ETV Bharat / state

ಆನೇಕಲ್​: ಪರೀಕ್ಷೆ ಫೇಲ್​ ವಿಚಾರ ಅಪ್ಪನಿಗೆ ಗೊತ್ತಾಗುತ್ತೆ ಎಂಬ ಭಯದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ - Student commits suicide - STUDENT COMMITS SUICIDE

ಬೆಂಗಳೂರು ನಗರಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಪ್ರದೇಶ ವ್ಯಾಪ್ತಿಯಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Student suicide
ವಿದ್ಯಾರ್ಥಿ ಆತ್ಮಹತ್ಯೆ (ETV Bharat)
author img

By ETV Bharat Karnataka Team

Published : May 12, 2024, 5:34 PM IST

Updated : May 12, 2024, 5:41 PM IST

ಆನೇಕಲ್ (ಬೆಂಗಳೂರು): ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಕೆರೆಗೆ ಹಾರಿ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕು ಜಿಗಣಿ ಪ್ರದೇಶದಲ್ಲಿ ನಡೆದಿದೆ. ಬಿಹಾರ ಮೂಲದ ಅಮೃತೇಶ್ ಪಾಂಡೆ(21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಹೇಮಲತಾ ಪಾಂಡೆ-ವಿಜಯ್ ಶಂಕರ್ ದಂಪತಿ ಹಾಗೂ ಪುತ್ರ ಅಮೃತೇಶ್ ಸಹಿತ ಕೆಲ ವರ್ಷಗಳ ಹಿಂದೆ ಜಿಗಣಿಗೆ ಬಂದು ನೆಲೆಸಿದ್ದರು. ಮಗನನ್ನು ಮೈಸೂರು ರಸ್ತೆಯ ಆರ್.ವಿ ಕಾಲೇಜಿಗೆ ಸೇರಿಸಿದ್ದರು. ಅದರಂತೆ 3ನೇ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಅಮೃತೇಶ್ ಹಾಸ್ಟೆಲ್​ನಿಂದ ಕಾಲೇಜಿಗೆ ಹೋಗಿ ಬರುತ್ತಿದ್ದ. ಕಾಲೇಜಿಗೆ ಆಗಾಗ್ಗೆ ಗೈರು ಹಾಜರಾಗಿ ಎರಡು ವಿಷಯದಲ್ಲಿ ಅನುತ್ತೀರ್ಣನಾಗಿದ್ದ.

ಲೋಕಸಭಾ ಚುನಾವಣೆಗೆ ಮತ ಹಾಕಲು ಜಿಗಣಿಗೆ ಬಂದಿದ್ದ ಅಮೃತೇಶ್, ಕಾಲೇಜಿನವರು ಅಪ್ಪನಿಗೆ ಫೋನ್ ಮಾಡ್ತಾರೆ ಅಂತ ತಂದೆ ಫೋನ್​ನಲ್ಲಿದ್ದ ನಂಬರ್​ಗಳನ್ನು ಬ್ಲಾಕ್ ಮಾಡಿದ್ದನು. ಈ ವೇಳೆ ಆರನೇ ಸೆಮಿಸ್ಟರ್​ಗೆ ಆಡ್ಮಿಷನ್ ಮಾಡಿ ಕಾಲೇಜಿಗೆ ಬಿಟ್ಟು ಬರ್ತೀನಿ ಎಂದು ಅಮೃತೇಶ್​ಗೆ ತಂದೆ ಹೇಳಿದ್ದರು. ತಂದೆ ನನ್ನ ಜೊತೆ ಕಾಲೇಜಿಗೆ ಬಂದ್ರೆ ಫೇಲ್ ಆದ ವಿಚಾರ ತಿಳಿಯುತ್ತೆ ಅಂತ ಹೆದರಿ ಮೇ 10ರಂದು ಮನೆಯಿಂದ ಹೊರಟ ಅಮೃತೇಶ್ ಜಿಗಣಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಗನ ನಾಪತ್ತೆ ಬಳಿಕ ಪೋಷಕರು ಎಲ್ಲೆಡೆ ಹುಡುಕಾಟ ನಡೆಸಿದ್ದು ಜಿಗಣಿ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹ ತೇಲುವುದನ್ನು ಕಂಡ ಸ್ಥಳೀಯರು ಕೂಡಲೇ ಜಿಗಣಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸದ್ಯ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂಓದಿ:ತುಮಕೂರಿನಲ್ಲಿ ಭೀಕರ ಕಾರು ಅಪಘಾತ: ಇಬ್ಬರು ಮುಖ್ಯ ಶಿಕ್ಷಕರು ಸಾವು, ಮತ್ತಿಬ್ಬರು ಗಂಭೀರ - Tumakuru Car Accident

Last Updated : May 12, 2024, 5:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.