ETV Bharat / sports

'ಗಬ್ಬಾ ಕಿಂಗ್​'ಗೆ 27ನೇ ಜನ್ಮದಿನದ ಸಂಭ್ರಮ​: ಹೀಗಿವೆ ಪಂತ್​ ಪ್ರಮುಖ ದಾಖಲೆಗಳು​ - Rishabh Pant Birthday - RISHABH PANT BIRTHDAY

ಟೀಂ ಇಂಡಿಯಾದ ವಿಕೆಟ್​ ಕೀಪರ್​ ಕಂ​ ಬ್ಯಾಟರ್​ ರಿಷಭ್​ ಪಂತ್​ ಇಂದು 27ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ರಿಷಭ್​ ಪಂತ್​
ರಿಷಭ್​ ಪಂತ್​ (AP And IANS)
author img

By ETV Bharat Sports Team

Published : Oct 4, 2024, 5:01 PM IST

ಹೈದರಾಬಾದ್​: ಟೀಂ ಇಂಡಿಯಾದ ಸ್ಟಾರ್​ ಬ್ಯಾಟರ್‌ ಹಾಗು​ ವಿಕೆಟ್​ ಕೀಪರ್​ ರಿಷಭ್‌ ಪಂತ್ ಇಂದು 27ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 2017ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಪಂತ್ ಇಂದು ಭಾರತ ತಂಡದ ಯಶಸ್ವಿ ಆಟಗಾರನಾಗಿ ಖ್ಯಾತಿ ಗಳಿಸಿದ್ದಾರೆ.

2022ರಲ್ಲಿ ಕಾರು ಅಪಘಾತಕ್ಕೆ ತುತ್ತಾಗಿ ದೀರ್ಘಕಾಲದವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ದೂರ ಉಳಿದಿದ್ದ ಪಂತ್​ ಇದೀಗ ಬಾಂಗ್ಲಾದೇಶ ವಿರುದ್ಧದ ಟೆಸ್ಟ್​ನೊಂದಿಗೆ ಪುನರಾಗಮನ ಮಾಡಿದ್ದಾರೆ. ಯುವ ಬ್ಯಾಟರ್​ ತಮ್ಮ ಬ್ಯಾಟಿಂಗ್​ ಮತ್ತು ಕೀಪಿಂಗ್​ ಮೂಲಕ ಕ್ರಿಕೆಟ್​ನಲ್ಲಿ ಹಲವಾರು ದಾಖಲೆಗಳನ್ನು ಬರೆದಿದ್ದಾರೆ. ಹಾಗಾದರೆ, ಬನ್ನಿ ಪಂತ್ ತಮ್ಮ ವೃತ್ತಿಜೀವನದಲ್ಲಿ ಸಾಧಿಸಿದ 5 ಅಪರೂಪದ ದಾಖಲೆಗಳು ಯಾವುವೆಂದು ತಿಳಿಯೋಣ.

ಪಂತ್​ ದಾಖಲೆಗಳು: 2018ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದ ಮೂಲಕ ಪಂತ್​ ಅಂತಾರಾಷ್ಟ್ರೀಯ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಚೊಚ್ಚಲ ಪಂದ್ಯದಲ್ಲಿ ಸಹಜವಾಗಿ ಆಟಗಾರನ ಮೇಲೆ ಒತ್ತಡ ಹೆಚ್ಚಿರುತ್ತದೆ. ಆದ್ರೆ ಪಂತ್​ ಪದಾರ್ಪಣೆ ಪಂದ್ಯದಲ್ಲೇ ಮೊದಲ ಎಸೆತದಲ್ಲೇ ಸಿಕ್ಸರ್‌ ಸಿಡಿಸಿ ಅಪರೂಪದ ದಾಖಲೆ ಬರೆದಿದ್ದಾರೆ. ಇದೇ ಸರಣಿಯ 5ನೇ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದರು. ಇದರೊಂದಿಗೆ ಇಂಗ್ಲೆಂಡ್​ ನೆಲದಲ್ಲಿ ನಡೆದ ಟೆಸ್ಟ್​ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ವಿಕೆಟ್​ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಒಂದೇ ಟೆಸ್ಟ್​ನಲ್ಲಿ ಅತಿ ಹೆಚ್ಚು ಕ್ಯಾಚ್​: ರಿಷಭ್ ಪಂತ್ ಒಂದೇ ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ದಾಖಲೆಯನ್ನೂ ಸಹ ಹೊಂದಿದ್ದಾರೆ. 2018ರಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಈ ಸಾಧನೆ ಮಾಡಿದ್ದಾರೆ. ಅಡಿಲೇಡ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಪಂತ್ ಎರಡು ಇನ್ನಿಂಗ್ಸ್‌ನಲ್ಲಿ 11 ಕ್ಯಾಚ್‌ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್​ನ ಜಾಕ್ ರಸೆಲ್ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ದಾಖಲೆ ಸರಿಗಟ್ಟಿದ್ದಾರೆ.

