ETV Bharat / state

ಅಕ್ರಮ ಕಲ್ಲುಕ್ವಾರೆ ಗಣಿಗಾರಿಕೆ ಆರೋಪದಲ್ಲಿ ಶಾಸಕರ ಆಪ್ತನ ಬಂಧನ: ಪೊಲೀಸರಿಗೆ ಮತ್ತೆ ಅವಾಜ್ ಹಾಕಿದ ಶಾಸಕ ಹರೀಶ್ ಪೂಂಜ - Harish Poonj Awaaz against Police - HARISH POONJ AWAAZ AGAINST POLICE

’’ಎಸ್ಪಿಗೆ ತಲೆಯಲ್ಲಿ ಕೂದಲಿಲ್ಲ. ಕೂದಲು ಮಾತ್ರ ಅಲ್ಲ ಬುದ್ಧಿಯೂ ಇಲ್ಲ. ರಾತ್ರಿ ಕಾಲ್ ಮಾಡಿದರೂ ನನ್ನ ಫೋನ್ ಕರೆಗೆ ಉತ್ತರಿಸಲಿಲ್ಲ. ಎಸ್ಪಿ ಕಾಂಗ್ರೆಸ್ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ‘‘ ಎಂದು ಶಾಸಕ ಹರೀಶ್ ಪೂಂಜ ಆರೋಪಿಸಿದ್ದಾರೆ.

MLA Harish Poonja spoke during the protest.
ಪ್ರತಿಭಟನೆ ವೇಳೆ ಶಾಸಕ ಹರೀಶ್ ಪೂಂಜ್ ಮಾತನಾಡಿದರು. (Etv Bharat)
author img

By ETV Bharat Karnataka Team

Published : May 20, 2024, 10:14 PM IST

ಮಂಗಳೂರು: 'ಕಾರ್ಯಕರ್ತರನ್ನು ಮುಟ್ಟಿದರೆ ಕಾಲರ್ ಹಿಡಿದು ಎಳೆದು ಹಾಕುತ್ತೇನೆ' ಎಂದು ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ಮತ್ತೆ ಪೊಲೀಸರ ವಿರುದ್ಧ ಅವಾಜ್ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಪಿಎಸ್​ಐಗೆ ಧಮ್ಕಿ ಹಾಕಿದ ಶಾಸಕ: ಅಕ್ರಮ ಕಲ್ಲು ಕ್ವಾರೆ ಗಣಿಗಾರಿಕೆ ಆರೋಪದಲ್ಲಿ ಶನಿವಾರ ಬೆಳ್ತಂಗಡಿ ತಾಲೂಕು ಯುವ ಮೋರ್ಚಾ ಮುಖಂಡ ಶಶಿರಾಜ್ ಶೆಟ್ಟಿಯನ್ನು ಬಂಧಿಸಲಾಗಿತ್ತು. ತನ್ನ ಆಪ್ತನ ಬಂಧನದ ಹಿನ್ನೆಲೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರಾತ್ರೋರಾತ್ರಿ ಬೆಳ್ತಂಗಡಿ ಠಾಣೆಯ ಮುಂಭಾಗ ಧರಣಿ ನಡೆಸಿದ್ದಲ್ಲದೇ, 'ಠಾಣೆ ಏನು ನಿಮ್ಮ ಅಪ್ಪಂದಾ' ಎಂದು ಪಿಎಸ್ಐಗೆ ಧಮ್ಕಿ ಹಾಕಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ.

ಮಿನಿವಿಧಾನ ಸೌಧ ಎದುರು ಪ್ರತಿಭಟನೆ: ಬಂಧನದ ವಿಚಾರದಲ್ಲಿ ಬೆಳ್ತಂಗಡಿ ಮಿನಿ ವಿಧಾನಸೌಧದ ಮುಂಭಾಗ ಇಂದು ನಡೆದ ಪ್ರತಿಭಟನೆಯಲ್ಲಿ 'ಕಾರ್ಯಕರ್ತರನ್ನು ಮುಟ್ಟಿದರೆ ಕಾಲರ್ ಹಿಡಿದು ಎಳೆದು ಹಾಕುತ್ತೇನೆ' ಎಂದು ಮತ್ತೆ ಪೊಲೀಸರ ವಿರುದ್ಧ ಅವಾಜ್ ಹಾಕಿದ್ದಾರೆ ಎಂದು ವರದಿಯಾಗಿದೆ. ಕಾರ್ಯಕರ್ತರಿಗೆ, ಮತದಾರರಿಗೆ ಅನ್ಯಾಯವಾದದಲ್ಲಿ ತಾನು ಜೈಲಿನಲ್ಲಿ ಕುಳಿತುಕೊಳ್ಳಲು ರೆಡಿ ಇದ್ದೇನೆ. ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಲೆಯಲ್ಲಿ ಕೂದಲಿಲ್ಲ. ಕೂದಲು ಮಾತ್ರ ಅಲ್ಲ ಬುದ್ಧಿಯೂ ಇಲ್ಲ. ತಾನು ಅವರಿಗೆ ರಾತ್ರಿ ಎಷ್ಟು ಸಲ ಕಾಲ್ ಮಾಡಿದರೂ ನನ್ನ ಫೋನ್ ಕರೆಗೆ ಉತ್ತರಿಸಲಿಲ್ಲ. ಎಸ್ಪಿಯವರು ಕಾಂಗ್ರೆಸ್ ಏಜೆಂಟ್ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯ ವಿರುದ್ಧವೂ ಹರೀಶ್ ಪೂಂಜ ಆರೋಪಿಸಿದ್ದಾರೆ.

ಇದನ್ನೂಓದಿ:ಫೋನ್ ಟ್ಯಾಪ್ ಮಾಡಲು ಕುಮಾರಸ್ವಾಮಿ, ರೇವಣ್ಣ ಭಯೋತ್ಪಾದಕರೇ : ಡಿಸಿಎಂ ಡಿ ಕೆ ಶಿವಕುಮಾರ್ - DCM DK Shivakumar

ETV Bharat Logo

Copyright © 2025 Ushodaya Enterprises Pvt. Ltd., All Rights Reserved.