ETV Bharat / state

ಬೆಂಗಳೂರಲ್ಲಿ ನೀರಿನ ಅಭಾವ: ಲಾಲ್​ಬಾಗ್​, ಕಬ್ಬನ್​ ಪಾರ್ಕ್ ನಿರ್ವಹಣೆಯೇ ದೊಡ್ಡ ಸವಾಲು - Lack of water - LACK OF WATER

ಕಬ್ಬನ್​ ಪಾರ್ಕ್ ಮತ್ತು ಲಾಲ್​ಬಾಗ್​ಗೆ ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ ಪ್ರಸ್ತುತ 0.8 ಎಂಲ್​ಡಿ ನೀರು ಲಭ್ಯವಾಗುತ್ತಿದೆ. ಇದರಿಂದ ಉದ್ಯಾನ ನಿರ್ವಹಣೆ ಮಾಡಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

lalbagh cubbon park
ಕಬ್ಬನ್​ ಪಾರ್ಕ್, ಲಾಲ್​ಬಾಗ್
author img

By ETV Bharat Karnataka Team

Published : Apr 6, 2024, 8:21 PM IST

ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಅಭಾವದ ನಡುವೆಯೂ ನಗರದ ಶಾಸ್ವಕೋಶದಂತಿರುವ ಲಾಲ್​ ಬಾಗ್​ ಮತ್ತು ಕಬ್ಬನ್​ ಪಾರ್ಕ್​ಅನ್ನು ನಿರ್ವಹಣೆ ಮಾಡುವುದು ಈಗ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಕಬ್ಬನ್​ ಪಾರ್ಕ್ ಮತ್ತು ಲಾಲ್​ಬಾಗ್​ಗೆ ತಲಾ 1.5 ಎಂಎಲ್​ಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ಈ ಘಟಕಗಳಲ್ಲಿ ಪ್ರಸ್ತುತ 0.8 ಎಂಲ್​ಡಿ ನೀರು ಲಭ್ಯವಾಗುತ್ತಿದೆ. ಇದರಿಂದ ಉದ್ಯಾನವನ್ನು ನಿರ್ವಹಣೆ ಮಾಡಲಾಗುತ್ತಿದೆ. ಆದರೆ, ಎಲ್ಲ ಗಿಡಗಳಿಗೆ ಅಗತ್ಯವಿರುವಷ್ಟು ಪೂರೈಕೆ ಮಾಡುವುದು ದೊಡ್ಡ ಸವಾಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಳೆಗಾದಲ್ಲಿ ಇಡೀ ಉದ್ಯಾನವನದ ಹುಲ್ಲು ಹಾಸು ಮತ್ತು ಗಿಡಮರಗಳಿಗೆ ಅಗತ್ಯ ಪ್ರಮಾಣಕ್ಕಿಂತಲೂ ಹೆಚ್ಚು ನೀರನ್ನು ಲಭ್ಯವಾಗುತ್ತಿತ್ತು. ಇದೀಗ ನೀರಿನ ಕೊರತೆ ಉಂಟಾಗುತ್ತಿರುವುದರಿಂದ ಅನಗತ್ಯವಾಗಿರುವ ಹುಲ್ಲಿನ ಹಾಸುಗಳು ಮತ್ತು ಬೃಹತ್​ ಮರಗಳಿಗೆ ನೀರು ಹರಿಸುವ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ.

ಆದರೆ ನೀರು ಹರಿಸದಿದ್ದಲ್ಲಿ ಸತ್ತು ಹೋಗಲಿವೆ ಎನ್ನುವಂತಹ ಗಿಡಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತಿದ್ದು, ಅಗತ್ಯವಿರುವಷ್ಟ ನೀರನ್ನು ಹರಿಸಲಾಗುತ್ತಿದೆ. ಆದರೆ ಪ್ರಸ್ತುತ ಮಳೆಯಾದಲ್ಲಿ ಉದ್ಯಾನವನದ ನಿರ್ವಹಣೆ ಮಾಡುವುದಕ್ಕೆ ಉತ್ತಮವಾಗಲಿದೆ ಎಂದು ಲಾಲ್​​​ಬಾಗ್​ ಉಪನಿರ್ದೇಶಕಿ ಕುಸುಮಾ ಸ್ಪಷ್ಟಪಡಿಸಿದರು.

