ETV Bharat / state

ಬೆಂಗಳೂರಿನ ಕೆರೆಗಳಿಗೆ ಸಂಸ್ಕರಿಸಿದ ನೀರು: ಅಂತರ್ಜಲ ಮಟ್ಟ ಹೆಚ್ಚಿಸಲು BWSSB ಯೋಜನೆ - Bengaluru Water crisis

ಬತ್ತಿದ ಕೆರೆಗಳಿಗೆ ಸಂಸ್ಕರಿಸಿದ ನೀರು ತುಂಬಿಸುವ ಮೂಲಕ ಬೆಂಗಳೂರಿನ ಅಂತರ್ಜಲ ಮಟ್ಟ ಹೆಚ್ಚಿಸಲು ಬಿಡಬ್ಲ್ಯೂಎಸ್ಎಸ್​ಬಿ ಮುಂದಾಗಿದೆ.

Bengaluru water crisis
Bengaluru water crisis
author img

By PTI

Published : Mar 10, 2024, 4:13 PM IST

ಬೆಂಗಳೂರು: ನಗರದಲ್ಲಿನ ಕೆರೆಗಳಿಗೆ ಪ್ರತಿದಿನ 1,300 ದಶಲಕ್ಷ ಲೀಟರ್ ಸಂಸ್ಕರಿಸಿದ ನೀರನ್ನು ತುಂಬಿಸುವ ಮೂಲಕ ನಗರದ ಅಂತರ್ಜಲ ಮಟ್ಟ ಹೆಚ್ಚಿಸಲು ಪಾಲಿಕೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ನಗರದ ಶೇ.50ಕ್ಕೂ ಹೆಚ್ಚು ಕೊಳವೆ ಬಾವಿಗಳು ಬತ್ತಿಹೋಗಿರುವ ಹಿನ್ನೆಲೆಯಲ್ಲಿ ಅವುಗಳಿಗೆ ಮರುಪೂರಣ ಸಾಧ್ಯವಾಗುವಂತೆ ಅಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ.

ಬೆಂಗಳೂರಿನ ನೀರಿನ ಬಿಕ್ಕಟ್ಟನ್ನು ಪರಿಹರಿಸುವ ಉದ್ದೇಶದಿಂದ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (ಬಿಡಬ್ಲ್ಯೂಎಸ್ಎಸ್​ಬಿ) ಫಿಲ್ಟರ್ ಬೋರ್​ವೆಲ್​ಗಳನ್ನು ಕೂಡ ಸ್ಥಾಪಿಸಲಿದೆ ಮತ್ತು ಪುನರುಜ್ಜೀವನಗೊಂಡ ಕೆರೆ ದಂಡೆಗಳ ಬಳಿ ನವೀನ ತಂತ್ರಜ್ಞಾನವನ್ನು ಬಳಸಿಕೊಂಡು ನೀರಿನ ಘಟಕಗಳನ್ನು ನಿರ್ಮಿಸಲಿದೆ ಎಂದು ಬಿಡಬ್ಲ್ಯೂಎಸ್ಎಸ್​ಬಿ ಅಧಿಕಾರಿಗಳು ತಿಳಿಸಿದ್ದಾರೆ.

ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್​ಸಿ) ಸಹಯೋಗದೊಂದಿಗೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಬಿಡಬ್ಲ್ಯೂಎಸ್ಎಸ್​ಬಿ ಅಧ್ಯಕ್ಷ ರಾಮ್ ಪ್ರಸಾತ್​ ಮನೋಹರ್ ಹೇಳಿದ್ದಾರೆ. ಈ ಯೋಜನೆಯು ಸುಮಾರು 2030 ಎಂಎಲ್​ಡಿಯಷ್ಟು ನೀರನ್ನು ಸರಬರಾಜು ವ್ಯವಸ್ಥೆಗೆ ಸೇರಿಸುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರದ ದೇವನಹಳ್ಳಿಗೆ ನೀರಾವರಿ ಇಲಾಖೆಯು ಕೋಟೆ ಕೆರೆಯ ನೀರನ್ನು ಇದೇ ರೀತಿಯ ತಂತ್ರಜ್ಞಾನ ಬಳಸಿ, ಸಂಸ್ಕರಿಸಿದ ನೀರನ್ನು ಪೂರೈಸುತ್ತಿದೆ.

ಈ ಯೋಜನೆಯ ಭಾಗವಾಗಿ ಬೆಳ್ಳಂದೂರು, ವರ್ತೂರು, ನಾಯಂಡಹಳ್ಳಿ, ಹೇರೋಹಳ್ಳಿ, ಅತ್ತೂರು ಮತ್ತು ಜಕ್ಕೂರು ಕೆರೆಗಳಿಗೆ ನೀರು ತುಂಬಿಸಲಾಗುವುದು. ಬೆಂಗಳೂರಿಗೆ 2,100 ಎಂಎಲ್​ಡಿ ಕುಡಿಯುವ ನೀರಿನ ಅಗತ್ಯವಿದ್ದು, ಅದರಲ್ಲಿ 1,450 ಎಂಎಲ್‌ಡಿ ಕಾವೇರಿ ನದಿಯಿಂದ ಪೂರೈಕೆಯಾಗುತ್ತದೆ ಎಂದು ರಾಮ್ ಪ್ರಸಾತ್​ ಮನೋಹರ್ ತಿಳಿಸಿದರು.

