ETV Bharat / state

ಚಿಕ್ಕಮಗಳೂರು: ಕಸ ಆಯ್ದು, ಭಿಕ್ಷೆ ಬೇಡಿ ಬದುಕುತ್ತಿದ್ದ ಆಂಧ್ರದ ವೃದ್ಧೆ ಮರಳಿ ಗೂಡಿಗೆ - Old Woman back to home - OLD WOMAN BACK TO HOME

ತಹಶೀಲ್ದಾರ್​, ಮಹಿಳಾ ಪೊಲೀಸ್​ ಠಾಣೆ ಸಿಬ್ಬಂದಿ ಹಾಗೂ ಸಹನಾ ರೂಬಿನ್​ ಸಾಮಾಜಿಕ ಸೇವಾ ಸಂಸ್ಥೆಯವರು ನಿರ್ಗತಿಕಳಂತೆ ಅಲೆಯುತ್ತಿದ್ದ ವೃದ್ಧೆಯನ್ನು ಮರಳಿ ಮನೆಗೆ ಸೇರಿಸುವ ಕೆಲಸ ಮಾಡಿದ್ದಾರೆ.

Old woman joined the family
ಕುಟುಂಬದ ಜೊತೆ ಸೇರಿದ ವೃದ್ಧೆ
author img

By ETV Bharat Karnataka Team

Published : Apr 6, 2024, 1:25 PM IST

Updated : Apr 6, 2024, 2:27 PM IST

ಚಿಕ್ಕಮಗಳೂರು: ಕಸ ಆಯ್ದು, ಭಿಕ್ಷೆ ಬೇಡಿ ಬದುಕುತ್ತಿದ್ದ ಆಂಧ್ರದ ವೃದ್ಧೆ ಮರಳಿ ಗೂಡಿಗೆ

ಚಿಕ್ಕಮಗಳೂರು: ಕಳೆದ ಒಂದು ವರ್ಷದಿಂದ ಚಿಕ್ಕಮಗಳೂರು ನಗರದ ತಾಲೂಕ ಕಚೇರಿ ಸುತ್ತಮುತ್ತ ನಿರ್ಗತಿಕಳಂತೆ ಅಲೆಯುತ್ತಿದ್ದ 72 ವರ್ಷದ ವೃದ್ಧೆಯೊಬ್ಬರನ್ನು ತಹಶೀಲ್ದಾರ್​, ಮಹಿಳಾ ಠಾಣೆ ಪೊಲೀಸರು ಹಾಗೂ ಸಹನಾ ರೂಬಿನ್​ ಸಾಮಾಜಿಕ ಸೇವಾ ಸಂಸ್ಥೆಯನ್ನು ಮರಳಿ ಗೂಡಿಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.

ಆಂಧ್ರಪ್ರದೇಶದ ಮದನಪಲ್ಲಿ ತಾಲೂಕಿನ ಅಚ್ಚಮ್ಮಳೇ ಆ ವೃದ್ಧೆ. ವೃದ್ಧೆ ಹಲವು ದಿನಗಳಿಂದ ತಾಲೂಕು ಕಚೇರಿ ಬಳಿ ರಸ್ತೆ ಬದಿ ಬಿದ್ದ ಕಸವನ್ನೆಲ್ಲ ಒಂದುಗೂಡಿಸುತ್ತಾ, ಭಿಕ್ಷೆ ಬೇಡಿ ಜೀವನ ಮಾಡುತ್ತಾ ರಸ್ತೆ ಬದಿಯಲ್ಲೇ ಮಲಗುತ್ತಿದ್ದರು. ಇದನ್ನು ಕಂಡ ಚಿಕ್ಕಮಗಳೂರಿನ ತಹಶೀಲ್ದಾರ್, ವೃದ್ಧೆಯನ್ನು ಸಹನಾ ರೂಬಿನ್ ಟ್ರಸ್ಟ್ ಅವರಿಗೆ ನೋಡಿಕೊಳ್ಳುವಂತೆ ಹೇಳಿದ್ದರು. ರೂಬಿನ್ ಟ್ರಸ್ಟ್ ಆಕೆಗೆ ಊಟ - ಬಟ್ಟೆ ಕೊಟ್ಟು ಆಶ್ರಯ ನೀಡಿದ್ದರು.

Old Woman Acchamma
ವೃದ್ಧೆ ಅಚ್ಚಮ್ಮ

ವೃದ್ಧೆಯು ಆಂಧ್ರಪ್ರದೇಶದ ಮದನಪಲ್ಲಿ ಜಿಲ್ಲೆಯ ವಾಸಿ, ಹಾಗೂ ಅವರಿಗೆ 2 ಗಂಡು ಮಕ್ಕಳು, 2 ಹೆಣ್ಣುಮಕ್ಕಳು ಇರುವುದಾಗಿ ತಿಳಿಸಿದ್ದಾರೆ. ಕನ್ನಡ ಬಾರದ ಅವರು ತೆಲುಗು ಮಾತನಾಡುತ್ತಿದ್ದು, ಆರೋಗ್ಯವಾಗಿದ್ದ ವೃದ್ಧೆಯನ್ನು ಮಹಿಳಾ ಠಾಣೆ ಪೊಲೀಸರು, ತಹಶೀಲ್ದಾರ್ ಹಾಗೂ ರೂಬಿನ್ ಟ್ರಸ್ಟ್ ಮದನಪಲ್ಲಿ ಜಿಲ್ಲೆಯ ಅವರ ಮಕ್ಕಳನ್ನು ಸಂಪರ್ಕಿಸಿ ಅವರಿಗೆ ಒಪ್ಪಿಸಿದ್ದಾರೆ. ವರ್ಷದ ಹಿಂದೆ ಆಂಧ್ರದಪ್ರದೇಶದ ಮದನಪಲ್ಲಿಯಲ್ಲಿ ವೃದ್ಧೆ ನಾಪತ್ತೆಯಾಗಿದ್ದ ಸಂಬಂಧ ಪ್ರಕರಣ ಕೂಡ ದಾಖಲಾಗಿತ್ತು.

ಇದನ್ನೂ ಓದಿ: ದಾವಣಗೆರೆ: ಮಾಸಾಶನ ಪಡೆಯಲು 2 ಕಿಮೀ ತೆವಳಿಕೊಂಡು ಪೋಸ್ಟ್​ ಆಫೀಸ್​​ಗೆ​ ಬಂದ ವೃದ್ಧೆ

Last Updated : Apr 6, 2024, 2:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.