ಬೆಂಗಳೂರು: ರೇಣುಕಾಸ್ವಾಮಿ ಎಂಬ ಯುವಕನ ಹತ್ಯೆ ನಡೆದ ಆರ್.ಆರ್.ನಗರದ ಪಟ್ಟಣಗೆರೆ ಮುಖ್ಯ ರಸ್ತೆಯ ಹೆಮ್ಮಿಗೆಪುರದಲ್ಲಿರುವ ಶೆಡ್ ಮೇಲಿನ ಆಸ್ತಿ ತೆರಿಗೆ ಪಾವತಿಸುವಂತೆ ಅದರ ಮಾಲೀಕರಿಗೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ.
ಈ ಶೆಡ್ ಬಿ.ಹೆಚ್.ಇ.ಎಲ್ ಬಡಾವಣೆಯಲ್ಲಿದೆ. ಇದಕ್ಕೆ 2008-09ರಿಂದ ಆಸ್ತಿ ತೆರಿಗೆ ಪಾವತಿಸಲು ಪಾಲಿಕೆ ಅವಕಾಶ ಕಲ್ಪಿಸಿದೆ. ಆದರೆ ಇದುವರೆಗೂ ತೆರಿಗೆ ಪಾವತಿಸಿಲ್ಲ. ಹೀಗಾಗಿ, ಶೆಡ್ ಮಾಲೀಕ ಜಯಣ್ಣ ಎಂಬವರಿಗೆ ನೋಟಿಸ್ ನೀಡಲಾಗಿದೆ.
ತೆರಿಗೆ ಪಾವತಿ ತಪ್ಪಿದ್ದಲ್ಲಿ ನಗರಪಾಲಿಕೆಯಲ್ಲಿ ಲಭ್ಯವಿರುವ ಮಾಹಿತಿಯ ಆಧಾರದ ಮೇರೆಗೆ ಕಾನೂನಿನ್ವಯ ತೆರಿಗೆ ನಿರ್ಧರಿಸಿ, ತಿಳುವಳಿಕೆ ಪತ್ರ ನೀಡಲಾಗುವುದು. ತೆರಿಗೆಯನ್ನು ಪಾವತಿಸಿದ್ದಲ್ಲಿ ದಾಖಲೆ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಕೊಲೆ ಆರೋಪಿಗಳ ಪೊಲೀಸ್ ಕಸ್ಟಡಿ ಇಂದು ಅಂತ್ಯ: ಮತ್ತೊಮ್ಮೆ ಜೈಲು ಸೇರ್ತಾರಾ ದರ್ಶನ್? - Darshan Police custody Ends