ETV Bharat / state

ಚಿಕ್ಕಬಳ್ಳಾಪುರ: ಭುಜ ತಾಗಿದ್ದಕ್ಕೆ ವ್ಯಕ್ತಿಗೆ ಮನಸ್ಸೋ ಇಚ್ಛೆ ಚಾಕು ಇರಿತ, ಇಬ್ಬರ ಬಂಧನ - Assault on a person

ಭುಜ ತಗುಲಿಸಿದ ಎಂದು ಕಿರಿಕ್ ತೆಗೆದ ಯುವಕರು ವ್ಯಕ್ತಿಯೊಬ್ಬರ ಮೇಲೆ ಚಾಕುವಿನಿಂದ ಮನ ಬಂದಂತೆ ಇರಿದಿರುವ ಘಟನೆ ಗೌರಿಬಿದನೂರಿನಲ್ಲಿ ನಡೆದಿದೆ.

ಭುಜ ತಾಗಿದ್ದಕ್ಕೆ ವ್ಯಕ್ತಿಗೆ ಮನಸ್ಸೋ ಇಚ್ಛೆ ಚಾಕು ಇರಿತ, ಇಬ್ಬರ ಬಂಧನ
ಭುಜ ತಾಗಿದ್ದಕ್ಕೆ ವ್ಯಕ್ತಿಗೆ ಮನಸ್ಸೋ ಇಚ್ಛೆ ಚಾಕು ಇರಿತ, ಇಬ್ಬರ ಬಂಧನ (ETV Bharat)
author img

By ETV Bharat Karnataka Team

Published : May 14, 2024, 10:58 PM IST

ಚಿಕ್ಕಬಳ್ಳಾಪುರ: ಭುಜ ತಗುಲಿಸಿದ ಎಂದು ಕಿರಿಕ್ ತೆಗೆದ ಯುವಕರು ವ್ಯಕ್ತಿಯೊಬ್ಬರ ಮೇಲೆ ಚಾಕುವಿನಿಂದ ಮನಸ್ಸೋ ಇಚ್ಛೆ ಇರಿದಿರುವ ಘಟನೆ ಗೌರಿಬಿದನೂರು ನಗರದ ಸೆವೆನ್ ಹಿಲ್ಸ್ ಬಾರ್ ಅಂಡ್ ರೆಸ್ಟೋರೆಂಟ್​ನಲ್ಲಿ ನಡೆದಿದೆ.

ಗೌರಿಬಿದನೂರು ನಗರದ ನಿವಾಸಿ ರಮೇಶ್ ಎಂಬಾತ ಕಳೆದ ರಾತ್ರಿ ಬಾರ್​ವೊಂದರಲ್ಲಿ ಮದ್ಯ ಸೇವಿಸಲು ತೆರಳಿದ್ದಾಗ ಅಲ್ಲೇ ಇದ್ದ ಪವನ್ ಹಾಗೂ ಮಣಿಕಂಠ ಎಂಬ ಯುವಕರು ಅಡ್ಡ ಬಂದಿದ್ದಾರೆ. ಈ ವೇಳೆ, ಆಕಸ್ಮಿಕವಾಗಿ ರಮೇಶ್ ಭುಜ ತಗುಲಿದ ಪರಿಣಾಮ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ರಮೇಶ್ ಪಕ್ಕದ ಸೆವೆನ್ ಹಿಲ್ಸ್ ಬಾರ್ ಅಂಡ್ ರೆಸ್ಟೋರೆಂಟ್​ಗೆ ಬಂದಿದ್ದಾರೆ. ಬಳಿಕ ಅಲ್ಲಿಗೂ ಬಂದ ಮಣಿಕಂಠ ಹಾಗೂ ಪವನ್, ರಮೇಶ್​ ಮೇಲೆ ಚಾಕುವಿನಿಂದ ಮನ ಬಂದಂತೆ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ರಮೇಶ್​ನನ್ನು ಗೌರಿಬಿದನೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಪ್ರಕರಣ ಸಂಬಂಧ ಗೌರಿಬಿದನೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮಣಿಕಂಠ ಹಾಗೂ ಪವನ್​ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ಮಂಗಳೂರು: ವೈದ್ಯಾಧಿಕಾರಿಯಿಂದ ಹಲ್ಲೆ ಆರೋಪ: ಜ್ವರದಿಂದ ಬಳಲುತ್ತಿದ್ದ ವ್ಯಕ್ತಿ ಸಾವು - man died

ETV Bharat Logo

Copyright © 2024 Ushodaya Enterprises Pvt. Ltd., All Rights Reserved.