ಹೈದರಾಬಾದ್: ಕ್ರಿಕೆಟ್ ವಿಶ್ವದಲ್ಲಿ ವೇಗವಾಗಿ ಪ್ರಖ್ಯಾತಿ ಪಡೆಯುತ್ತಿರುವ ಕ್ರೀಡೆ ಆಗಿದೆ. ವಿಶ್ವದಲ್ಲಿ ಫುಟ್ಬಾಲ್ ನಂತರ ಅತೀ ಹೆಚ್ಚು ವೀಕ್ಷೀಸಲ್ಪಡುವ ಕ್ರೀಡೆಯೆಂದರೆ ಅದು ಕ್ರಿಕೆಟ್. ಇಂತಹ ಶ್ರೇಷ್ಠ ಕ್ರಿಕೆಟ್ನಲ್ಲಿ ಹಲವಾರು ಬಗೆಯ ನಿಯಮಗಳಿವೆ. ಆದರೆ ಹೆಚ್ಚಿನ ಜನರಗೆ ಕೇವಲ ಬೆರಳೆಣಿಕೆಯಷ್ಟೇ ನಿಯಮಗಳು ಗೊತ್ತಿವೆ. ಇದರಲ್ಲಿ ಡಕ್ಔಟ್ ಕೂಡ ಒಂದಾಗಿದೆ.
ಸಾಮಾನ್ಯವಾಗಿ ಬ್ಯಾಟರ್ ಬ್ಯಾಟಿಂಗ್ಗೆ ಬಂದು ಯಾವುದೇ ರನ್ಗಳಿಸದೇ ಮೊದಲ ಎಸೆತದಲ್ಲಿ ವಿಕೆಟ್ ಒಪ್ಪಿಸಿದರೇ ಅದನ್ನು ಡಕ್ಔಟ್ ಎಂದು ಕರೆಯುವುದು ನಮಗೆಲ್ಲ ತಿಳಿದಿರುವ ವಿಷಯ. ಎರಡನೇ ಎಸೆತದಲ್ಲಿ ಔಟಾದರೇ, ಮೂರನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿದರೇ, ಇನ್ನಿಂಗ್ಸ್ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೆ ಇವುಗಳಿಗೆಲ್ಲ ಯಾವ ಡಕ್ ಎಂದು ಕರೆಯುತ್ತಾರೆ ಎಂಬುದು ಹಲವರಿಗೆ ತಿಳಿದಿಲ್ಲ. ಆದ್ರೆ ಕ್ರಿಕೆಟ್ನಲ್ಲಿ ಒಟ್ಟು 8 ವಿಧದ ಡಕ್ಔಟ್ಗಳಿವೆ ಎಂದು ನಿಮಗೆ ಗೊತ್ತಾ. ಹಾಗಾದ್ರೆ ಆ 8 ಡಕ್ ಒಔಟ್ ಯಾವವು ಎಂದು ಇದೀಗ ತಿಳಿದುಕೊಳ್ಳಣ.
ಕ್ರಿಕೆಟ್ನಲ್ಲಿ ಒಟ್ಟು 8 ವಿಧದ ಡಕ್ ಔಟ್ಗಳಿವೆ
ಗೋಲ್ಡನ್ ಡಕ್ (Golden duck): ಬ್ಯಾಟರ್ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಮೊದಲ ಎಸೆತದಲ್ಲೇ ಔಟಾದರೆ ಅದನ್ನು ಗೋಲ್ಡನ್ ಡಕ್ ಎಂದು ಕರೆಯಲಾಗುತ್ತದೆ.
ಸಿಲ್ವರ್ ಡಕ್(Silver duck): ಬ್ಯಾಟರ್ ಇನ್ನಿಂಗ್ಸ್ನಲ್ಲಿ ಎರಡನೇ ಎಸೆತದಲ್ಲಿ ಶೂನ್ಯಕ್ಕೆ ಔಟಾದರೆ ಅದನ್ನು ಸಿಲ್ವರ್ ಡಕ್ ಎಂದು ಕರೆಯಲಾಗುತ್ತದೆ.
