ETV Bharat / state

ಸಾಕು ನಾಯಿ ಬೊಗಳಿದ್ದಕ್ಕೆ ಕುಟುಂಬಸ್ಥರ ಮೇಲೆ ಹಲ್ಲೆ ಆರೋಪ: ಆರೋಪಿ ಬಂಧನ

ಸಾಕು ನಾಯಿ ಬೊಗಳಿದ್ದಕ್ಕೆ ಮನೆಯ ಯಜಮಾನನಿಗೆ ಹಲ್ಲೆ ಮಾಡಿದ ಆರೋಪದ ಮೇಲೆ ಪಕ್ಕದ ಮನೆ ನಿವಾಸಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಾಯಿ ಬೊಗಳಿದಕ್ಕೆ ಹಲ್ಲೆ  ಪ್ರಕರಣ
ನಾಯಿ ಬೊಗಳಿದಕ್ಕೆ ಹಲ್ಲೆ ಪ್ರಕರಣ
author img

By ETV Bharat Karnataka Team

Published : Mar 13, 2024, 9:40 AM IST

ಬೆಂಗಳೂರು: ಮನೆ ಬಳಿ ಬಂದ ಅಪರಿಚಿತರನ್ನು ಕಂಡು ನಾಯಿ ಬೊಗಳಿದ್ದಕ್ಕೆ ಆಕ್ರೋಶಗೊಂಡು, ಅದನ್ನು ಸಾಕಿದ್ದವರ ಮೇಲೆ ಹಲ್ಲೆ ಮಾಡಿದ್ದ ಆರೋಪದ ಮೇಲೆ ಪಕ್ಕದ ಮನೆಯ ನಿವಾಸಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಪಟ್ಟೇಗಾರಪಾಳ್ಯದ ಮುನೇಶ್ವರ ನಗರದಲ್ಲಿ ವಾಸವಾಗಿದ್ದ 20 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಪಕ್ಕದ ಮನೆ ನಿವಾಸಿ ಶಂಕರ್​ ಎಂಬಾತನನ್ನು ಬಂಧಿಸಲಾಗಿದೆ. ಯುವತಿ ತಂದೆ-ತಾಯಿಯೊಂದಿಗೆ ವಾಸ ಮಾಡುತ್ತಿದ್ದಳು.‌ ಈಕೆಯ ಪಕ್ಕದ ಮನೆಯಲ್ಲಿ ಆರೋಪಿ ಶಂಕರ್​ ವಾಸವಾಗಿದ್ದ. ಮೊನ್ನೆ ಮಾರ್ಚ್ 7ರ ರಾತ್ರಿ ಶಂಕರ್ ಹಾಗೂ ಆತನ ಸಹಚರರು ಮನೆಗೆ ಬರುವಾಗ ಅಪರಿಚಿತರನ್ನು ಕಂಡ ಸಾಕುನಾಯಿ ಬೊಗಳಿದೆ.

ಪರಿಣಾಮ ಶಂಕರ್ ಹಾಗೂ ಆತನ ಸಹಚರರು​ ನಾಯಿ ಮೇಲೆ ದಾಳಿ ಮಾಡಿದ್ದಾರೆ. ಇದನ್ನು ಕಂಡು‌ ಪ್ರಶ್ನಿಸಿದ ಯುವತಿ ಕುಟುಂಬಸ್ಥರೊಂದಿಗೂ ಶಂಕರ್ ಗ್ಯಾಂಗ್​ ಮಾತಿನ ಚಕಮಕಿಗಿಳಿದಿದೆ. ಕ್ಷಣಾರ್ಧದಲ್ಲೆ ಕಬ್ಬಿಣದ ರಾಡ್​ನಿಂದ ಯುವತಿಯ ತಂದೆ ತಲೆಗೆ ಬಲವಾಗಿ ಹೊಡೆದು ಗಾಯಗೊಳಿಸಿದ್ದಾರೆ. ಅಲ್ಲದೆ, ತಡೆಯಲು ಬಂದ ಯುವತಿಯನ್ನು ಆತನ ಸಹಚರರರು ಎಳೆದಾಡಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಯುವತಿ ಕೂಡಲೇ ಪೊಲೀಸ್ ಕಂಟ್ರೋಲ್​ ರೂಮ್​ಗೆ ಕರೆ ಮಾಡಿ ಮಾಹಿತಿ ನೀಡಿ ಪೊಲೀಸರ ನೆರವಿನಿಂದ ತಂದೆಯನ್ನು ಸ್ಥಳೀಯ ಆಸ್ಪತ್ರೆಗೂ ಸೇರಿಸಿದ್ದಾಳೆ. ಆಗಿರುವ ಘಟನೆ ಸಂಬಂಧ ಯುವತಿ ಅಳುತ್ತಲೇ ಮಹಿಳಾ ಆಯೋಗ ಅಧ್ಯಕ್ಷೆಗೂ ವಾಯ್ಸ್ ಮೆಸೇಜ್​ ಮಾಡಿದ್ದಳು. ಘಟನೆ ಸಂಪೂರ್ಣ ಮಾಹಿತಿ ಪಡೆದುಕೊಂಡ ಕಾಮಾಕ್ಷಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಶಂಕರ್​ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಕಡಬ ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಪ್ರಕರಣ: ಇನ್ನಿಬ್ಬರು ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.