ಮೈಸೂರು: ಅತಿ ವಿರಳ ಹಾಗೂ ತೀವ್ರ ರೀತಿಯ ಅನಾರೋಗ್ಯ ಸಮಸ್ಯೆ ಸ್ಪೈನಲ್ ಮಸ್ಕ್ಯೂಲರ್ ಅಟ್ರೋಫಿ ಟೈಪ್ -2 ನಿಂದ ಬಳಲುತ್ತಿರುವ ತಮ್ಮ ಮಗುವಿನ ಚಿಕಿತ್ಸೆಗಾಗಿ ದಾನಿಗಳು ಸಹಾಯ ಮಾಡುವಂತೆ ತಾಯಿ ನಾಗಶ್ರೀ ಹಾಗೂ ತಂದೆ ಎನ್. ಕಿಶೋರ್ ಅವರು ಮನವಿ ಮಾಡಿಕೊಂಡಿದ್ದಾರೆ.
ಇಂದು ಮಾಧ್ಯಮಗೋಷ್ಟಿ ನಡೆಸಿದ ಮಗುವಿನ ಪೋಷಕರು, "ಒಂದೂವರೆ ವರ್ಷದ ತಮ್ಮ ಮಗಳಿಗೆ ಕೂಡಲೇ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಕ್ರಮೇಣ ನರಗಳು ನಶಿಸಿ ಸಾವಿನ ಕದ ತಟ್ಟುವಂತಾಗುತ್ತದೆ. ಮಗುವಿಗೆ ಚಿಕಿತ್ಸೆ ಕೊಡಿಸಲು ಸುಮಾರು 16 ಕೋಟಿ ಅಗತ್ಯವಿದೆ. ಇದನ್ನು ಭರಿಸಲು ನಮಗೆ ಸಾಧ್ಯವಿಲ್ಲದ ಕಾರಣ ದಾನಿಗಳಿಂದ ಸಹಾಯ ಕೇಳುತ್ತಿದ್ದೇವೆ" ಎಂದು ವಿನಂತಿಸಿಕೊಂಡರು.
"ಈ ಅನಾರೋಗ್ಯ ಸಮಸ್ಯೆಗೆ ಎರಡು ರೀತಿಯ ಚಿಕಿತ್ಸೆಗಳಿವೆ. ಒಂದು ಪ್ರತಿ 15 ಅಥವಾ 20 ದಿನಗಳಿಗೊಮ್ಮೆ ಸುಮಾರು ಆರು ಲಕ್ಷ ರೂ. ಬೆಲೆಯ ಒಂದು ಬಾಟಲ್ ಔಷಧಿ ಜೀವನ ಪರ್ಯಂತ ನೀಡಬೇಕು. ಇಲ್ಲವೇ ಸುಮಾರು 16 ಕೋಟಿ ರೂಪಾಯಿ ವೆಚ್ಚ ಮಾಡಿ ಬ್ಯಾಕ್ಟೀರಿಯಾದಲ್ಲಿನ ಜೀನನ್ನು ಈಕೆಗೆ ಸೇರ್ಪಡೆ ಮಾಡಬೇಕು. ದಾನಿಗಳು ಮುಂದೆ ಬಂದಲ್ಲಿ ಮಗಳ ಜೀವ ಉಳಿಸಲು ಸಾಧ್ಯ. ಈ ಹಿಂದೆ ತಮಿಳುನಾಡಿನಲ್ಲಿ ಒಂದು ಮಗುವಿಗೂ ಇದೇ ರೀತಿಯ ಸಮಸ್ಯೆ ಎದುರಾದಾಗ ಅಲ್ಲಿನ ಜನ ನೆರವಿಗೆ ನಿಂತ ಉದಾಹರಣೆಯಿದೆ. ಹೀಗಾಗಿ ರಾಜ್ಯದ ಜನತೆಯ ಅಂತಃಕರಣದ ಬಗ್ಗೆ ತಮಗೆ ನಂಬಿಕೆ ಇದೆ" ಎಂದು ಹೇಳಿದರು.
ದಾನಿಗಳು, ಹೆಸರು- ಕೆ.ಕೀರ್ತನಾ, ನಂ.- 43532588429, ಐಎಫ್ಎಸ್ಸಿ ಕೋಡ್- SBIN00070270, ಶಾಖೆ: ದೇವರಾಜ ಅರಸ್ ರಸ್ತೆ, ಮಗುವಿನ ಹೆಸರಿನಲ್ಲಿನ ಎಸ್‌ಬಿಐ ಬ್ಯಾಂಕ್ ಖಾತೆಗೆ ಅಥವಾ, ಫೋನ್ ಪೇ ಮೂಲಕ ಎನ್. ಕಿಶೋರ್- 9901262206, ಜಿಪೇ ಮೂಲಕ ಎನ್. ನಾಗಶ್ರೀ- 9980690234 ಅವರಿಗೆ ಹಣದ ನೆರವು ನೀಡಬಹುದು.