ಸಿಡ್ನಿಯಲ್ಲಿ ಶತಕ ವೈಭವ: 2019ರಲ್ಲಿ ಸಿಡ್ನಿ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಪಂತ್ 159ರನ್ ಚಚ್ಚಿದ್ದರು. ಇದರೊಂದಿಗೆ ಆಸ್ಟ್ರೇಲಿಯಾ ನೆಲದಲ್ಲಿ ಶತಕ ಸಿಡಿಸಿದ ಭಾರತದ ಮೊದಲ ವಿಕೆಟ್ ಕೀಪರ್ ಎನಿಸಿಕೊಂಡರು.

ಗಬ್ಬಾ ಕಿಂಗ್: 2021ರ ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತ ಐತಿಹಾಸಿಕ ಗೆಲುವು ಸಾಧಿಸಿತ್ತು. ಗಬ್ಬಾ ಮೈದಾನದಲ್ಲಿ 3 ದಶಕಗಳಿಗೂ ಹೆಚ್ಚು ಕಾಲ ಅಜೇಯರಾಗಿದ್ದ ಆಸೀಸ್‌ಗೆ ಭಾರತ ಸೋಲಿನ ರುಚಿ ತೋರಿಸಿತ್ತು. ಈ ಟೆಸ್ಟ್‌ ಸರಣಿಯ ನಾಲ್ಕನೇ ಪಂದ್ಯದಲ್ಲಿ ಟೀಂ ಇಂಡಿಯಾ 3 ವಿಕೆಟ್‌ಗಳಿಂದ ಗೆದ್ದು ಇತಿಹಾಸ ನಿರ್ಮಿಸಿತ್ತು. ಈ ಯಶಸ್ಸಿನಲ್ಲಿ ರಿಷಬ್ ಪಂತ್ ಪ್ರಮುಖ ಪಾತ್ರ ವಹಿಸಿದ್ದರು. ನಾಲ್ಕನೇ ಪಂದ್ಯದ ಎರಡನೇ ಇನಿಂಗ್ಸ್​ನಲ್ಲಿ ಪಂತ್​ ಅಜೇಯವಾಗಿ 89 ರನ್ ಗಳಿಸಿ ಟೀಂ ಇಂಡಿಯಾಗೆ ಜಯ ತಂದುಕೊಟ್ಟಿದ್ದರು. ಇದು ಪಂತ್ ವೃತ್ತಿಜೀವನದ ಅತ್ಯುತ್ತಮ ಇನ್ನಿಂಗ್ಸ್‌ಗಳಲ್ಲಿ ಒಂದಾಗಿದೆ. ಪಂತ್ ಬ್ಯಾಟಿಂಗ್ ಮಾತ್ರವಲ್ಲದೆ ಕೀಪಿಂಗ್‌ನಲ್ಲೂ ದಾಖಲೆಗಳನ್ನು ನಿರ್ಮಿಸಿದ್ದಾರೆ. ಅವರು ಟೆಸ್ಟ್‌ನಲ್ಲಿ ವೇಗವಾಗಿ 50 ಆಟಗಾರರನ್ನು ಪೆವಿಲಿಯನ್‌ಗೆ​ ಕಳಿಸಿದ ವಿಕೆಟ್‌ಕೀಪರ್ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮಹಿಳಾ ​ಟಿ20 ವಿಶ್ವಕಪ್​: ಇಂದು ಸಂಜೆ ಭಾರತ-ನ್ಯೂಜಿಲೆಂಡ್​ ಪಂದ್ಯ - India vs New Zealand Match

ETV Bharat Logo

Copyright © 2025 Ushodaya Enterprises Pvt. Ltd., All Rights Reserved.