ಬ್ರೌನ್ಜ್ ಡಕ್(Bronze duck): ಬ್ಯಾಟರ್ ಇನ್ನಿಂಗ್ಸ್ನ 3ನೇ ಎಸೆತದಲ್ಲಿ ಔಟಾದರೆ ಅದನ್ನು ಬ್ರೌನ್ಜ್ ಡಕ್ ಔಟ್ ಎಂದು ಕರೆಯಲಾಗುತ್ತದೆ.
ಡೈಮಂಡ್ ಡಕ್ (Diamond duck): ಬ್ಯಾಟರ್ ಒಂದೇ ಒಂದು ಬೌಲ್ ಎದುರಿಸದೇ ಔಟಾದರೆ ಅದನ್ನು ಡೈಮಂಡ್ ಡಕ್ ಎನ್ನುತ್ತಾರೆ. (ಉದಾಹರಣೆಗೆ ಬ್ಯಾಟರ್ ಒಂದು ಎಸೆತ ಎದುರಿಸದೇ ರನ್ ಔಟ್ ಆದರೆ, ಬ್ಯಾಟರ್ ಪೆವಿಲಿಯನ್ನಿಂದ ಬರಲು 3 ನಿಮಿಷಕ್ಕಿಂತಲೂ ಹೆಚ್ಚಿನ ಸಮಯ ತೆಗೆದುಕೊಂಡರೆ ಎದುರಾಳಿ ತಂಡ ಔಟ್ಗೆ ಮನವಿ ಮಾಡಿದರೆ ಅದನ್ನು ಡೈಮಂಡ್ ಡಕ್ ಎನ್ನಲಾಗುತ್ತದೆ.)
ರಾಯಲ್ ಡಕ್(Royal duck): ಬ್ಯಾಟರ್ ತಮ್ಮ ತಂಡದ ಇನ್ನಿಂಗ್ಸ್ನ ಮೊದಲ ಎಸೆತದಲ್ಲೇ ಔಟಾದರೆ ಅದನ್ನೂ ರಾಯಲ್ ಡಕ್ ಎಂದು ಕರೆಯಲಾಗುತ್ತದೆ.
ಲಾಫಿಂಗ್ ಡಕ್ (Laughing duck): ಬ್ಯಾಟರ್ ತಮ್ಮ ತಂಡದ ಇನ್ನಿಂಗ್ಸ್ನ ಕೊನೆಯ ಎಸೆತದಲ್ಲಿ ಔಟಾದರೆ ಅದನ್ನು ಲಾಫಿಂಗ್ ಡಕ್ ಎಂದು ಹೇಳಲಾಗುತ್ತದೆ.
ಪೇರ್(Pair): ಇದು ಟೆಸ್ಟ್ ಅಥವಾ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಮಾತ್ರ ಸಂಭವಿಸುತ್ತದೆ. ಬ್ಯಾಟರ್‌ವೊಬ್ಬ ಎರಡೂ ಇನ್ನಿಂಗ್ಸ್ನಲ್ಲಿ ಶೂನ್ಯಕ್ಕೆ ನಿರ್ಗಮಿಸಿದರೇ ಅದನ್ನು ಪೇರ್ ಎಂದು ಕರೆಯಲಾಗುತ್ತದೆ.
ಕಿಂಗ್ ಪೇರ್(King Pair): ಟೆಸ್ಟ್ನ ಎರಡೂ ಇನ್ನಿಂಗ್ಸ್ನ ಮೊದಲ ಎಸೆತದಲ್ಲಿ ಬ್ಯಾಟರ್ ಔಟಾದರೆ ಅದನ್ನು ಕಿಂಗ್ ಪೇರ್ ಡಕ್ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ: ಭಾರತ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರರು ಕೈಗೆ ಕಪ್ಪುಪಟ್ಟಿ ಧರಿಸಿದ್ದೇಕೆ?