ETV Bharat / state

ಜೈಲಿನಲ್ಲಿ ದರ್ಶನ್ ಭೇಟಿಯಾಗಿ ಧೈರ್ಯ ತುಂಬಿದ ನಟಿ ರಚಿತಾ ರಾಮ್ - Rachita Ram - RACHITA RAM

ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್​ ಅವರನ್ನು ಈಗಾಗಲೇ ಕೆಲ ನಟರು, ನಿರ್ದೇಶಕರು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಇಂದು ನಟಿ ರಚಿತಾ ರಾಮ್ ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿದರು.

actress-rachita-ram
ನಟಿ ರಚಿತಾ ರಾಮ್ (ETV Bharat)
author img

By ETV Bharat Karnataka Team

Published : Aug 22, 2024, 9:54 PM IST

Updated : Aug 22, 2024, 10:46 PM IST

ನಟಿ ರಚಿತಾ ರಾಮ್ ಪ್ರತಿಕ್ರಿಯೆ (ETV Bharat)

ಬೆಂಗಳೂರು: "ದರ್ಶನ್‌ ಸರ್‌ ಆರೋಗ್ಯವಾಗಿದ್ದಾರೆ. ಜೈಲಿನಲ್ಲಿ ಅವರನ್ನು ನೋಡಲು ಕಷ್ಟವಾಗುತ್ತಿದೆ. ಎಲ್ಲ ನಟ ಹಾಗೂ ನಟಿಯರು ಅವರನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇವೆ. ನಾವೆಲ್ಲರೂ ನಿಮ್ಮ ಬರುವಿಕೆಗಾಗಿ ಕಾಯುತ್ತಿದ್ದೇವೆ ಎಂದೆ. ಅದಕ್ಕವರು, ನನಗೆ ಕಾನೂನಿನ ಮೇಲೆ ನಂಬಿಕೆ ಇದೆ. ಆದಷ್ಟು ಬೇಗ ಹೊರ ಬರುತ್ತೇನೆ" ಎಂದು ಹೇಳಿರುವುದಾಗಿ ನಟಿ ರಚಿತಾ ರಾಮ್ ತಿಳಿಸಿದ್ದಾರೆ.

ಇಂದು ನಗರದ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿ ದರ್ಶನ್ ಅವರನ್ನು ಭೇಟಿಯಾಗಿ ಧೈರ್ಯ ತುಂಬಿದ ರಚಿತಾ ರಾಮ್‌, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

"ರಾಜನನ್ನು ರಾಜನ ಥರಾನೇ ನನಗೆ ನೋಡೋಕೆ ಇಷ್ಟ. ಇಂದು ಅವರನ್ನು ನೋಡಿ ನಿರಾಳತೆ ಉಂಟಾಯಿತು" ಎಂದು ಅವರು ಭಾವುಕರಾದರು.

"ನಾನು ಯಾವಾಗಲು ದರ್ಶನ್ ಅವರ ಕುಟುಂಬಕ್ಕೆ ಆಭಾರಿಯಾಗಿರುತ್ತೇನೆ. ಅವರನ್ನು ನೋಡಿ ನಾನೇ ಕಣ್ಣೀರಿಟ್ಟೆ. ನನಗೆ ದರ್ಶನ್‌ ಸರ್‌ ಸಮಾಧಾನ ಮಾಡಿದರು" ಎಂದು ತಿಳಿಸಿದರು.

ಕಿರುತೆರೆಯಲ್ಲಿ ನಟಿಸುತ್ತಿದ್ದ ರಚಿತಾ ರಾಮ್ ದರ್ಶನ್ ಜೊತೆ 'ಬುಲ್ ಬುಲ್' ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ದರ್ಶನ್ ಜೊತೆ 'ಕ್ರಾಂತಿ' ಸಿನಿಮಾದಲ್ಲೂ ಸ್ಕ್ರೀನ್ ಹಂಚಿಕೊಂಡಿದ್ದರು.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ದರ್ಶನ್‌ಗೆ ಮನೆ ಊಟದ ಮನವಿ ತಿರಸ್ಕರಿಸಿದ ಸರ್ಕಾರ - Darshan Plea Rejects

Last Updated : Aug 22, 2024, 10:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.