ಹುಬ್ಬಳ್ಳಿ: ಹಳೇ ವರ್ಷವನ್ನು ಭರ್ಜರಿಯಾಗಿ ಬೀಳ್ಕೊಟ್ಟು, ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿದ ಹುಬ್ಬಳ್ಳಿ ಜನತೆ ರಾತ್ರಿ ಹೊಸ ಪ್ರಪಂಚದಲ್ಲೇ ತೇಲಾಡಿದರು. ಕುಣಿದು, ಕುಪ್ಪಳಿಸಿ ಹೊಸ ವರ್ಷವನ್ನು ವೆಲ್ಕಮ್ ಮಾಡಿ ಹಳೇ ವರ್ಷದ ಹಳೇ ನೆನಪುಗಳಿಗೆ ಗುಡ್ ಬೈಯ್ ಹೇಳಿದರು.
ವಾಣಿಜ್ಯ ನಗರಿ ಹುಬ್ಬಳ್ಳಿಯ ಪ್ರತಿಷ್ಠಿತ ಹೋಟೆಲ್ಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಹೋಟೆಲ್ಗಳು ವಿದ್ಯುದೀಪಗಳಲ್ಲಿ ಕಂಗೊಳಿಸುತ್ತಿದ್ದವು. ಡಿಜೆ ಸೇರಿದಂತೆ ಅನೇಕ ಮನರಂಜನೆಯ ಕಾರ್ಯಕ್ರಮಗಳಲ್ಲಿ ಭಾಗಿಯಾದ ಯುವಕ - ಯುವತಿಯರು ಕುಣಿದು ಕುಪ್ಪಳಿಸಿದರು.
ನಗರದ ಪ್ರಮುಖ ಹೋಟೆಲ್ಗಳಿಂದ ಹಿಡಿದು ನಗರದ ಹೊರವಲಯದಲ್ಲೂ ಹೊಸ ವರ್ಷದ ಸಂಭ್ರಮಾಚರಣೆ ಜೋರಾಗಿತ್ತು.
ಇದನ್ನೂ ಓದಿ: ಹಂಪಿಯ ಮಾತಂಗ ಪರ್ವತದಿಂದ ವರ್ಷದ ಮೊದಲನೇ ದಿನದ ಸೂರ್ಯೋದಯ ಕಣ್ತುಂಬಿಕೊಂಡ ಪ್ರವಾಸಿಗರು