ETV Bharat / state

ಬಾಲಕಿಯ ಪ್ರಾಣ ಕಾಪಾಡಿದ ಟ್ರ್ಯಾಕ್ಟರ್​ ಚಾಲಕ: ವಿಡಿಯೋ - ಬಾಲಕಿಯ ಪ್ರಾಣ

ಟ್ರ್ಯಾಕ್ಟರ್​ ಚಾಲಕನೊಬ್ಬ ತನ್ನ ಪ್ರಾಣ ಪಣಕ್ಕಿಟ್ಟು ಮಗುವಿನ ಪ್ರಾಣ ಕಾಪಾಡಿದ ಘಟನೆ ಬೆಂಗಳೂರಿನ ಹೊರವಲಯದ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

tractor driver  girl life  Doddaballapur  ಬಾಲಕಿಯ ಪ್ರಾಣ  ಟ್ರ್ಯಾಕ್ಟರ್​ ಚಾಲಕ
ತನ್ನ ಪ್ರಾಣ ಪಣಕ್ಕಿಟ್ಟು ಬಾಲಕಿಯ ಪ್ರಾಣ ಕಾಪಾಡಿದ ಟ್ರ್ಯಾಕ್ಟರ್​ ಚಾಲಕ! ವಿಡಿಯೋ
author img

By ETV Bharat Karnataka Team

Published : Feb 20, 2024, 12:45 PM IST

Updated : Feb 20, 2024, 2:26 PM IST

ಬಾಲಕಿಯ ಪ್ರಾಣ ಕಾಪಾಡಿದ ಟ್ರ್ಯಾಕ್ಟರ್​ ಚಾಲಕ

ದೊಡ್ಡಬಳ್ಳಾಪುರ, ಬೆಂಗಳೂರು: ವೇಗವಾಗಿ ಬರುತ್ತಿದ್ದ ಟ್ರ್ಯಾಕ್ಟರ್​ಗೆ ಹೆಣ್ಣು ಮಗುವೊಂದು ಸಡನ್​ ಆಗಿ ಓಡಿ ಬಂದಿದ್ದಾಳೆ. ಇದನ್ನು ಗಮನಿಸಿದ ಟ್ರ್ಯಾಕ್ಟರ್​ ಚಾಲಕ ತನ್ನ ಪ್ರಾಣವನ್ನ ಪಣಕ್ಕಿಟ್ಟು ಮಗುವಿನ ಜೀವ ಉಳಿಸಿದ್ದಾರೆ. ಪ್ರಾಣಾಪಾಯದಿಂದ ಪಾರಾದ ಮಗುವಿನ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ದೊಡ್ಡಬಳ್ಳಾಪುರ ತಾಲೂಕಿನ ಅಂತರಹಳ್ಳಿ ಗ್ರಾಮದಲ್ಲಿ ಫೆಬ್ರವರಿ 18 ರಂದು ಈ ಘಟನೆ ನಡೆದಿದ್ದು, ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯವನ್ನ ನೋಡಿದ ಜನರು ಒಂದು ಕ್ಷಣ ಭಯಪಡುವಂತೆ ಮಾಡಿದೆ. ಗ್ರಾಮದ ಮುಖ್ಯರಸ್ತೆಯಲ್ಲಿ ಟ್ರ್ಯಾಕ್ಟರ್ ಚಾಲಕ ವೇಗವಾಗಿ ಬರುತ್ತಿದ್ದನು. ದೇವಸ್ಥಾನ ಮರೆಯಿಂದ 3 ವರ್ಷದ ಹೆಣ್ಣು ಮಗು ಸಡನ್ ಆಗಿ ಟ್ರ್ಯಾಕ್ಟರ್​​​ಗೆ ಅಡ್ಡವಾಗಿ ಓಡಿ ಬಂದಿದ್ದಾಳೆ. ಮಗು ಮತ್ತು ಟ್ರ್ಯಾಕ್ಟರ್ ನಡುವಿನ ಅಂತರ ಇದ್ದದ್ದು ಕೇವಲ ಐದಾರು ಅಡಿಗಳ ಅಂತರವಷ್ಟೇ.

ಕ್ಷಣಾರ್ಧದಲ್ಲಿ ಎದುರಿಗೆ ಬಂದ ಮಗುವಿನ ಪ್ರಾಣ ಉಳಿಸಲು ಮುಂದಾದ ಚಾಲಕ ತನ್ನ ಪ್ರಾಣವನ್ನು ಲೆಕ್ಕಿಸದೇ ತಕ್ಷಣವೇ ಬ್ರೇಕ್​ ಹಾಕಿ ಟ್ರ್ಯಾಕ್ಟರ್​ ಅನ್ನು ಎಡಕ್ಕೆ ತಿರುಗಿಸಿದ್ದಾನೆ. ಕೂದಲೆಳೆಯ ಅಂತರದಲ್ಲಿ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಚಾಲಕನ ಸಮಯ ಪ್ರಜ್ಞೆಗೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಓದಿ: ಪಿಎಸ್ಐ ಅಮಾನತಿಗೆ ಆಗ್ರಹಿಸಿ ರಾಮನಗರದಲ್ಲಿ ವಕೀಲರ ಅಹೋರಾತ್ರಿ ಧರಣಿ: ಪೊಲೀಸ್​ ಬಿಗಿ ಭದ್ರತೆ

Last Updated : Feb 20, 2024, 2:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.