ETV Bharat / state

ದಾವಣಗೆರೆ: ಹೊನ್ನಾಳಿಯಲ್ಲಿ ಕರಡಿ ಸೆರೆ, ಮತ್ತೊಂದೆಡೆ ರಸ್ತೆಯಲ್ಲಿ ಚಿರತೆ - Bear Captured

ದಾವಣಗೆರೆಯ ಹೊನ್ನಾಳಿಯ ಗ್ರಾಮವೊಂದರಲ್ಲಿ ಕರಡಿ ಸೆರೆ ಹಿಡಿಯಲಾಗಿದೆ. ಮತ್ತೊಂದೆಡೆ, ಚಿರತೆ ಕಾಣಿಸಿಕೊಂಡು ಜನರಿಗೆ ಭೀತಿ ಉಂಟು ಮಾಡಿತು.

bear
ಕರಡಿ, ಚಿರತೆ (ETV Bharat)
author img

By ETV Bharat Karnataka Team

Published : Aug 2, 2024, 9:22 PM IST

ಕರಡಿ ಸೆರೆ (ETV Bharat)

ದಾವಣಗೆರೆ: ಹೊನ್ನಾಳಿ ತಾಲೂಕಿನ ನೆಲಹೊನ್ನೆ ಗ್ರಾಮದ ಹೊರವಲಯದಲ್ಲಿ ಕಳೆದ ಮೂರು ತಿಂಗಳಿಂದಲೂ ಬೀಡುಬಿಟ್ಟು, ಜನರಿಗೆ ಆತಂಕ ಸೃಷ್ಟಿಸಿದ್ದ ಕರಡಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದಾರೆ. ಒಟ್ಟಾರೆ, ಮೂರು ಕರಡಿಗಳು ಆಹಾರ ಅರಸಿಕೊಂಡು ಗ್ರಾಮದತ್ತ ಬಂದಿದ್ದು, ಗ್ರಾಮಸ್ಥರು ಭಯದಲ್ಲಿದ್ದಾರೆ.

ಕರಡಿಗಳಿಂದಾಗಿ ರೈತರು ಜಮೀನುಗಳಿಗೆ ಹೋಗಲು ಹಿಂದೇಟು ಹಾಕುವಂತಾಗಿದೆ. ಇದೀಗ, ಅರಣ್ಯ ಇಲಾಖೆ ಸಿಬ್ಬಂದಿ ಮೂರು ಕರಡಿಗಳಲ್ಲಿ ಒಂದನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನೆಲಹೊನ್ನೆ ಗ್ರಾಮದಲ್ಲಿ ಕರಡಿಗಳು ಓಡಾಡುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಬಳಿಕ ಸೆರೆ ಹಿಡಿಯುವಂತೆ ಇಲಾಖೆ ಸಿಬ್ಬಂದಿಗೆ ಗ್ರಾಮಸ್ಥರು ಮನವಿ ಮಾಡಿದ್ದರು.

ಅರಣ್ಯ ಇಲಾಖೆಯಿಂದ ಬೋನ್ ಇಟ್ಟು ಹಲವು ದಿನಗಳಿಂದ ಕರಡಿ ಹಿಡಿಯಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಬಳಿಕ ಗ್ರಾಮಸ್ಥರ ಸಹಾಯದಿಂದ ಒಂದು ಕರಡಿಯನ್ನು ಸೆರೆಹಿಡಿಯಲಾಗಿದೆ. ಇನ್ನೂ ಎರಡು ಕರಡಿಗಳು ಸೆರೆ ಸಿಕ್ಕಿಲ್ಲ. ಅವುಗಳನ್ನೂ ಸೆರೆ ಹಿಡಿಯುವಂತೆ ಜನರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ಜಮೀನಿಗೆ ಹೋದ ರೈತನ ಮೇಲೆ ಕರಡಿ ಹಿಂಡು ದಾಳಿ; ಶ್ವಾನಗಳಿಂದ ಉಳಿತು ರೈತನ ಪ್ರಾಣ - DOGS SAVED A FARMER

ಚಿರತೆ ಪ್ರತ್ಯಕ್ಷ: ರಾತ್ರಿ ವೇಳೆ ರಸ್ತೆಯಲ್ಲಿ ಮಲಗಿದ್ದ ಚಿರತೆ ಕಂಡು ವಾಹನ ಸವಾರರು ಭಯಭೀತರಾದ ಘಟನೆ ದಾವಣಗೆರೆ ತಾಲೂಕಿನ ಕೊಂಡಜ್ಜಿ ಗ್ರಾಮದ ಶಂಕ್ರನಹಳ್ಳಿ ರಸ್ತೆ ಬಳಿ ನಡೆದಿದೆ. ಸವಾರರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಚಿರತೆಯ ಚಲನವಲನದ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

ಕೊಂಡಜ್ಜಿ ಗ್ರಾಮದ ಕೆಲವರು ಕೆಲಸಕ್ಕೆ ಹೋಗಿ, ಮನೆಗೆ ಹಿಂದಿರುಗುವಾಗ ಚಿರತೆ ಕಾಣಿಸಿಕೊಂಡಿದೆ. ರಸ್ತೆಯಲ್ಲಿದ್ದ ಚಿರತೆಯು ವಾಹನ ಕಂಡು ತಕ್ಷಣ ಎದ್ದು ಪೊದೆಗಳತ್ತ ಹೋಗುತ್ತಿರುವ ದೃಶ್ಯಗಳನ್ನು ವಿಡಿಯೋದಲ್ಲಿ ಸೆರೆಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯುವಂತೆ ಜನರು ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.