ETV Bharat / state

ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ಅಹಿಂದ ಸಂಘಟನೆ: ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶಕ್ಕೆ ಸಿದ್ಧತೆ - Ahinda organization

ಸಿಎಂ ಬದಲಾವಣೆ ಕೂಗು ಬೆನ್ನಲ್ಲೇ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಅಹಿಂದ ಸಂಘಟನೆ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಆಗಸ್ಟ್ ತಿಂಗಳಲ್ಲಿ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಬೃಹತ್ ಸಮಾವೇಶ ಹಾಗೂ ಸಿದ್ದರಾಮಯ್ಯನವರ ಹುಟ್ಟುಹಬ್ಬ ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಸಿಎಂ ಬದಲಾವಣೆ ಕೂಗು ಬೆನ್ನಲ್ಲೇ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ಅಹಿಂದ ಸಂಘಟನೆ
ಸಿಎಂ ಬದಲಾವಣೆ ಕೂಗು ಬೆನ್ನಲ್ಲೇ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ಅಹಿಂದ ಸಂಘಟನೆ (ETV Bharat)
author img

By ETV Bharat Karnataka Team

Published : Jul 1, 2024, 12:31 PM IST

ಹುಬ್ಬಳ್ಳಿ: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದಲಾವಣೆ ಕೂಗು ಜೋರಾಗಿ ಕೇಳಿ ಬರುತ್ತಿದ್ದಂತೆ ಅಹಿಂದ ಶಕ್ತಿ ಪ್ರವರ್ಧಮಾನಕ್ಕೆ ಬಂದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಅವರ ಬೆನ್ನಿಗೆ ನಿಂತಿರುವ ಅಹಿಂದ ಸಂಘಟನೆ ಮತ್ತೊಮ್ಮೆ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದೆ.

ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ಅಹಿಂದ ರಾಜ್ಯಾಧ್ಯಕ್ಷ ಪ್ರಭುಲಿಂಗ ದೊಡ್ಡಣಿ ನೇತೃತ್ವದಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನ್ಮದಿನಾಚರಣೆ ನಿಮಿತ್ತ ಆಗಸ್ಟ್ ತಿಂಗಳಲ್ಲಿ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಅಹಿಂದ ವತಿಯಿಂದ ಬೃಹತ್ ಸಮಾವೇಶ ಹಾಗೂ ಸಿದ್ದರಾಮಯ್ಯನವರ ಜನ್ಮ ದಿನಾಚರಣೆಯನ್ನು ಆಚರಿಸಲು ನಿರ್ಧಾರ ಕೈಗೊಳ್ಳಲಾಗಿದೆ.

ಅಲ್ಲದೆ ಅದೇ ದಿನದಂದು ಕರ್ನಾಟಕದ ಅಹಿಂದ ಒಕ್ಕೂಟದ ವತಿಯಿಂದ ಅಹಿಂದ ಸಂಘಟನೆಯನ್ನು ಹುಟ್ಟುಹಾಕಿದ ಸಿದ್ದರಾಮಯ್ಯನವರ ಜನಪರ ಕಾಳಜಿಗೆ "ಸಿದ್ದರಾಮಯ್ಯ ಅಹಿಂದ ರತ್ನ" ಪ್ರಶಸ್ತಿಯನ್ನು ಕರ್ನಾಟಕದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವಂತ 50 ಗಣ್ಯ ವ್ಯಕ್ತಿಗಳಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಅಹಿಂದ ರಾಜ್ಯಾಧ್ಯಕ್ಷ ಪ್ರಭುಲಿಂಗ ದೊಡ್ಡಣಿ ಹೇಳಿದರು.

