ಬೆಂಗಳೂರು: ಆಸ್ತಿ-ಒಡವೆ ತಮ್ಮದಾಗಿಸಿಕೊಳ್ಳಲು ಚಿಕ್ಕಮ್ಮಳನ್ನೇ ಹತ್ಯೆಗೆ ಯತ್ನಿಸಿದ್ದ ಆರೋಪದಡಿ ಮಗಳು ಹಾಗೂ ಅಳಿಯನನ್ನು ಆರ್ಎಂಸಿ ಯಾರ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಲ್ಲೆಗೊಳಗಾದ 56 ವರ್ಷದ ಅಣ್ಣಮ್ಮ ಎಂಬುವರು ನೀಡಿದ ದೂರಿನ ಮೇರೆಗೆ ಅಕ್ಕನ ಮಗಳಾದ ಸುಮಿತ್ರಾ, ಅಳಿಯ ಮುನಿರಾಜು ಎಂಬುವರನ್ನು ಬಂಧಿಸಲಾಗಿದೆ. ಯಶವಂತಪುರದಲ್ಲಿ ವಾಸವಾಗಿದ್ದ ಅಣ್ಣಮ್ಮಳಿಗೆ 30 ವರ್ಷದ ಹಿಂದೆ ಗಂಡ ಮೃತನಾಗಿದ್ದನು, ಮಕ್ಕಳಿಲ್ಲದೇ ಒಬ್ಬಂಟಿಯಾಗಿದ್ದಳು. ಸಣ್ಣಪುಟ್ಟ ಕೆಲಸ ಮಾಡಿ ಹಣ ಕೂಡಿಟ್ಟು ಐದಾರು ವರ್ಷಗಳ ಹಿಂದೆ ಮನೆ ಹಾಗೂ ಮೂರು ಅಂತಸ್ತಿನ ಕಟ್ಟಡ ಖರೀದಿಸಿದ್ದರು. ತಿಂಗಳಿಗೆ 30 ಸಾವಿರಕ್ಕಿಂತ ಹೆಚ್ಚು ಬಾಡಿಗೆ ಬರುತ್ತಿತ್ತು.
ಅಕ್ಕನ ಮಗಳಾದ ಸುಮಿತ್ರಾ ಅಳಿಯ ಮುನಿರಾಜುಗೆ ಭೋಗ್ಯಕ್ಕೆ ಮನೆ ಕೊಡಿಸಿ ಹಣಕಾಸಿನ ಸಹಾಯ ಮಾಡಿದ್ದರು. ಸುಮಿತ್ರಾ ದಂಪತಿಗೆ ಇಬ್ಬರು ಮಕ್ಕಳಿದ್ದು ಗಂಡ ಲಾರಿ ಚಾಲಕನಾಗಿದ್ದ. ವೃದ್ದೆ ಬಳಿ ಹಣ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಇರುವುದನ್ನು ಅರಿತಿದ್ದ ದಂಪತಿ ಅಣ್ಣಮ್ಮಳನ್ನ ಕೊಂದು ಆಸ್ತಿ - ಒಡವೆಗಳನ್ನ ತಮ್ಮದಾಗಿಸಿಕೊಳ್ಳಲು ವ್ಯವಸ್ಥಿತ ಸಂಚು ರೂಪಿಸಿದ್ದರು.
ವ್ಯವಸ್ಥಿತ ಸಂಚಿನಂತೆ ಮಾರ್ಚ್ 18 ರಂದು ಗಂಡನಿಗೆ ಹಣ ಕೊಡಬೇಕೆಂದು ಹೇಳಿ ಆರ್ಎಂಸಿ ಯಾರ್ಡ್ ಬಳಿ ಸುಮಿತ್ರ, ತನ್ನ ಚಿಕ್ಕಮ್ಮಳನ್ನ ಕರೆದೊಯ್ದಿದ್ದಳು. ಈ ವೇಳೆ, ಹಿಂಬದಿಯಿಂದ ಬಂದ ಅಳಿಯ ಮುನಿರಾಜು, ಚಾಕುವಿನಿಂದ ಅಣ್ಣಮ್ಮಳ ಕೈಗಳ ಮೇಲೆ ಚಾಕುವಿನಿಂದ ಚುಚ್ಚಿ ಗಾಯಗೊಳಿಸಿದ್ದ. ಹಲ್ಲೆಗೊಳಗಾದ ವೃದ್ದೆ ಜೋರಾಗಿ ಕಿರುಚಿಕೊಂಡಿದ್ದರಿಂದ ಸ್ಥಳದಿಂದ ದಂಪತಿ ಪರಾರಿಯಾಗಿದ್ದರು. ಪೂರ್ವ ಸಂಚಿನಂತೆ ಚಿಕ್ಕಮ್ಮನಳ ಮನೆಗೆ ಬಂದ ದಂಪತಿ 6 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಬಂಧನ ಭೀತಿಯಿಂದ ಧರ್ಮಸ್ಥಳಕ್ಕೆ ಎಸ್ಕೇಪ್ ಆಗಿದ್ದರು.
ಗಾಯಗೊಂಡ ಅಣ್ಣಮ್ಮಳನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿ ಬಳಿಕ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ದಂಪತಿಯನ್ನ ಮೈಸೂರಿನಲ್ಲಿ ಬಂಧಿಸಿದ್ದಾರೆ. ಸುಮಿತ್ರಾಳಿಗೆ ಎರಡನೇ ಗಂಡ ಮುನಿರಾಜು ಜೊತೆ ಸೇರಿ ಚಿಕ್ಕಮ್ಮಳನ್ನು ಮನೆಯಲ್ಲಿ ಈ ಹಿಂದೆ ಸಾಯಿಸಲು ಯತ್ನಿಸಿದ್ದರು. ತಲೆದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಬೇಕೆಂದು ಅಂದುಕೊಳ್ಳುವಷ್ಟರಲೇ ಮೊಮ್ಮಗ ಅಜ್ಜಿಯನ್ನು ಎಚ್ಚರಿಸಿದ್ದ. ವಿಷಯ ತಿಳಿದ ಬಳಿಕ ದಂಪತಿಯನ್ನು ಹೊರಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂಓದಿ:ರೌಡಿಶೀಟರ್ ಹತ್ಯೆ ಪ್ರಕರಣ: ಕೆಲ ಗಂಟೆಗಳಲ್ಲೇ 12 ಮಂದಿ ಆರೋಪಿಗಳ ಬಂಧನ - Rowdy Sheeter Murder Case