ETV Bharat / state

ದಾವಣಗೆರೆ: 9 ಅಡಿ ಉದ್ದ, ಬರೋಬ್ಬರಿ 30 ಕೆ.ಜಿ. ತೂಕದ ಹೆಬ್ಬಾವು ಸೆರೆ - ವಿಡಿಯೋ - python Rescued - PYTHON RESCUED

ಮನೆಯೊಂದರ ಹಿತ್ತಲಿನಲ್ಲಿ ಪ್ರತ್ಯಕ್ಷವಾದ ಬೃಹತ್​ ಗಾತ್ರದ ಹೆಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ಹೆಬ್ಬಾವು ಸೆರೆ
ಹೆಬ್ಬಾವು ಸೆರೆ (ETV Bharat)
author img

By ETV Bharat Karnataka Team

Published : Sep 14, 2024, 7:35 PM IST

ಹೆಬ್ಬಾವು ಸೆರೆ (ETV Bharat)

ದಾವಣಗೆರೆ: ನ್ಯಾಮತಿ ತಾಲೂಕಿನ ನರಿಗಿನ ಕೆರೆ ಗ್ರಾಮದ ಮನೆಯೊಂದರ ಹಿತ್ತಲಿನಲ್ಲಿ ಕಾಣಿಸಿಕೊಂಡ 9 ಅಡಿ ಉದ್ದದ ಹೆಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ಸೆರೆ ಹಿಡಿದು ಗಂಗವ್ವ ಸರ ಮೀಸಲು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ನರಿಗಿನ ಕೆರೆ ಗ್ರಾಮದ ಚಂದ್ರನಾಯ್ಕ ಎಂಬುವವರ ಮನೆಯ ಹಿಂಭಾಗ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷವಾಗಿದೆ. ತಕ್ಷಣ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ನ್ಯಾಮತಿ ಉಪವಲಯ ಅರಣ್ಯಾಧಿಕಾರಿ ಶಿವಯೋಗಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಹುಲ್ಲಿನ‌ ಬಣವೆಯಲ್ಲಿ ಅಡಗಿದ್ದ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ. ನಂತರ ಗಂಗವ್ವನ ಸರ ಮೀಸಲು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಹೆಬ್ಬಾವು ಸುಮಾರು 9 ಅಡಿ ಉದ್ದ, ಬರೋಬ್ಬರಿ 30 ಕೆ.ಜಿ. ತೂಕ ಹೊಂದಿತ್ತು ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು: ಕನ್ನಡಿ ಹಾವು ಕಚ್ಚಿದರೂ ವಿಷರಹಿತ ಹಾವೆಂದು ಭಾವಿಸಿದ್ದ ವ್ಯಕ್ತಿ ಸಾವು - Snake Bite

ETV Bharat Logo

Copyright © 2025 Ushodaya Enterprises Pvt. Ltd., All Rights Reserved.