ETV Bharat / state

ನೇಹಾ ಹತ್ಯೆಗೆ ಖಂಡನೆ: ಸ್ವಯಂಪ್ರೇರಿತ ಧಾರವಾಡ ಬಂದ್​ಗೆ ಉತ್ತಮ ಪ್ರತಿಕ್ರಿಯೆ - Dharawad bandh

ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣ ಖಂಡಿಸಿ ಮತ್ತು ನ್ಯಾಯಕ್ಕಾಗಿ ಅಂಜುಮನ್ ಸಂಸ್ಥೆ ಇಂದು ಅರ್ಧ ದಿನ ಧಾರವಾಡ ಬಂದ್​ಗೆ ಕರೆ ನೀಡಿದೆ.

dharawad bandh
ಧಾರವಾಡ ಬಂದ್​
author img

By ETV Bharat Karnataka Team

Published : Apr 22, 2024, 8:26 AM IST

Updated : Apr 22, 2024, 1:24 PM IST

ಸ್ವಯಂಪ್ರೇರಿತ ಧಾರವಾಡ ಬಂದ್​ಗೆ ಉತ್ತಮ ಪ್ರತಿಕ್ರಿಯೆ

ಧಾರವಾಡ: ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಧಾರವಾಡದ ಅಂಜುಮನ್ ಇಸ್ಲಾಂ ಸಂಸ್ಥೆ ಕರೆ ನೀಡಿದ್ದ ಬಂದ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಲ್ಲಿ ಮುಸ್ಲಿಂ ಸಮುದಾಯದವರು ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ, ಬಂದ್​ಗೆ ಬೆಂಬಲ ಸೂಚಿಸಲಾಗಿದೆ. ಜೊತೆಗೆ ಬಂದ್ ಮಾಡಲಾದ ಅಂಗಡಿಗಳಿಗೆ ನೇಹಾ ಶ್ರದ್ಧಾಂಜಲಿಯ ಪೋಸ್ಟರ್ ಅಂಟಿಸಲಾಗಿದೆ. ಅಂಜುಮನ್ ಸಂಸ್ಥೆಯಿಂದ ಡಿಸಿ ಕಚೇರಿವರೆಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಮೌನ ಮೆರವಣಿಗೆ ನಡೆಸುವ ಹಿನ್ನೆಲೆಯಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಬೇಕು ಎಂದು ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಅವರು ಶನಿವಾರ ಮನವಿ ಮಾಡಿಕೊಂಡಿದ್ದರು.

ನೇಹಾಳ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ಇಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಅರ್ಧ ದಿನ ಬಂದ್​ಗೆ ಕರೆ ನೀಡಿದ್ದರು. ಅಂಜುಮನ್ ಸಂಸ್ಥೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಮೆರವಣಿಗೆ ಮಾಡಿ, ಕಪ್ಪುಪಟ್ಟಿ ಧರಿಸಿ 'ಜಸ್ಟೀಸ್ ಫಾರ್ ನೇಹಾ 'ಎಂದು ಅಂಗಡಿಗಳಿಗೆ ಭಿತ್ತಿಪತ್ರ ಅಂಟಿಸಲಿದ್ದಾರೆ. ಮೆರವಣಿಗೆಯಲ್ಲಿ ಅಂಜುಮನ್ ಸಂಸ್ಥೆ ಸದಸ್ಯರು ಮತ್ತು ಜನರು ಭಾಗವಹಿಸಲಿದ್ದಾರೆ.

ಅಂಜುಮನ್ ಕಾಲೇಜಿನ ಕೊಠಡಿಗೆ ನೇಹಾ ಹೆಸರು: ಭಾನುವಾರ ಸುದ್ದಿಗೋಷ್ಠಿ ನಡೆಸಿ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಅವರು ಬಂದ್​ಗೆ ಕರೆ ನೀಡಿರುವ ಮಾಹಿತಿ ನೀಡಿದರು. ಇದೇ ವೇಳೆ, ಅಂಜುಮನ್ ಕಾಲೇಜಿನ ಒಂದು ಕೊಠಡಿಗೆ ನೇಹಾ ಹೆಸರಿಟ್ಟು, ಆ ಕೊಠಡಿಯನ್ನು ಅವರ ತಂದೆ ತಾಯಿಯಿಂದಲೇ ಉದ್ಘಾಟನೆ ಮಾಡಿಸಲು ಸಂಸ್ಥೆ ತೀರ್ಮಾನಿಸಿದೆ ಎಂದು ತಿಳಿಸಿದ್ದರು.

