ETV Bharat / state

"ಹಗರಣದಲ್ಲಿ ಎಲ್ಲಾ ಸಚಿವರು ಪಾಲುದಾರರೇ ಅದಕ್ಕಾಗಿ ಸಂಪುಟ ಸಭೆಯಲ್ಲಿ ನಿರ್ಣಯ": ಮಾಜಿ ಸಿಎಂ ಬೊಮ್ಮಾಯಿ - Basavaraj Bommai - BASAVARAJ BOMMAI

ಮಾಜಿ ಸಿಎಂ ಬಸವರಾಜ​ ಬೊಮ್ಮಾಯಿ, ಹಗರಣದಲ್ಲಿ ಎಲ್ಲಾ ಸಚಿವರು ಪಾಲುದಾರರೇ. ಹೀಗಾಗಿ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಮಾಜಿ ಸಿಎಂ ಬೊಮ್ಮಾಯಿ
ಮಾಜಿ ಸಿಎಂ ಬೊಮ್ಮಾಯಿ (ETV Bharat)
author img

By ETV Bharat Karnataka Team

Published : Aug 4, 2024, 2:56 PM IST

ಮಾಜಿ ಸಿಎಂ ಬೊಮ್ಮಾಯಿ ಹೇಳಿಕೆ (ETV Bharat)

ಬೆಂಗಳೂರು: "ಹಗರಣದಲ್ಲಿ ಎಲ್ಲಾ ಸಚಿವರು ಪಾಲುದಾರರೇ, ಅದಕ್ಕಾಗಿ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದ್ದಾರೆ" ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಇಂದು ಆರ್.ಟಿ.ನಗರ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ‌ ರಾಜ್ಯಪಾಲರ ದುರ್ಬಳಕೆ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದರು. "ಹಿಂದೆ ಗ್ರೇಟ್ ಮಿಸ್ಟರ್ ಕಾಂಟ್ರವರ್ಶಿಯಲ್, ಕ್ವಶನೇಬಲ್ ಗವರ್ನರ್ ಹಂಸರಾಜ್ ಭಾರದ್ವಾಜ್ ಇದ್ದ. ಏನು ಕೇಸ್ ಇಲ್ಲದ ಬಿಎಸ್‌ವೈ ವಿರುದ್ಧ ಪ್ರಾಸಿಕ್ಯೂಷನ್‌ ಕೊಟ್ಟರು. ಆದರೆ ಕೋರ್ಟ್ ಬಿಎಸ್‌ವೈಗೆ ಕ್ಲೀನ್‌ ಚಿಟ್ ಕೊಟ್ಟಿತು. ಕಾಂಗ್ರೆಸ್‌ನವರು ಇದಕ್ಕೆ ಕ್ಷಮೆ‌ ಕೇಳುತ್ತಾರ" ಎಂದು ಪ್ರಶ್ನಿಸಿದರು.

"ರಾಜ್ಯಪಾಲರನ್ನು ಅತಿ ಹೆಚ್ಚು ದುರುಪಯೋಗ ಮಾಡಿಕೊಂಡ‌ ಕೀರ್ತಿ ಕಾಂಗ್ರೆಸ್‌ದು. ರಾಜ್ಯಪಾಲರ ಮೂಲಕ 56 ಸರ್ಕಾರಗಳನ್ನು ಕೆಡವಿದ ಕೀರ್ತಿ ಅವರಿಗೆ ಇದೆ. ನನ್ನ ಕಾಲದಲ್ಲಿ ಅಕ್ರಮ ಆಗಿದ್ದರೆ ಸುಮ್ನೆ ಯಾಕೆ ಕುಳಿತಿದ್ದೀರ. ಸರ್ಕಾರ ನಿಮ್ಮ ಕೈಯಲ್ಲಿದೆ, ಕ್ರಮ ತೆಗದುಕೊಳ್ಳಿ" ಎಂದು ಬೊಮ್ಮಾಯಿ ಸವಾಲು ಹಾಕಿದರು.

ಯಾದಗಿರಿ ಪಿಎಸ್‌ಐ ಪರಶುರಾಮ್ ಆತ್ಮಹತ್ಯೆ ವಿಚಾರವಾಗಿ ಮಾತನಾಡಿ, "ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ. ಶಾಸಕರೆಲ್ಲಾ ಗಂಟು ಮಾಡಿಕೊಳ್ಳಲು ಮುಂದಾಗಿದ್ದಾರೆ. ವರ್ಗಾವಣೆಯ ಮೂಲಕ ದುಡ್ಡು ಮಾಡಿಕೊಳ್ಳಿ ಅಂತ ಸಿಎಂ ಹೇಳಿದ್ದಾರೆ. ವರ್ಗಾವಣೆಯನ್ನು ಕರಪ್ಶನ್ ಇನ್ಸ್ಟಿಟ್ಯೂಟ್ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿದರು.