ನಗರದಲ್ಲಿ 250 ಎಂಎಲ್​ಡಿ ನೀರಿನ ಕೊರತೆ: ಮಾರ್ಚ್ ನಿಂದ ಮೇ ವರೆಗೆ ನಗರಕ್ಕೆ ಸುಮಾರು ಎಂಟು ಸಾವಿರ ಟಿಎಂಸಿ ನೀರು ಅಗತ್ಯವಿದೆ. ಆದರೆ ಜಲಾಶಯಗಳಲ್ಲಿ 34 ಟಿಎಂಸಿ ನೀರು ಲಭ್ಯವಿದೆ. ನಗರಕ್ಕೆ ಬೇಕಾದ ಉಳಿದ 650 ಎಂಎಲ್​ಡಿ ನೀರು ಬೋರ್​ವೆಲ್​ಗಳಿಂದ ಪೂರೈಕೆಯಾಗುತ್ತದೆ. ಮಳೆಯ ಕೊರತೆ, ಅಂತರ್ಜಲ ಮಟ್ಟ ಕುಸಿತ ಮತ್ತು ಅಂತರ್ಜಲದ ವಿಪರೀತ ಬಳಕೆಯಿಂದಾಗಿ ನಗರದಲ್ಲಿ 250 ಎಂಎಲ್​ಡಿ ನೀರಿನ ಕೊರತೆ ಇದೆ ಎಂದು ಅವರು ಹೇಳಿದರು.

ಏತನ್ಮಧ್ಯೆ ನೀರಿನ ಟ್ಯಾಂಕರ್​ಗಳಿಗೆ ನೀಡಲಾಗಿದ್ದ ನೋಂದಣಿ ಗಡುವನ್ನು ಮಾರ್ಚ್ 15 ರವರೆಗೆ ಬಿಡಬ್ಲ್ಯೂಎಸ್ಎಸ್​ಬಿ ವಿಸ್ತರಿಸಿದೆ. ಇಲ್ಲಿಯವರೆಗೆ 1,530 ಟ್ಯಾಂಕರ್​ಗಳು ನೋಂದಾಯಿಸಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೀರಿನ ಮಾಫಿಯಾ ಹತ್ತಿಕ್ಕಲು ಸರ್ಕಾರವು ಖಾಸಗಿ ನೀರಿನ ಟ್ಯಾಂಕರ್​ಗಳನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಬೆಂಗಳೂರು ಅಭಿವೃದ್ಧಿಯ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

"ನಗರದಲ್ಲಿ ಶೇ.50ರಷ್ಟು ಕೊಳವೆ ಬಾವಿಗಳು ಬತ್ತಿಹೋಗಿವೆ. ನಗರದ ಹೊರಗಿನ ಮೂಲಗಳಿಂದ ನೀರು ಪೂರೈಸಲು ಸಾವಿರಾರು ಖಾಸಗಿ ನೀರಿನ ಟ್ಯಾಂಕರ್‌ಗಳನ್ನು (ನೋಂದಾಯಿಸುವ ಮೂಲಕ) ನಿಯಂತ್ರಣಕ್ಕೆ ತೆಗೆದುಕೊಳ್ಳಲು ನಾವು ನಿರ್ಧರಿಸಿದ್ದೇವೆ. ಇದಕ್ಕೆ ಪಾವತಿಸಲಾಗುವ ಶುಲ್ಕವನ್ನು ಅಧಿಕಾರಿಗಳು ನಿರ್ಧರಿಸಲಿದ್ದಾರೆ. ಬಳಕೆಯಾಗದ ಹಾಲಿನ ಟ್ಯಾಂಕರ್​ಗಳ ಮೂಲಕವೂ ನೀರು ಸರಬರಾಜು ಮಾಡಲಾಗುವುದು" ಎಂದು ಶಿವಕುಮಾರ್ ಹೇಳಿದರು.

ಏತನ್ಮಧ್ಯೆ ಬೆಂಗಳೂರಿನ ನೀರಿನ ಬಿಕ್ಕಟ್ಟಿನ ಅಸಮರ್ಪಕ ನಿರ್ವಹಣೆಯನ್ನು ಖಂಡಿಸಿ ಪ್ರತಿಪಕ್ಷ ಬಿಜೆಪಿ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲು ಯೋಜಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, "ಅವರು ಯಾವುದೇ ರಚನಾತ್ಮಕ ಸಲಹೆಗಳನ್ನು ನೀಡುವುದಾದರೆ ನಾವು ಖಂಡಿತವಾಗಿಯೂ ಅವುಗಳನ್ನು ಪರಿಗಣಿಸಲು ಸಿದ್ಧರಿದ್ದೇವೆ" ಎಂದರು.

ಇದನ್ನೂ ಓದಿ: ಬೆಂಗಳೂರಲ್ಲಿ ಅನುಮತಿ ಪಡೆಯದೆ ಕೊಳವೆ ಬಾವಿ ಕೊರೆದರೆ ಕಾನೂನು ಕ್ರಮ: BWSSB

ETV Bharat Logo

Copyright © 2024 Ushodaya Enterprises Pvt. Ltd., All Rights Reserved.