ETV Bharat / state

ದಾವಣಗೆರೆ: CEIR ಪೋರ್ಟಲ್‌ನಿಂದ 22 ಮೊಬೈಲ್ ಪತ್ತೆ,​ ವಾರಸುದಾರರಿಗೆ ಹಸ್ತಾಂತರ - Mobile Theft Cases Solved

author img

By ETV Bharat Karnataka Team

Published : Aug 9, 2024, 3:55 PM IST

ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಹಚ್ಚಲಾದ 3.50 ಲಕ್ಷ ರೂ ಮೌಲ್ಯದ 22 ಮೊಬೈಲ್​ಗಳನ್ನು ದಾವಣಗೆರೆ ಪೊಲೀಸರು ವಾರಸುದಾರರಿಗೆ ಹಿಂದಿರುಗಿಸಿದರು.

ಸಿಇಐಆರ್ ಪೋರ್ಟಲ್ ಮೂಲಕ ಪತ್ತೆಯಾದ 22 ಮೊಬೈಲ್​ ವಾರಸುದಾರರಿಗೆ ಹಸ್ತಾಂತರ
ವಾರಸುದಾರರಿಗೆ ಮೊಬೈಲ್ ಹಸ್ತಾಂತರ (ETV Bharat)

ದಾವಣಗೆರೆ: ಸೆಂಟ್ರಲ್ ಇಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಇಐಆರ್) ಪೋರ್ಟಲ್ ನೆರವಿನಿಂದ ದಾವಣಗೆರೆ ಪೊಲೀಸರು 3.50 ಲಕ್ಷ ರೂ ಮೌಲ್ಯದ 22 ಮೊಬೈಲ್​ಗಳನ್ನು ಪತ್ತೆ ಹಚ್ಚಿ, ವಾರಸುದಾರರಿಗೆ ಒಪ್ಪಿಸಿದ್ದಾರೆ.

ಕಳೆದ ಎರಡು ತಿಂಗಳಲ್ಲಿ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು, ಸುಲಿಗೆ ಹಾಗೂ ಕಳೆದುಕೊಂಡಿರುವ ಮೊಬೈಲ್​ಗಳನ್ನು ಹುಡುಕಿಕೊಡುವಂತೆ ವಾರಸುದಾರರು ಸಿಇಐರ್ ವೆಬ್ ಪೋರ್ಟಲ್​ನಲ್ಲಿ ನೋಂದಾಯಿಸಿದ್ದರು.

ಫೋನ್ ಹಸ್ತಾಂತರಿಸುತ್ತಿರುವ ಡಿವೈಎಸ್​ಪಿ ಬಸವರಾಜ್
ವಾರಸುದಾರರಿಗೆ ಫೋನ್ ಹಸ್ತಾಂತರಿಸುತ್ತಿರುವ ಡಿವೈಎಸ್​ಪಿ ಬಸವರಾಜ್ (ETV Bharat)

ಎರಡೇ ತಿಂಗಳಲ್ಲಿ ಪೊಲೀಸರು ವಿವಿಧ ಕಂಪನಿಗಳ ಮೊಬೈಲ್​ಗಳನ್ನು ಪತ್ತೆ ಮಾಡಿದ್ದಾರೆ. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸೂಚನೆ ಮೇರೆಗೆ ಡಿವೈಎಸ್​ಪಿ ಬಸವರಾಜ್ ಬಿ.ಎಸ್. ಅವರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊಬೈಲ್​ಗಳನ್ನು ವಾರಸುದಾರರಿಗೆ ನೀಡಿದರು.

ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ಕಿರಣ್ ಕುಮಾರ್​, ಪಿಎಸ್​ಐ ಜೋವಿತ್ ರಾಜ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಗಾಂಜಾ ದಂಧೆಕೋರರು ಸೆರೆ - Marijuana Sellers Arrest

ETV Bharat Logo

Copyright © 2024 Ushodaya Enterprises Pvt. Ltd., All Rights Reserved.