ETV Bharat / state

ಗೀತಾ ಶಿವರಾಜ್ ಕುಮಾರ್ ಗೆಲುವು ಸಮೀಪಿಸುತ್ತಿದೆ: ಆಯನೂರು ಮಂಜುನಾಥ್ - Ayanur Manjunath - AYANUR MANJUNATH

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರ ಗೆಲುವು ಸಮೀಪಿಸುತ್ತಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.

ಆಯನೂರು ಮಂಜುನಾಥ್
ಆಯನೂರು ಮಂಜುನಾಥ್
author img

By ETV Bharat Karnataka Team

Published : Apr 2, 2024, 10:20 PM IST

Updated : Apr 2, 2024, 10:46 PM IST

ಆಯನೂರು ಮಂಜುನಾಥ್ ಹೇಳಿಕೆ

ಶಿವಮೊಗ್ಗ: ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಲೋಕಸಭಾ ಕಾಂಗ್ರೆಸ್​ ಅಭ್ಯರ್ಥಿ ಗೀತಾ ಶಿವರಾಜ್‍ ಕುಮಾರ್ ಅವರ ಗೆಲುವು ಹತ್ತಿರವಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದ್ದಾರೆ.

ಚುನಾವಣಾ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಒಂದು ಸುತ್ತು ಗೀತಾ ಶಿವರಾಜ್‍ ಕುಮಾರ್, ಶಿವರಾಜ್‍ ಕುಮಾರ್ ಮತ್ತು ಕಾಂಗ್ರೆಸ್ ನಾಯಕರುಗಳ ನೇತೃತ್ವದಲ್ಲಿ ಪ್ರಚಾರ ಮಾಡಲಾಗಿದೆ. ಹೋದ ಕಡೆಯಲೆಲ್ಲಾ ಒಳ್ಳೆಯ ವಾತಾವರಣವಿದೆ. ಬೈಂದೂರು ಸೇರಿದಂತೆ ಗ್ರಾಮಾಂತರ ಭಾಗಗಳಲ್ಲಿ ಕಾಂಗ್ರೆಸ್ ಬಗ್ಗೆ ಅತಿಯಾದ ಒಲವಿದೆ. ಈ ಒಲವು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುತ್ತದೆ ಎಂದಿದ್ದಾರೆ.

ಹಾಗೆಯೇ ಉಡುಪಿ ಚಿಕ್ಕಮಗಳೂರು ಭಾಗದಲ್ಲಿಯೂ ಜೈಪ್ರಕಾಶ್ ಹೆಗ್ಡೆಯವರೊಂದಿಗೆ ಪ್ರವಾಸ ಮಾಡಲಾಗಿದೆ. ಶೃಂಗೇರಿ, ಕೊಪ್ಪ, ಅಜ್ಜಂಪುರ ಸೇರಿದಂತೆ ಚುನಾವಣಾ ಪ್ರಚಾರ ಮಾಡುತ್ತಿದ್ದೇವೆ. ಈ ಭಾಗದ ಅಭ್ಯರ್ಥಿ ಜಯಪ್ರಕಾಶ್ ಹೆಗಡೆ ಕೂಡ ಗೆಲ್ಲಲ್ಲಿದ್ದಾರೆ. ಇದರ ಜತೆ ಜತೆಯಲ್ಲಿಯೇ ನೈರುತ್ಯ ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಆ ಭಾಗದ ಪದವೀಧರರ ಮತ್ತು ಶಿಕ್ಷಕರನ್ನು ಭೇಟಿಯಾಗಿ ಮತಯಾಚನೆ ಮಾಡಿದ್ದೇವೆ ಎಂದು ಹೇಳಿದರು.

ಗೀತಾ ಶಿವರಾಜ್‍ಕುಮಾರ್ ಕಾಣಿಸಿಕೊಳ್ಳುತ್ತಿಲ್ಲ ಎಂದು ಆರೋಪವಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈ ಆರೋಪವನ್ನು ಮಾಡುತ್ತಿರುವವರು ಬಿಜೆಪಿಗರು. ಅವರಿಗೆ ಕೆ.ಎಸ್.ಈಶ್ವರಪ್ಪನವರು ಬೆನ್ನು ಹತ್ತಿದ್ದಾರೆ. ತಮ್ಮನ್ನು ತಾವು ಕಾಯ್ದುಕೊಳ್ಳಲು ಅವರು ಕ್ರಿಯಾಶೀಲರಾಗಿರಬೇಕಾಗಿದೆ. ಹತಾಶರಾಗಿ ಅಭ್ಯರ್ಥಿ ರಾಘವೇಂದ್ರ ಓಡಾಡುತ್ತಿದ್ದರೆ ಅಷ್ಟೇ. ಆದರೆ, ನಮ್ಮ ಅಭ್ಯರ್ಥಿ ಗೀತಾ ಶಿವರಾಜ್‍ಕುಮಾರ್ ಒಂದು ವ್ಯವಸ್ಥಿತವಾಗಿಯೇ ಚುನಾವಣಾ ಪ್ರಚಾರದಲ್ಲಿದ್ದಾರೆ. ನಿಧಾನವಾಗಿಯಾದರೂ ಪ್ರಚಾರದ ಬಿರುಸು ಹೆಚ್ಚಿದೆ. ಜೆಡಿಎಸ್ ಮತ್ತು ಬಿಜೆಪಿಯ ಹೊಂದಾಣಿಕೆ ಕಾಂಗ್ರೆಸ್‍ಗೆ ಲಾಭವಾಗುತ್ತದೆ ಅಷ್ಟೇ, ಅದರಿಂದ ಏನೂ ಕಾಂಗ್ರೆಸ್‍ಗೆ ನಷ್ಟವಾಗುವುದಿಲ್ಲ ಆಯನೂರು ಮಂಜುನಾಥ್ ತಿಳಿಸಿದರು.

ಇದನ್ನೂ ಓದಿ: ನಾಳೆನೇ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಿದ್ರೆ ನಾನು ಚುನಾವಣೆಗೆ ನಿಲ್ಲುವುದಿಲ್ಲ: ಕೆ ಎಸ್​ ಈಶ್ವರಪ್ಪ - KS ESHWARAPPA

Last Updated : Apr 2, 2024, 10:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.