ETV Bharat / state

ಚಪ್ಪಲಿಯಿಂದ ಹೊಡೆದ ಮಹಿಳೆಯ ಪತಿಯ ಕೊಲೆಗೆ ಸ್ಕೆಚ್: ಮದ್ಯದ ನಶೆಯಲ್ಲಿ ಮತ್ತೊಬ್ಬನಿಗೆ ಇರಿದು ಜೈಲುಪಾಲು - ATTEMPT TO MURDER

ಕುಡಿದ ಅಮಲಿನಲ್ಲಿ ಬೇರೊಬ್ಬನಿಗೆ ಚೂರಿಯಿಂದ ಚುಚ್ಚಿ ಪರಾರಿಯಾಗಿದ್ದ ವ್ಯಕ್ತಿಯನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

Arrested Accused
ಬಂಧಿತ ವ್ಯಕ್ತಿ ಮತ್ತು ಘಟನಾ ಸ್ಥಳ (ETV Bharat)
author img

By ETV Bharat Karnataka Team

Published : Jan 12, 2025, 1:08 PM IST

Updated : Jan 12, 2025, 2:06 PM IST

ದೇವನಹಳ್ಳಿ(ಬೆಂಗಳೂರು ಗ್ರಾ.): ತನ್ನ ಕುರಿತು ಕೆಟ್ಟದಾಗಿ ಮಾತನಾಡುತ್ತಿದ್ದ ವ್ಯಕ್ತಿಗೆ ಆಕೆ ಚಪ್ಪಲಿಯಿಂದ ಹೊಡೆದು ಬುದ್ಧಿ ಕಲಿಸಿದ್ದರು. ಈ ಸೇಡಿಗೆ ಆಕೆಯ ಗಂಡನ ಕೊಲೆಗೆ ಸ್ಕೆಚ್ ಹಾಕಿದ್ದ ವ್ಯಕ್ತಿ, ಇದೀಗ ಮದ್ಯದ ನಶೆಯಲ್ಲಿ ಮತ್ತೊಬ್ಬರಿಗೆ ಚಾಕುವಿನಿಂದ ಇರಿದು ಜೈಲು ಸೇರಿದ್ದಾನೆ.

ದೇವನಹಳ್ಳಿ ಪಟ್ಟಣದ ವಿಜಯಪುರ ಸರ್ಕಲ್​ನಲ್ಲಿ ಜನವರಿ 4ರ ರಾತ್ರಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿಯುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರವಿ ಎಂಬಾತ ಚಾಕು ಇರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ನಂಜುಂಡನನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಡಿಸಿಪಿ ವಿ.ಜೆ.ಸಜೀತ್​ ಪ್ರತಿಕ್ರಿಯೆ (ETV Bharat)

ಘಟನೆಯ ಹಿನ್ನೆಲೆ: ಆರೋಪಿ ನಂಜುಂಡ ಸೆಲೂನ್ ಅಂಗಡಿ ಇಟ್ಕೊಂಡಿದ್ದ. ಈತ ಮುರಳಿ ಎಂಬ ವ್ಯಕ್ತಿಯ ಹೆಂಡತಿಯ ಬಗ್ಗೆ ಊಹಾಪೋಹದ ಮಾತುಗಳನ್ನು ಆಡುತ್ತಿದ್ದ. ಇದರಿಂದ ಕೋಪಗೊಂಡ ಮುರಳಿಯ ಹೆಂಡತಿ ಚಪ್ಪಲಿಯಲ್ಲಿ ಹೊಡೆದಿದ್ದರು. ಈ ದೃಶ್ಯವನ್ನು ಮುರಳಿ ಮೊಬೈಲ್​ನಲ್ಲಿ ಸೆರೆ ಹಿಡಿದು ಜನರಿಗೆ ತೋರಿಸುತ್ತಿದ್ದ. ಇದರಿಂದ ಕೆರಳಿದ ನಂಜುಂಡ ಮುರಳಿ ಕೊಲೆಗೆ ಸ್ಕೆಚ್ ಹಾಕಿದ್ದ.

ಜನವರಿ 4ರಂದು ಮುರಳಿ ಬಿಳಿ ಅಂಗಿ ಧರಿಸಿಕೊಂಡು ಬಾರ್​ಗೆ ಹೋಗುವುದನ್ನು ಗಮನಿಸಿದ ನಂಜುಂಡ ತಾನೂ ಅಲ್ಲಿಗೆ ಹೋಗಿದ್ದಾನೆ. ಬಳಿಕ ಬಿಳಿ ಅಂಗಿ ಧರಿಸಿದ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದಿದ್ದಾನೆ. ಮುಖ ನೋಡಿದಾಗ ಆತ ಮುರಳಿ ಅಲ್ಲ ಎಂಬುದು ತಿಳಿದಿದ್ದು, ಇದರಿಂದ ಬೆಚ್ಚಿದ ಆತ ಅಲ್ಲಿಂದ ಪರಾರಿಯಾಗಿದ್ದ. ಈ ಘಟನೆ ಸಂಬಂಧಿಸಿದಂತೆ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 10 ತಿಂಗಳ ಬಳಿಕ ಪ್ರಿಡ್ಜ್​​​ನಲ್ಲಿದ್ದ ಶವ ಪತ್ತೆ: ಲಿವ್ -ಇನ್ ರಿಲೇಶನ್​​​ಶಿಪ್​​​​​ನಲ್ಲಿದ್ದ ಗೆಳೆಯನಿಂದಲೇ ಪ್ರೇಯಸಿ ಕೊಲೆ

Last Updated : Jan 12, 2025, 2:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.