ETV Bharat / state

ಬೆಳಗಾವಿ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಓರ್ವ ಸಾವು - Belgavi

ಬೆಳಗಾವಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಗಾಯಗೊಂಡಿದ್ದ ಒಂದೇ ಮನೆಯ ಐವರು ಸದಸ್ಯರಲ್ಲಿ ಹೇಮಂತ್ ಭಟ್ ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

gas-cylinder-explosion case
ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣ
author img

By ETV Bharat Karnataka Team

Published : Jan 29, 2024, 2:23 PM IST

ಬೆಳಗಾವಿ: ಜಿಲ್ಲೆಯ ಬಸವನ ಗಲ್ಲಿಯಲ್ಲಿ ಭೀಕರ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿದ್ದ ಐವರು ಗಾಯಾಳುಗಳ ಪೈಕಿ ಒಬ್ಬರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಹೇಮಂತ್ ಭಟ್(27) ಮೃತರು.

ಅಪಾರ್ಟ್​ಮೆಂಟ್ ಮನೆಯಲ್ಲಿ ಗ್ಯಾಸ್ ಒಲೆ ಹೊತ್ತಿಸುವಾಗ ಅವಘಡ ಸಂಭವಿಸಿತ್ತು. ಲೈಟರ್ ಆನ್ ಮಾಡುತ್ತಿದ್ದಂತೆ ಸಿಲಿಂಡರ್ ಸ್ಫೋಟಗೊಂಡಿತ್ತು. ಘಟನೆಯಲ್ಲಿ‌ ಭಟ್ ಕುಟುಂಬದ ಐವರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಗಾಯಾಳುಗಳನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು.

ಆದರೆ ಭಾನುವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಹೇಮಂತ್ ಭಟ್(27) ಕೊನೆಯುಸಿರೆಳೆದಿದ್ದಾರೆ. ಲಲಿತಾ ಭಟ್(48), ಮೋಹನ್ ಭಟ್(56), ಕಾಮಾಕ್ಷಿ ಭಟ್(80), ಗೋಪಿಕೃಷ್ಣ ಭಟ್ (84) ಉಳಿದ ಗಾಯಾಳುಗಳಾಗಿದ್ದು ಚಿಕಿತ್ಸೆ ಮುಂದುವರಿದಿದೆ. ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಳಗಾವಿ : ಗ್ಯಾಸ್ ಸಿಲಿಂಡರ್ ಸ್ಫೋಟ, ಐವರಿಗೆ ಗಂಭೀರ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.