಿಗೆ ಶೇ 50ರಷ್ಟು ವಿದ್ಯುತ್ ಶುಲ್ಕ ಹೆಚ್ಚಿಸಿದ್ದಾರೆ. ಜನರು ಇದರಿಂದ ಬೇಸತ್ತಿದ್ದಾರೆ. ಹತ್ತು ಕೆ.ಜಿ. ಅಕ್ಕಿ ಕೊಡುತ್ತೇನೆ ಎಂದು ಹೇಳಿದ್ದಾರೆ. ಆದರೆ ಈಗ ಜನರಿಗೆ ಸಿಗುತ್ತಿರುವ ಐದು ಕೆ.ಜಿ. ಅಕ್ಕಿ ಕೇಂದ್ರದ ಮೋದಿ ಸರ್ಕಾರದ್ದಾಗಿದೆ. ತೆರಿಗೆ ವಂಚನೆ ಅಂತಾರೆ‌. ಸಿಎಂ ಸಿದ್ದರಾಮಯ್ಯ 14 ಬಾರಿ ಬಜೆಟ್ ಮಂಡಿಸಿದ್ದಾರೆ. ಅವರು ಈ ತರ ಅಪ್ರಬುದ್ಧರಾಗಿ ಮಾತನಾಡಬಾರದು. ನನ್ನ ಲೋಕಸಭೆ ಕ್ಷೇತ್ರದಲ್ಲಿನ ಮಹದೇವಪುರ ವಿಧಾನಸಭೆ ಕ್ಷೇತ್ರದಿಂದ ಅತಿ ಹೆಚ್ಚು ತೆರಿಗೆ ಸಂಗ್ರಹವಾಗುತ್ತೆ. ನೀವು ಎಷ್ಟು ಹಣ ಮಹದೇವಪುರಕ್ಕೆ ನೀಡುತ್ತಿದ್ದೀರಿ?. ಗಾಂಧಿನಗರದ ಚಿಕ್ಕಪೇಟೆಯಲ್ಲಿ ಅತಿ ಹೆಚ್ಚು ಜಿಎಸ್​ಟಿ ಸಂಗ್ರಹವಾಗುತ್ತಿದೆ. ನೀವು ಅದರಲ್ಲಿ ಎಷ್ಟು ಕೊಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

ರಾಜ್ಯದ 28ಕ್ಕೂ 28 ಕ್ಷೇತ್ರ ಗೆಲ್ಲುವ ವಿಶ್ವಾಸ: ಮೈತ್ರಿಯಿಂದ ಅನುಕೂಲವಾಗಿದೆಯೇ ಎಂಬ ಪ್ರಶ್ನೆಗೆ, ಈ ಬಾರಿ 28ಕ್ಕೆ 28 ಕ್ಷೇತ್ರವನ್ನೂ ಬಿಜೆಪಿ - ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುತ್ತೇವೆ. ಜೆಡಿಎಸ್ - ಬಿಜೆಪಿ ಮೈತ್ರಿಯಿಂದ ನಮಗೆ ಬಲ ಇದೆ. ದೇವೇಗೌಡರು ಪ್ರಧಾನಿ ಮೋದಿಯ ಸಾಧನೆ ಮೆಚ್ಚಿ ನಮ್ಮ ಜೊತೆ ಮೈತ್ರಿ ಮಾಡಿದ್ದಾರೆ. ದೇಶದಲ್ಲೇ ನಾವು 400ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದರು. ಈ ಬಾರಿಯ ಚುನಾವಣೆಗಿಂತಲೂ ನಾನು ದುಪ್ಪಟ್ಟು ಅಂತರದಲ್ಲಿ ಗೆಲುವು ಸಾಧಿಸುತ್ತೇನೆ ಎಂಬ ವಿಶ್ವಾಸ ಇದೆ. ಕೇಂದ್ರದಿಂದ ಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದೀರಾ ಎಂಬ ಪ್ರಶ್ನೆಗೆ, ಸಾಮಾನ್ಯ ಕಾರ್ಯಕರ್ತನಾದ ನನಗೆ ನಾಲ್ಕನೇ ಬಾರಿ ಸಂಸದನಾಗಲು ಪಕ್ಷ ಅವಕಾಶ ನೀಡಿದೆ. ಈ ಮುಂಚೆ ಎರಡು ಬಾರಿ ಶಾಸಕನಾಗಿದ್ದೇನೆ. ನನ್ನ ಆಸೆ ಇರುವುದು ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನ ಮಂತ್ರಿಯಾಗಬೇಕು ಎಂಬುದು. ಅವರು ಪ್ರಧಾನಿ ಆದರೆ ನಾನು ಎಲ್ಲವೂ ಆದ ರೀತಿ ಎಂದು ತಿಳಿಸಿದರು.

ಇದನ್ನೂ ಓದಿ: ರಾಜಧಾನಿಗೆ ಮೋದಿ ಆಗಮನ: ಭಾರಿ ಬಿಗಿ ಪೊಲೀಸ್ ಬಂದೋಬಸ್ತ್, ವಾಹನ ಸವಾರರಿಗೆ ಬದಲಿ ಮಾರ್ಗ - Modi visit Bengaluru

Last Updated : Apr 20, 2024, 1:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.