WPL Auction 2025: ಬಹುನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್ (WPL)2025ರ ಭಾಗವಾಗಿ ಇಂದು (ಭಾನುವಾರ) ಬೆಂಗಳೂರಿನಲ್ಲಿ ಮಿನಿ ಹರಾಜು ನಡೆಯಲಿದೆ. ಎಲ್ಲಾ ಐದು ತಂಡಗಳು ಉಳಿದಿರುವ 19 ಸ್ಲಾಟ್ಗಳ ಭರ್ತಿಮಾಡಲು ಹರಾಜಿನಲ್ಲಿ ಪಾಲ್ಗೊಳ್ಳುತ್ತಿವೆ.
ಮಿನಿ ಹರಾಜಿಗೆ ಆರಂಭದಲ್ಲಿ ಒಟ್ಟು 400 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಆದಾಗ್ಯೂ, ಎಲ್ಲಾ ಐದು ಫ್ರಾಂಚೈಸಿಗಳೊಂದಿಗೆ ಚರ್ಚೆಯ ನಂತರ ಅಂತಿಮವಾಗಿ 120 ಆಟಗಾರ ಹೆಸರನ್ನು ಶಾರ್ಟ್‌ಲಿಸ್ಟ್ ಮಾಡಲಾಯಿತು. ಇದೀಗ ಹರಾಜಿನಲ್ಲಿ 91 ಭಾರತೀಯರು ಮತ್ತು 29 ವಿದೇಶಿ ಆಟಗಾರರು ಅದೃಷ್ಟದ ಪರೀಕ್ಷೆಗಿಳಿದಿದ್ದಾರೆ.
ಕೆಲ ಫ್ರಾಂಚೈಸಿಗಳು ಪ್ರಮುಖ ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿದ್ದರೇ ಮತ್ತೆ ಕೆಲವು ಈವೆಂಟ್‌ಗೂ ಮೊದಲೇ ಸ್ಟಾರ್ ಆಟಗಾರರನ್ನು ಬಿಟ್ಟು ದಿಟ್ಟ ಹೊಸಬರ ಖರೀದಿಗೆ ಮುಂದಾಗಿವೆ. ತಂಡದಿಂದ ಕೈಬಿಟ್ಟ ಆಟಗಾರರಲ್ಲಿ ಸ್ನೇಹ ರಾಣಾ, ಪೂನಮ್ ಯಾದವ್, ಲಿಯಾ ತಹುಹು, ಹೀದರ್ ನೈಟ್ ಮತ್ತು ಇಸ್ಸಿ ವಾಂಗ್ ಸೇರಿದ್ದಾರೆ.
ಶಾರ್ಟ್‌ಲಿಸ್ಟ್ ಆದ ಆಟಗಾರರ ಮೂಲ ಬೆಲೆಯೊಂದಿಗೆ 50 ಲಕ್ಷ ರೂ, 30ಲಕ್ಷ ರೂ ಮತ್ತು 10ಲಕ್ಷ ರೂ ಗಳಾಗಿ ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಡಿಯಾಂಡ್ರಾ ಡಾಟಿನ್, ಹೀದರ್ ನೈಟ್ ಮತ್ತು ಲಿಜೆಲ್ಲೆ ಲೀ ಅವರು 50 ಲಕ್ಷಗಳ ಮೂಲ ಬೆಲೆ ಅಡಿಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ.
ಪರ್ಸ್ನಲ್ಲಿ ಉಳಿದ ಹಣ
ಇಂದು ಹರಾಜಿನಲ್ಲಿ ಪಾಲ್ಗೊಳ್ಳುತ್ತಿರುವ ತಂಡಗಳ ಪೈಕಿ, ಗುಜರಾತ್ ಜೈಂಟ್ಸ್ ₹4.4 ಕೋಟಿಗಳ ದೊಡ್ಡ ಪರ್ಸ್‌ನೊಂದಿಗೆ ಹರಾಜಿಗೆ ಪ್ರವೇಶಿಸುತ್ತುದೆ. ದೆಹಲಿ ಕ್ಯಾಪಿಟಲ್ಸ್ ₹2.5 ಕೋಟಿಗಳೊಂದಿಗೆ ಕಡಿಮೆ ಮೊತ್ತದೊಂದಿಗೆ ಪ್ರವೇಶಿಸಿದೆ. ಎಲ್ಲಾ ಫ್ರಾಂಚೈಸಿಗಳ ಪರ್ಸ್ನಲ್ಲಿ ಉಳಿದ ಹಣ ಎಷ್ಟು ಎಂದು ಈ ಕೆಳಗೆ ತಿಳಿಯಿರಿ.
1. ದೆಹಲಿ ಕ್ಯಾಪಿಟಲ್ಸ್: ₹2.5 ಕೋಟಿ
2. ಗುಜರಾತ್ ಜೈಂಟ್ಸ್: ₹4.4 ಕೋಟಿ
3. ಮುಂಬೈ ಇಂಡಿಯನ್ಸ್: ₹2.65 ಕೋಟಿ
4. ಯುಪಿ ವಾರಿಯರ್ಜ್: ₹3.9 ಕೋಟಿ
5. ರಾಯಲ್ ಚಾಲೆಂಜರ್ಸ್ ಬೆಂಗಳೂರು: ₹3.25 ಕೋಟಿ
ಇದನ್ನೂ ಓದಿ: ಬುಮ್ರಾ ಬಿಗು ಬೌಲಿಂಗ್ ದಾಳಿಗೆ ದಿಢೀರ್ ಕುಸಿದ ಆಸ್ಟ್ರೇಲಿಯಾ: ಒಂದು ಇನ್ನಿಂಗ್ಸ್, ಹಲವು ದಾಖಲೆ