ಸಿಎಂ ಬದಲಾದರೆ ಕಾಂಗ್ರೆಸ್ ಅಸ್ತಿತ್ವ ಉಳಿಯುವುದಿಲ್ಲ- ದೊಡ್ಡಣಿ: ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಮಾವೇಶದ ಪೂರ್ವಭಾವಿ ಸಭೆ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಬದಲಾವಣೆ ಕೂಗು ಕೇಳಿ ಬರುತ್ತಿದೆ. ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಮಾಡಿದ್ರೆ ಕಾಂಗ್ರೆಸ್ ಅಸ್ತಿತ್ವದಲ್ಲಿ ಉಳಿಯೋದಿಲ್ಲ. ನಾವು ಯಾವಾಗಲೂ ಸಿದ್ದರಾಮಯ್ಯ ಅವರಿಗೆ ಬೆನ್ನೆಲುಬಾಗಿ ನಿಲ್ತೆವೆ. ಕಳೆದ ಎರಡು ದಿನಗಳ ಹಿಂದೆ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಈ ರೀತಿಯ ಹೇಳಿಕೆಯಿಂದ ಧಕ್ಕೆ ಉಂಟಾಗುತ್ತದೆ ಎಂದರು.

ಸ್ವಾಮಿಗಳು ಅಂದ್ರೆ ಎಲ್ಲಾ ಸಮಾಜಕ್ಕೂ ಮೀಸಲಾದವರು. ಈ ರೀತಿ ನಮ್ಮ ಸಮಾಜಕ್ಕೆ ಕೊಡ್ಬೇಕು ಅಂದ್ರೆ ಧಾರ್ಮಿಕ ಧಕ್ಕೆ ಆಗುತ್ತೆ. ಸಿದ್ದರಾಮಯ್ಯ ಅವರನ್ನ ಸಿಎಂ ಸ್ಥಾನದಿಂದ ತೆಗೆಯೋ ವಿಚಾರ ಮಾಡಿದ್ರೆ ಕಾಂಗ್ರೆಸ್ ಪಕ್ಷ ಅಸ್ತಿತ್ವದಲ್ಲಿ ಉಳಿಯೋದಿಲ್ಲ. ಸಂಪೂರ್ಣ 5 ವರ್ಷ ಅವರೇ ಸಿಎಂ ಆಗಿರಬೇಕು.

ಬದಲಾವಣೆ ಆದ್ರೆ ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ಹೋರಾಟ ಮಾಡ್ತೇವೆ. ಸ್ವಾಮೀಜಿಗಳು ಇಂತಹ ಹೇಳಿಕೆ ನೀಡಬಾರದು, ಇದು ಪಕ್ಷಗಳ ಒಳಗಿನ ವಿಚಾರ ಎಂದರು. ಧಾರವಾಡ ಜಿಲ್ಲಾ ಅಂಹಿದ ಅಧ್ಯಕ್ಷ ಮುತ್ತಣ್ಣ ಶಿವಳ್ಳಿ ಮಾತನಾಡಿ, ಸಿದ್ದರಾಮಯ್ಯ ಅವರನ್ನ ಮುಟ್ಟಲು ಹೋದ್ರೆ ಅವರ ಹಿಂದೆ ಅಹಿಂದ ಶಕ್ತಿ ಇರುತ್ತೆ. ಅವರ ಬೆನ್ನೆಲುಬಾಗಿ ಅಹಿಂದ ಶಕ್ತಿ ಇರುತ್ತೆ.

ಸಿದ್ದರಾಮಯ್ಯ ಅಂದ್ರೆ ಅಹಿಂದ, ಅಹಿಂದ ಅಂದ್ರೆ ಸಿದ್ದರಾಮಯ್ಯ. ಹಾಗೇನಾದ್ರೂ ಮಾಡುವ ವಿಚಾರ ಮಾಡಿದ್ರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪೂರ್ವಭಾವಿ ಸಭೆಯಲ್ಲಿ ವಿವಿಧ ಜಿಲ್ಲೆಯ ಜಿಲ್ಲಾ ಅಧ್ಯಕ್ಷರುಗಳು ಹಾಗೂ ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿ ಸಮ್ಮತಿಯನ್ನು ಸೂಚಿಸಿದರು.

ಇದನ್ನೂ ಓದಿ: ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ, ಸಿದ್ದರಾಮಯ್ಯ ಕುರ್ಚಿಯಲ್ಲಿದ್ದಾರೆ: ಸಚಿವ ಜಮೀರ್ ಅಹಮದ್ - Zameer Ahmad

ETV Bharat Logo

Copyright © 2024 Ushodaya Enterprises Pvt. Ltd., All Rights Reserved.