ETV Bharat / state

ಚಿಕ್ಕೋಡಿ: ಎರಡು ಕುಟುಂಬಗಳ ನಡುವಿನ ಜಗಳದಲ್ಲಿ ಮಗು ಸಾವು - child died - CHILD DIED

ಈ ಎರಡು ಕುಟುಂಬಗಳ ನಡುವಿನ ಜಗಳದಲ್ಲಿ 3 ವರ್ಷದ ಮಗುವಿನ ಎದೆ ಮೇಲೆ ಕಾಲಿಟ್ಟು ಕೊಲ್ಲಲಾಗಿದೆ ಎಂಬ ಆರೋಪ ಅಥಣಿಯ ಬುರ್ಲಟ್ಟಿ ಗ್ರಾಮದಲ್ಲಿ ಕೇಳಿ ಬಂದಿದೆ.

a-child-died-in-a-fight-between-two-families-in-athani
ಚಿಕ್ಕೋಡಿ: ಎರಡು ಕುಟುಂಬಗಳ ನಡುವಿನ ಜಗಳದಲ್ಲಿ ಮಗು ಸಾವು
author img

By ETV Bharat Karnataka Team

Published : Apr 27, 2024, 9:33 PM IST

Updated : Apr 27, 2024, 10:13 PM IST

ಚಿಕ್ಕೋಡಿ(ಬೆಳಗಾವಿ): ಎರಡು ಕುಟುಂಬಗಳ ನಡುವಿನ ಗಲಾಟೆಯಲ್ಲಿ 3 ವರ್ಷದ ಮಗುವಿನ ಎದೆ ಮೇಲೆ ಕಾಲಿಟ್ಟು ಕೊಲ್ಲಲಾಗಿದೆ ಎಂಬ ಆರೋಪ ಅಥಣಿ ತಾಲೂಕಿನ ಬುರ್ಲಟ್ಟಿ ಗ್ರಾಮದಲ್ಲಿ ಕೇಳಿಬಂದಿದೆ. ಶ್ರೀನಿಧಿ ಕಾಳಾಪಾಟೀಲ್(3) ಮೃತ ಕಂದಮ್ಮ. ಸ್ಥಳಕ್ಕೆ ಐಗಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಣಕಾಸಿನ ವಿಚಾರಕ್ಕೆ ನಡೆದ ಜಗಳದ ವೇಳೆ ಜ್ಯೋತಿಬಾ ತುಕಾರಾಮ ಬಾಬಾಬರ ಎಂಬಾತ ಮಗುವಿನ ಮೇಲೆ ಕಾಲಿಟ್ಟು ಕೊಂದಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಏನಿದು ಘಟನೆ: ಆರೋಪಿ ಜ್ಯೋತಿಬಾ ತುಕಾರಾಮ ಬಾಬಾಬರ ಮೃತ ಮಗುವಿನ ತಂದೆ ಕಾಡಪ್ಪ ಕಾಳಾಪಾಟೀಲಗೆ ಕಳೆದ ವರ್ಷ 50 ಸಾವಿರ ರೂಪಾಯಿ ಹಣ ಕೊಟ್ಟಿದ್ದರು. ಈ ಹಣದ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಶುಕ್ರವಾರ ರಾತ್ರಿ ಆರೋಪಿ ಜ್ಯೋತಿಬಾ ತುಕಾರಾಮ ಮದ್ಯ ಸೇವಿಸಿ ಕಾಡಪ್ಪನ ಜೊತೆ ಜಗಳ ಮಾಡಿದ್ದ. ಮತ್ತೆ ಮುಂಜಾನೆ ಕಾಡಪ್ಪನ ಮನೆಮುಂದೆ ಬಂದ ಜ್ಯೋತಿಬಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದರಿಂದ ಇಬ್ಬರ ನಡುವಿನ ಜಗಳ ತಾರಕಕ್ಕೇರಿದೆ. ಈ ವೇಳೆ ಆರೋಪಿ ಜ್ಯೋತಿಬಾ ತಾಳ್ಮೆ ಕಳೆದುಕೊಂಡು ಅಲ್ಲೇ ಇದ್ದ ಮೂರು ವರ್ಷದ ಮಗುವಿನ ಎದೆಯ ಮೇಲೆ ಕಾಲಿಟ್ಟು, ಕಾಡಪ್ಪನ ಕೈಗೆ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಇದನ್ನೂ ಓದಿ: ದೊಡ್ಡಬಳ್ಳಾಪುರ: ಹಾವು ಕಡಿತದಿಂದ 7 ವರ್ಷದ ಬಾಲಕಿ ಸಾವು - snake bite

Last Updated : Apr 27, 2024, 10:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.