ETV Bharat / state

ಸಿಎಂ ಸಿದ್ದರಾಮಯ್ಯನವರ ದ್ವೇಷ ರಾಜಕಾರಣಕ್ಕೆ ನಾವು ಬಗ್ಗಲ್ಲ: ಸಚಿವ ಪ್ರಹ್ಲಾದ್​​ ಜೋಶಿ - UNION MINISTER PRALHAD JOSHI

ಕೋವಿಡ್​ ಹಗರಣದ ಕುರಿತು ಸರ್ಕಾರ ಪ್ರಾಸಿಕ್ಯೂಷನ್​ಗೆ ಶಿಫಾರಸು ಮಾಡಿರುವುದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಪ್ರತಿಕ್ರಿಯಿಸಿ, ಸಿಎಂ ಸಿದ್ದರಾಮಯ್ಯನವರ ದ್ವೇಷದ ರಾಜಕಾರಣಕ್ಕೆ ನಾವು ಬಗ್ಗಲ್ಲ, ತನಿಖೆ ಎದುರಿಸುತ್ತೇವೆ ಎಂದರು.

ಸಚಿವ ಪ್ರಹ್ಲಾದ್​​ ಜೋಶಿ
ಸಚಿವ ಪ್ರಹ್ಲಾದ್​​ ಜೋಶಿ (ETV Bharat)
author img

By ETV Bharat Karnataka Team

Published : Nov 10, 2024, 10:22 AM IST

ಹಾವೇರಿ: "ಸಿಎಂ ಸಿದ್ದರಾಮಯ್ಯನವರ ದ್ವೇಷದ ರಾಜಕಾರಣಕ್ಕೆ ನಾವು ಬಗ್ಗಲ್ಲ, ತನಿಖೆ ಎದುರಿಸುತ್ತೇವೆ" ಎಂದು ಕೋವಿಡ್​ ಹಗರಣದ ಕುರಿತು ಸರ್ಕಾರ ಪ್ರಾಸಿಕ್ಯೂಷನ್​ಗೆ ಶಿಫಾರಸು ಮಾಡಿರುವುದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಪ್ರತಿಕ್ರಿಯಿಸಿದ್ದಾರೆ.

ಹಾನಗಲ್​​ ತಾಲೂಕು ಹರನಗಿರಿಯಲ್ಲಿ ಶನಿವಾರ ಮಾತನಾಡಿದ ಅವರು, "ಕೊರೊನಾ ಹಗರಣದ ವಿಚಾರದಲ್ಲಿ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆದಿದೆ. ಹಾಗಾದರೆ ಒಂದೂವರೆ ವರ್ಷ ಯಾಕೆ ತೆಗೆದುಕೊಂಡರು?. ಅವರು ತನಿಖೆ ಮಾಡಲಿ, ನಾವು ಎದುರಿಸುತ್ತೇವೆ​. ಸಿದ್ದರಾಮಯ್ಯ ಸರ್ಕಾರದಲ್ಲಿ ಕಾರ್ಮಿಕ ಇಲಾಖೆ, ಅಬಕಾರಿ ಇಲಾಖೆಗಳಲ್ಲಿ ಹಗರಣಗಳು ನಡೆದಿವೆ. ತಮ್ಮ ಮೇಲೆ ಆರೋಪಗಳು ಬಂದ ಬಳಿಕ ಸಿದ್ದರಾಮಯ್ಯ ದ್ವೇಷದ ರಾಜಕಾರಣ ಶುರು ಮಾಡಿದ್ದಾರೆ" ಎಂದು ಆರೋಪಿಸಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ​​ ಹೇಳಿಕೆ. (ETV Bharat)

ಹಾವೇರಿ ರೈತನ ಆತ್ಮಹತ್ಯೆ ಕುರಿತು..: "ಹಾವೇರಿ ಜಿಲ್ಲೆಯಲ್ಲಿ 1964ರಲ್ಲಿ ಖರೀದಿಯಾದ ಜಮೀನನ್ನು 2015ರಲ್ಲಿ ವಕ್ಫ್​ ಆಸ್ತಿಯನ್ನಾಗಿ ನಮೂದು ಮಾಡಲಾಗಿದೆ. ಬೆಳೆದು ನಿಂತ ಹತ್ತಿ, ಕಬ್ಬು ಬೆಳೆ ನಾಶ ಮಾಡಿ ವಶಪಡಿಸಿಕೊಂಡಿದ್ದಾರೆ. 52 ವರ್ಷ ರೈತ ಆ ಜಮೀನನ್ನು ಉಳುಮೆ ಮಾಡಿದ್ದಾನೆ. ಯಾವುದೇ ನೋಟಿಸ್ ನೀಡದೆ ಜಮೀನನ್ನು ವಶಪಡಿಸಿಕೊಂಡಿದ್ದಾರೆ. ಇದರಿಂದ ನೊಂದು ರೈತ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೈತ ಸಾಲ ಮಾಡಿಕೊಂಡಿರಬಹುದು. ಆದರೆ ಆತನ ಸಾವಿಗೆ ವಕ್ಫ್​ ಕೂಡ ಕಾರಣ. ಯಾವ ಭೂಮಿ ಕಳೆದುಕೊಂಡಿದ್ದಾನೋ ಅಲ್ಲಿಯೇ ರೈತ ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ. ಮುಸ್ಲಿಂ ಕುಟುಂಬದ ಜಮೀನು ಸಹ ವಶಪಡಿಸಿಕೊಂಡಿದ್ದಾರೆ. ನಾಲ್ಕುವರೆ ಎಕರೆ ಜಮೀನು ಹೋಗಿದೆ‌. ಎಲ್ಲಾ ಜಮೀನು ಹೋದರೆ ಏನು ಮಾಡಬೇಕು? ಎಂದು ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

ಮೃತ ರೈತನ ಮನೆಗೆ ಬಿಜೆಪಿ ನಿಯೋಗ ಭೇಟಿ: ಮೃತ ರೈತನ ನಿವಾಸಕ್ಕೆ ಶನಿವಾರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ಎನ್.ರವಿಕುಮಾರ್​ ಭೇಟಿ ನೀಡಿದರು. ರುದ್ರಪ್ಪನ ತಂದೆ ಚನ್ನಪ್ಪ ಮಾತನಾಡಿ, "ತಮ್ಮ ಮಗ ಆತ್ಮಹತ್ಯೆ ಮಾಡಿಕೊಳ್ಳಲು ಪಹಣಿಯಲ್ಲಿ ವಕ್ಫ್​ ಅಂತ ದಾಖಲಾಗಿದ್ದೇ ಕಾರಣ" ಎಂದರು.

ಇದನ್ನೂ ಓದಿ: ಅಂದಾಜಿನ ಪ್ರಕಾರ ಕೋವಿಡ್ ವೇಳೆ ₹ 10 - 15 ಸಾವಿರ ಕೋಟಿಯಷ್ಟು ಭ್ರಷ್ಟಾಚಾರ ನಡೆದಿದೆ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.