ನರ್ಸರಿ ಚಟುವಟಿಕೆಗಳಿಗೆ ಕೊಳವೆ ಬಾವಿಗಳ ನೀರು: ಇಡೀ ಉದ್ಯಾನವನದಲ್ಲಿ ಹುಲ್ಲಿನ ಹಾಸು ಸೇರಿದಂತೆ ಗಿಡ ಮರಗಳಿಗೆ ತ್ಯಾಜ್ಯ ನೀರು ಸಂಸ್ಕರಣೆ ಮಾಡಿ ಹರಿಸಲಾಗುತ್ತಿದೆ. ಆದರೆ ನರ್ಸರಿ ಚಟುವಟಿಕೆಗಳಿಗೆ ಕೊಳವೆಬಾವಿ ನೀರನ್ನು ಬಳಸಲಾಗುತ್ತಿದೆ. ಪ್ರಸ್ತುತ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕುಸಿದಿದ್ದು, ಅಲ್ಪ ಪ್ರಮಾಣದಲ್ಲಿ ಸಮಸ್ಯೆ ತಲೆದೋರಿದೆ ಎಂದು ಉದ್ಯಾನವನದ ಸಿಬ್ಬಂದಿ ಮಾಹಿತಿ ನೀಡಿದರು.

ಇಡೀ ಲಾಲ್​ಬಾಗ್​ನಲ್ಲಿ ನೀರಿನ ಇಂಗುವ ಗುಂಡಿಗಳನ್ನು ಅಳವಡಿಸಲಾಗಿದೆ. ಅದೇ ಕಾರಣದಿಂದ ಉದ್ಯಾನವನದಲ್ಲಿ ಬೀಳುವ ಮಳೆ ಆದ ಸಂದರ್ಭದಲ್ಲಿ ಒಂದು ಹನಿ ಕೂಡ ಹೊರಕ್ಕೆ ಹೋಗದಂತೆ ವ್ಯವಸ್ಥೆ ಮಾಡಲಾಗಿದೆ. ಇದೇ ಕಾರಣದಿಂದ ಇಂದಿಗೂ ಕೊಳವೆ ಬಾವಿಗಳಲ್ಲಿ ನೀರು ಲಭ್ಯವಾಗುತ್ತಿದೆ ಎಂದು ವಿವರಿಸಿದರು.

ಸಸ್ಯಕಾಶಿ ಲಾಲ್​ಬಾಗ್​ 240 ಎಕರೆ ವಿಸ್ತೀರ್ಣವಿದ್ದು, ಒಟ್ಟು 18,000 ಸಸ್ಯಗಳು ಹಾಗೂ 3,000ಕ್ಕೂ ಹೆಚ್ಚು ಜಾತಿಯ ಮರಗಳಿವೆ. ಈಗ ನೀರಿನ ಕೊರತೆಯಿಂದ ಇವುಗಳ ನಿರ್ವಹಣೆ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಕೈಗಾರಿಕೆಗಳಿಗೆ ಪ್ರತ್ಯೇಕ ಪೈಪ್‌ಲೈನ್​ದಿಂದ ಸಂಸ್ಕರಿಸಿದ ನೀರು ಪೂರೈಕೆ: ರಾಮ್‌ ಪ್ರಸಾತ್‌ ಮನೋಹರ್‌ - Water board meeting

ETV Bharat Logo

Copyright © 2025 Ushodaya Enterprises Pvt. Ltd., All Rights Reserved.