ETV Bharat / state

8 ವರ್ಷದ ಬಾಲಕಿಗೆ 2 ಮಕ್ಕಳ ತಂದೆಯಿಂದ ಲೈಂಗಿಕ ದೌರ್ಜನ್ಯ: ಜನರಿಂದ ಥಳಿತ - Sexual Assault On Minor - SEXUAL ASSAULT ON MINOR

ಬಾಲಕಿ ಮೇಲೆ ವ್ಯಕ್ತಿಯೋರ್ವ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ಚಾಮರಾಜನಗರದಲ್ಲಿ ನಡೆದಿದೆ.

SEXUAL ASSAULT ON MINOR
ಪೊಲೀಸ್​ ವಾಹನ (ETV Bharat)
author img

By ETV Bharat Karnataka Team

Published : May 30, 2024, 11:26 AM IST

ಚಾಮರಾಜನಗರ: ಅಪ್ರಾಪ್ತೆಯ ಮೇಲೆ ಮಧ್ಯವಯಸ್ಕ ವ್ಯಕ್ತಿಯೋರ್ವ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. 40 ವರ್ಷದ ವ್ಯಕ್ತಿಯೇ ಕೃತ್ಯ ಎಸಗಿರುವ ಆರೋಪಿ. 8 ವರ್ಷದ ಬಾಲಕಿಯ ಪಾಲಕರು ಕೂಲಿ ಕೆಲಸಕ್ಕೆ ತೆರಳಿದ್ದಾಗ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದ ಆರೋಪಿ, ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಜಮೀನಿಗೆ ತೆರಳಿದ್ದಾನೆ ಎಂದು ದೂರಲಾಗಿದೆ.

ವಿಚಾರ ತಿಳಿದ ಗ್ರಾಮಸ್ಥರು ಆರೋಪಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ‌. ಕೊಳ್ಳೇಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ಬಾಲಕಿಯನ್ನು ದಾಖಲಿಸಲಾಗಿದೆ. ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕೃತ್ಯ ಎಸಗಿರುವ ಆರೋಪಿ ವಿವಾಹಿತನಾಗಿದ್ದು, ಎರಡು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 5 ಸೀಳುನಾಯಿಗಳ ಸಂಶಯಾಸ್ಪದ ಸಾವು: ವಿಷ ಪ್ರಾಶನ ಶಂಕೆ

ಸೀಳುನಾಯಿ ಸಾವು ಪ್ರಕರಣ; ಓರ್ವನ ಬಂಧನ: ಚಾಮರಾಜನಗರ ಜಿಲ್ಲೆಯಲ್ಲಿ ಸೀಳುನಾಯಿಗಳಿಗೆ ವಿಷ ಪ್ರಾಶನ ಮಾಡಿ ಕೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ಬುಧವಾರ ರಾತ್ರಿ ಮಲೆಮಹದೇಶ್ವರ ವನ್ಯಜೀವಿಧಾಮದ ಸಿಬ್ಬಂದಿ ಬಂಧಿಸಿದ್ದಾರೆ. ಕೊಳ್ಳೇಗಾಲ ತಾಲೂಕಿನ ಹಿತ್ತಲದೊಡ್ಡಿ ಗ್ರಾಮದ ಸಮೀಪ ಮಂಗಳವಾರ ಸೀಳುನಾಯಿಗಳು ಸಾವನ್ನಪ್ಪಿದ್ದವು.

ಕೊಳ್ಳೇಗಾಲ ತಾಲೂಕಿನ ಹಿತ್ತಲದೊಡ್ಡಿ ಗ್ರಾಮದ ರಾಜಣ್ಣ (39) ಎಂಬಾತ ಬಂಧಿತ ಆರೋಪಿ. ಈತ ತನ್ನ ಸಾಕು ಪ್ರಾಣಿಗಳನ್ನು ರಕ್ಷಿಸಿಕೊಳ್ಳಲು ವಿಷ ಪ್ರಾಶನ ಮಾಡಿ 7 ಸೀಳುನಾಯಿಗಳನ್ನು ಕೊಂದಿದ್ದು, ವಿಚಾರಣೆಯಲ್ಲಿ‌ ವಿಷ ಹಾಕಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.