ETV Bharat / state

ರಾಜ್ಯದೆಲ್ಲೆಡೆ ಆಯುಧ ಪೂಜೆ ಸಡಗರ: ಆಟೋ, ಬಸ್, ಲಾರಿಗಳಿಗೆ ಆಕರ್ಷಕ ಸಿಂಗಾರ - AYUDHA POOJA

ಶಿವಮೊಗ್ಗದಲ್ಲಿ ಡಿಎಆರ್​ ಪೊಲೀಸರ ವಾಹನಗಳು, ಲಾರಿ ಹಾಗು ಆಟೋಗಳಿಗೆ ಆಯುಧ ಪೂಜೆ ನೆರವೇರಿಸಲಾಯಿತು.

Ayudha Pooja
ಆಟೋಗಳಿಗೆ ಆಯುಧ ಪೂಜೆ ಸಲ್ಲಿಕೆ (ETV Bharat)
author img

By ETV Bharat Karnataka Team

Published : Oct 11, 2024, 5:20 PM IST

ಶಿವಮೊಗ್ಗ: ದಸರಾ ಹಬ್ಬದಲ್ಲಿ ಆಯುಧ ಪೂಜೆಗೆ ವಿಶೇಷ ಮಹತ್ವವಿದೆ. ಪಾಂಡವರು ತಮ್ಮ ಅಜ್ಞಾತವಾಸ ಮುಗಿಸಿಕೊಂಡು ಬಂದು ತಮ್ಮ ಆಯುಧಗಳನ್ನಿಟ್ಟ ಶಮಿ ಮರಕ್ಕೆ ಪೂಜೆ ಸಲ್ಲಿಸಿ, ನಂತರ ಆಯುಧವನ್ನು ತೆಗೆದುಕೊಂಡು ಯುದ್ದಕ್ಕೆ ಹೋದರು ಎಂಬ ಉಲ್ಲೇಖ ಮಹಾಭಾರತದಲ್ಲಿದೆ. ಈ ಹಿನ್ನೆಲೆಯಲ್ಲಿ ನವರಾತ್ರಿಯ ಕೊನೆಯ ದಿನ ಆಯುಧ ಪೂಜೆ ನಡೆಯುತ್ತದೆ. ಇದೇ ರೀತಿ ಇಂದು ಜಿಲ್ಲೆಯಲ್ಲಿಯೂ ಆಯುಧ ಪೂಜೆ ಅದ್ಧೂರಿಯಾಗಿ ಜರುಗಿತು.

ಡಿಎಆರ್ ಪೊಲೀಸರು ತಮ್ಮ ವಾಹನಗಳನ್ನು ತೊಳೆದು ಬಾಳೆದಿಂಡು, ಮಾವು, ಬಲೂನ್ ಕಟ್ಟಿ, ಅರಿಶಿನ-ಕುಂಕುಮ, ವಿಭೂತಿ ಹಚ್ಚಿ ಸಿಂಗರಿಸಿದರು. ಬಳಿಕ ಕುಂಬಳಕಾಯಿ ಒಡೆದು ಪೂಜೆ ಸಲ್ಲಿಸಿದರು. ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ನಂತರ ಎಲ್ಲರಿಗೂ ಸಿಹಿ ವಿತರಿಸಲಾಯಿತು.

ayudha-pooja
ಹೂವಿನಿಂದ ಅಲಂಕಾರಗೊಂಡಿರುವ ಲಾರಿಗಳು (ETV Bharat)

ಆಟೋಗಳಿಗೆ ಆಯುಧ ಪೂಜೆ: ಬಸ್​, ಲಾರಿ, ಆಟೋಗಳನ್ನು ಹೂವುಗಳಿಂದ ಸಿಂಗರಿಸಲಾಗಿತ್ತು. ಖಾಸಗಿ ಬಸ್ ನಿಲ್ದಾಣ ಮುಂಭಾಗದ ಕಲ್ಪತರು ಆಟೋ ನಿಲ್ದಾಣದಲ್ಲಿ ಎಲ್ಲ ಆಟೋಗಳಿಗೆ ಪೂಜೆ ಸಲ್ಲಿಸಲಾಯಿತು. ಆಟೋಗಳನ್ನು ಸಾಲಾಗಿ ನಿಲ್ಲಿಸಿ ಬೂದು ಕುಂಬಳ ನಿವಾಳಿಸಿ ನೆಲಕ್ಕೆ ಒಡೆಯಲಾಯಿತು.

ಆಟೋ ಚಾಲಕ ರಾಜಣ್ಣ ಮಾತನಾಡಿ, "ನಾವು ಆಟೋ ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ಇಂದು ಒಟ್ಟು ಸೇರಿ ಆಟೋಗಳನ್ನು ಸಿಂಗರಿಸಿ ಪೂಜೆ ಸಲ್ಲಿಸಿದ್ದೇವೆ. ಎಲ್ಲರಿಗೂ ಒಳ್ಳೆಯದಾಗಲಿ" ಎಂದರು.

ಫ್ಯಾಕ್ಟರಿಗಳಲ್ಲೂ ಸಲಕರಣೆಗಳಿಗೆ ಪೂಜೆ ಸಲ್ಲಿಸಿ, ಕಾರ್ಮಿಕರಿಗೆ ಬೋನಸ್ ನೀಡಲಾಯಿತು.

ಹಾವೇರಿಯಲ್ಲಿ ಆಯುಧ ಪೂಜೆ: ಹಾವೇರಿ ಜಿಲ್ಲೆಯಾದ್ಯಂತ ಸಡಗರ, ಸಂಭ್ರಮದಿಂದ ಆಯುಧ ಪೂಜೆ ಆಚರಿಸಲಾಯಿದೆ. ಮುಂಜಾನೆಯಿಂದಲೇ ತಾವು ಉಪಯೋಗಿಸುವ ವಾಹನಗಳನ್ನು ತೊಳೆದ ಜನರು ನಂತರ ಪೂಜೆ ಸಲ್ಲಿಸಿದರು. ವಾಹನಗಳನ್ನು ತಳಿರು-ತೋರಣಗಳಿಂದ ಅಲಂಕರಿಸಿ ಸಂಭ್ರಮಿಸಿದರು.

ayudha pooja
ಲಾರಿಗಳಿಗೆ ಆಯುಧ ಪೂಜೆ (ETV Bharat)

ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವಾಹನಗಳಿಗೆ ಪುಷ್ಪಮಾಲೆಗಳನ್ನು ಹಾಕಿ ಪೂಜಿಸಿದರು. ವರ್ತಕರು ತಮ್ಮ ಅಂಗಡಿಗಳಲ್ಲಿ ಬಳಸುವ ವಸ್ತುಗಳಿಗೆ ಪೂಜೆ ಸಲ್ಲಿಸಿದರು.

ಇದನ್ನೂ ಓದಿ: ಮೈಸೂರು ಅರಮನೆಯಲ್ಲಿ ಸಾಂಪ್ರದಾಯಿಕ ಆಯುಧ ಪೂಜೆ ಹೇಗೆ ನಡೆಯುತ್ತದೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.