ಅಂಜುಮನ್ ಸಂಸ್ಥೆಯಿಂದ ಸಮಗ್ರ ಬಂದ್‌ಗೆ ಕರೆ ನೀಡಲು ಅವಕಾಶ ಇಲ್ಲ. ಹೀಗಾಗಿ ನಮ್ಮ ಸಮುದಾಯದವರಿಗೆ ಮಾತ್ರ ಕರೆ ನೀಡಿದ್ದೇವೆ. ಒತ್ತಾಯಪೂರ್ವಕವಾಗಿ ಬಂದ್ ಮಾಡಲು ಹೇಳಿಲ್ಲ. ಸ್ವಯಂಪ್ರೇರಿತ ಬಂದ್ ಮಾಡುತ್ತಿದ್ದೇವೆ ಎಂದು ತಮಟಗಾರ ಮಾಹಿತಿ ನೀಡಿದ್ದರು.

ಇದನ್ನೂ ಓದಿ: ನೇಹಾ ಹಿರೇಮಠ ತಂದೆಗೆ ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದ ಡಿಸಿಎಂ ಡಿಕೆಶಿ - Neha Hiremath

ನಮ್ಮ ಸಂಸ್ಥೆಯ ಪ್ರಕಾರ ವಿದ್ಯಾರ್ಥಿನಿಗೆ ಯಾವುದೇ ಜಾತಿ ಇಲ್ಲ. ಹುಬ್ಬಳ್ಳಿ ವಿದ್ಯಾರ್ಥಿನಿ ರೀತಿಯ ಘಟನೆಗಳು ಯಾವುದೇ ವಿದ್ಯಾಸಂಸ್ಥೆಗಳಲ್ಲಿ ಆಗಬಾರದು. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು. ಈ ರೀತಿಯ ಪ್ರಕರಣಗಳಲ್ಲಿ ಆದಷ್ಟು ಶೀಘ್ರ ಶಿಕ್ಷೆಯಾದರೆ ಮಾತ್ರ ಪ್ರಕರಣಗಳು ತಡೆಯಲು ಸಾಧ್ಯ ಎಂದಿದ್ದರು..

ಇದನ್ನೂ ಓದಿ: ನೇಹಾ ಹಿರೇಮಠ ಕೊಲೆ ಪ್ರಕರಣ: "ಎನ್​ಕೌಂಟರ್ ಕಾನೂನು ಬರಲೇಬೇಕು": ಸಂತೋಷ್​ ಲಾಡ್ - Minister Santosh Lad

ವಕಾಲತ್ತು ವಹಿಸದಿರಲು ನಿರ್ಧಾರ: ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದ ಆರೋಪಿ ಪರ ಯಾರೂ ಕೂಡ ವಕಾಲತ್ತು ವಹಿಸದಂತೆ ಅಂಜುಮನ್ ಸಂಸ್ಥೆ ನಿರ್ಧಾರ ಮಾಡಿದೆ. ಈ ಕುರಿತು ನೇಹಾ ಹಿರೇಮಠ ತಂದೆ ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನಯ್ಯ ಹಿರೇಮಠ ಅವರಿಗೆ ಅಂಜುಮನ್ ಸಂಸ್ಥೆ ಮುಖಂಡರು ತಿಳಿಸಿದ್ದರು.

ಜೊತೆಗೆ ನೇಹಾ ಅವರ ಮನೆಗೆ ಶನಿವಾರ ಮುಸ್ಲಿಂ ಮುಖಂಡರು ತೆರಳಿ ಸಾಂತ್ವನ ಹೇಳಿದ್ದಾರೆ. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು. ಇಂತಹ ಪ್ರಕರಣಗಳಿಗೆ ಹೊಸ ಕಾನೂನು ತರಬೇಕು. ನಾವೆಲ್ಲ ನಿಮ್ಮ ಜೊತೆ ಇರುತ್ತೇವೆ ಎಂದು ನಿರಂಜನಯ್ಯ ಹಿರೇಮಠ ಅವರಿಗೆ ಮುಖಂಡರು ಧೈರ್ಯ ತುಂಬಿದ್ದಾರೆ. ನಗರದ ಬಿಡನಾಳದಲ್ಲಿರುವ ನಿವಾಸಕ್ಕೆ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಪಾಲಿಕೆ ಸದಸ್ಯರಾದ ನಜೀರ್ ಅಹಮ್ಮದ್ ಹೊನ್ಯಾಳ, ಆರೀಪ್ ಭದ್ರಾಪೂರ, ಇಲಿಯಾಸ್ ಮನಿಯಾರ್ ಸೇರಿ ಹಲವು ಮುಖಂಡರು ಶನಿವಾರ ಭೇಟಿ ನೀಡಿದ್ದರು.

ಇದನ್ನೂ ಓದಿ: 'ಮಠಕ್ಕೆ ಬರುತ್ತಿದ್ದ ಮಗು IAS ಮಾಡಬೇಕೆಂದಿದ್ದಳು': ನೇಹಾ ನೆನೆದು ದಿಂಗಾಲೇಶ್ವರ ಶ್ರೀ ಕಣ್ಣೀರು - Dingaleshwar Swamiji

Last Updated : Apr 22, 2024, 1:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.