ಅವರು ನಮಗೇನು ಬುದ್ಧಿ ಹೇಳುತ್ತಾರೆ: "ದಲಿತ ಸಮುದಾಯ ಉಪ ಪಂಗಡಗಳಲ್ಲಿ ಜಿಜ್ಞಾಸೆ ಇತ್ತು. ನಾವು ದಿಟ್ಟ ಕ್ರಮ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದೆವು. ಕಾಂಗ್ರೆಸ್ ಬೆಂಬಲಿಗರೇ ಒಳ ಮೀಸಲಾತಿ ವಿರೋಧಿಸಿ ಸುಪ್ರಿಂ‌ಕೋರ್ಟ್‌ಗೆ ಹೋಗಿದ್ದರು. ಆದರೆ ನಾವು ಭೋವಿ, ಲಂಬಾಣಿ, ಕೊರಮ ಎಸ್‌ಸಿಯಲ್ಲೇ ಇರಬೇಕೆಂದು ನ್ಯಾಯ ಒದಗಿಸಿದ್ದೇವೆ" ಎಂದು ತಿಳಿಸಿದರು.

ಒಳಮೀಸಲಾತಿ ಕುರಿತು ಚುನಾವಣೆ ಪೂರ್ವ ಬಿಜೆಪಿಯಿಂದ ಅವಸರದ ತೀರ್ಮಾನ ಎಂಬ ಸಿಎಂ ಆರೋಪ ವಿಚಾರಕ್ಕೆ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಬೊಮ್ಮಾಯಿ, "ನನಗೂ ಮುಂಚೆ ಸಿದ್ದರಾಮಯ್ಯನೇ ಐದು ವರ್ಷ ಇದ್ನಲ್ಲಪ್ಪ. ಆಗ ಒಳಮೀಸಲಾತಿ ಬಗ್ಗೆ ಯಾಕೆ‌ ತೀರ್ಮಾನ ಮಾಡಲಿಲ್ಲ. ಹುಬ್ಬಳ್ಳಿ ಸಮಾವೇಶಕ್ಕೆ ಬಂದು ಒಂದು ಶಬ್ದ ಮಾತನಾಡಲಿಲ್ಲ. ಈ ಹೋರಾಟದಲ್ಲಿ ಹತ್ತು‌ ಜನ ತೀರಿಕೊಂಡರು. ಅವರು ನಮಗೇನು ಬುದ್ಧಿ ಹೇಳುತ್ತಾರೆ. ಒಂದೇ ದಿನದಲ್ಲಿ ಸಂಪೂರ್ಣ ತೀರ್ಮಾನ ಮಾಡಿದ್ವಿ. ಇದು ನಮ್ಮ ಬದ್ಧತೆ. ಈಗ ರಾಜ್ಯ ಸರ್ಕಾರ ಮನಸು ಮಾಡಿದರೆ ತತಕ್ಷಣ ಅನುಷ್ಠಾನ ಮಾಡಬಹುದು" ಎಂದರು.

"ಸಿದ್ದರಾಮಯ್ಯ 341ಗೆ ತಿದ್ದುಪಡಿ ತನ್ನಿ ಅಂತ ಶಿಫಾರಸ್ಸು ಮಾಡಿದ್ದರು. ಇದರಿಂದ ಶಾಶ್ವತವಾಗಿ ಒಳ ಮೀಸಾಲತಿ ಜಾರಿ ಆಗುತ್ತಿರಲಿಲ್ಲ. 15% ನಿಂದ 17% ಮೀಸಲಾತಿ ಏರಿಕೆ ಮಾಡಿ ಶಿಫಾರಸ್ಸು ಮಾಡಿದ್ದು ನಾವು. ಇದು ನಮಗೂ ಅವರಿಗೂ ಇರುವ ವ್ಯತ್ಯಾಸ" ಎಂದು ವಾಗ್ದಾಳಿ ನಡೆಸಿದರು.

ಮಾಜಿ ಸಿಎಂಗೆ ಸನ್ಮಾನ: ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಸ್​ಸಿ ಸಮುದಾಯಗಳಿಗೆ ಒಳ ಮೀಸಲಾತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದ ಕಾರಣ ಇಂದು ಅವರನ್ನು ಮಾಜಿ ಡಿಸಿಎಂ ಹಾಗೂ ಸಂಸದ ಗೋವಿಂದ ಕಾರಜೋಳ ಮತ್ತು ಮಾದರ ಚನ್ನಯ್ಯ ಗುರು ಪೀಠದ ಪೀಠಾಧ್ಯಕ್ಷರಾದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ನೇತೃತ್ವದಲ್ಲಿ ಆರ್. ಟಿ. ನಗರದ ನಿವಾಸದಲ್ಲಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಹಾಗೂ ಎಸ್​ಸಿ ಸಮುದಾಯದ ಮುಖಂಡರು ಹಾಜರಿದ್ದರು.

ಇದನ್ನೂ ಓದಿ: ಬೆಂಗಳೂರಲ್ಲಿ ಎಐಸಿಸಿ ವರಿಷ್ಠರ ಜೊತೆ ಸಭೆ ಇದೆ, ಅಜೆಂಡಾ ಏನು ಅಂತ ಹೇಳಿಲ್ಲ: ಸಚಿವ ಎಂ.ಬಿ.ಪಾಟೀಲ್ - Congress Leaders Meeting

ETV Bharat Logo

Copyright © 2025 Ushodaya Enterprises Pvt. Ltd., All Rights Reserved.