ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನ 50 ಕೆಜಿ ಫ್ರೀಸ್ಟೈಲ್ ಕುಸ್ತಿ ಫೈನಲ್‌ನಲ್ಲಿ ಅನರ್ಹಗೊಂಡ ಬಳಿಕ ವಿನೇಶ್ ಫೋಗಟ್ ಕುಸ್ತಿಯಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಸಂಬಂಧ ಇಂದು ಬೆಳಗ್ಗೆ ಅವರು ಎಕ್ಸ್‌ನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದು, ಇದರಲ್ಲಿ ತಮ್ಮ ನಿರ್ಧಾರವನ್ನು ಹಂಚಿಕೊಂಡಿದ್ದಾರೆ.
माँ कुश्ती मेरे से जीत गई मैं हार गई माफ़ करना आपका सपना मेरी हिम्मत सब टूट चुके इससे ज़्यादा ताक़त नहीं रही अब।
— Vinesh Phogat (@Phogat_Vinesh) August 7, 2024
अलविदा कुश्ती 2001-2024 🙏
आप सबकी हमेशा ऋणी रहूँगी माफी 🙏🙏
ಕುಸ್ತಿ ನನ್ನ ವಿರುದ್ಧದ ಪಂದ್ಯವನ್ನು ಗೆದ್ದಿದೆ, ನಾನು ಸೋತಿದ್ದೇನೆ... ನನ್ನ ಧೈರ್ಯ ಎಲ್ಲವೂ ಮುರಿದುಹೋಗಿದೆ, ನನಗೆ ಈಗ ಹೆಚ್ಚಿನ ಶಕ್ತಿ ಇಲ್ಲ. ಗುಡ್ಬೈ ವ್ರೆಸ್ಲಿಂಗ್ 2001-2024... ಎಂದು ಫೋಗಟ್ ತನ್ನ ಪೋಸ್ಟ್‌ನಲ್ಲಿ ಹೇಳಿದ್ದಾರೆ.
Indian wrestler Vinesh Phogat bids goodbye to wrestling, tweets, " wrestling won match against me, i lost...my courage is all broken, i don't have any more strength now. goodbye wrestling 2001-2024...." pic.twitter.com/piTBpkr1t8
— ANI (@ANI) August 8, 2024
ಮಂಗಳವಾರ ರಾತ್ರಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಫೋಗಾಟ್ 5-0 ಅಂತರದಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಅವರನ್ನು ಸೋಲಿಸಿ ಚಿನ್ನದ ಪದಕಕ್ಕೆ ಲಗ್ಗೆ ಇಟ್ಟಿದ್ದರು. ಅವರು ಚಿನ್ನದ ಪದಕಕ್ಕಾಗಿ ಯುನೈಟೆಡ್ ಸ್ಟೇಟ್ಸ್ನ ಸಾರಾ ಆನ್ ಹಿಲ್ಡೆಬ್ರಾಂಡ್ ವಿರುದ್ಧ ಸ್ಪರ್ಧಿಸಲು ಸಿದ್ಧರಾಗಿದ್ದರು. ಆದರೆ ಅಷ್ಟರಲ್ಲಾಗಲೇ ಅವರ ತೂಕ ನಿಯಮದ ಮಿತಿಗಿಂತ 100 ಗ್ರಾಂ ಏರಿಕೆ ಆಗಿತ್ತು. ಹೀಗಾಗಿ ತೂಕದ ಮಿತಿ ಉಲ್ಲಂಘಿಸಿದ್ದಕ್ಕಾಗಿ ಬುಧವಾರ ಅವರನ್ನು ಪ್ಯಾರಿಸ್ ಒಲಿಂಪಿಕ್ಸ್ನಿಂದ ಅನರ್ಹಗೊಳಿಸಲಾಗಿತ್ತು.
ವಿನೇಶ್ ಫೋಗಟ್ ಅವರ ಅನರ್ಹತೆಗೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಅಧ್ಯಕ್ಷೆ ಪಿಟಿ ಉಷಾ ಆಘಾತ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ. ಫೋಗಟ್ ದೈಹಿಕವಾಗಿ ಮತ್ತು ವೈದ್ಯಕೀಯವಾಗಿ ಉತ್ತಮವಾಗಿದ್ದರೂ ತೀವ್ರ ನಿರಾಸೆ ಹೊಂದಿದ್ದಾರೆ ಎಂದು ಅವರು ದೃಢಪಡಿಸಿದ್ದಾರೆ. ಪೋಗಟ್ ತಮ್ಮ ತೂಕವನ್ನು ನಿರ್ವಹಿಸಲು ಸಹಾಯಕ ಸಿಬ್ಬಂದಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ವಿಚಾರವನ್ನು ಉಷಾ ಗಮನಿಸಿದರು.
ಫೋಗಟ್ ಭೇಟಿ ಬಳಿಕ ಪಿಟಿ ಉಷಾ ಹೇಳಿದ್ದಿಷ್ಟು: "ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಲಾಗಿದೆ ಎಂಬ ಸುದ್ದಿ ಕೇಳಿದ ನಂತರ, ನಾನು ಆಘಾತಕ್ಕೊಳಗಾಗಿದ್ದೇನೆ ಮತ್ತು ನಿರಾಶೆಗೊಂಡಿದ್ದೇನೆ. ನಾನು ವಿನೇಶ್ ಅವರನ್ನು ಭೇಟಿಯಾಗಲು ಇಲ್ಲಿಗೆ ಬಂದಿದ್ದೇನೆ. ಅವರು ದೈಹಿಕವಾಗಿ ಮತ್ತು ವೈದ್ಯಕೀಯವಾಗಿ ಚೆನ್ನಾಗಿದ್ದಾರೆ. ಮಾನಸಿಕವಾಗಿ ಅವರು ಬೇಸರದಲ್ಲಿದ್ದಾರೆ.ನಮ್ಮ ಸಹಾಯಕ ಸಿಬ್ಬಂದಿ ಅವರ ಜೊತೆಗಿದ್ದಾರೆ, ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆಕೆಯ ತೂಕ ಕಡಿಮೆಯಾಗಿದೆ ಎಂದು ಪಿಟಿ ಉಷಾ ಇದೇ ವೇಳೆ ತಿಳಿಸಿದ್ದಾರೆ.
ಇದಕ್ಕೂ ಮೊದಲು, ಭಾರತೀಯ ಒಲಿಂಪಿಕ್ ತಂಡದ ಮುಖ್ಯ ವೈದ್ಯಕೀಯ ಅಧಿಕಾರಿ ದಿನ್ಶಾ ಪರ್ದಿವಾಲಾ ಅವರು, ಸೆಮಿಫೈನಲ್ ಪಂದ್ಯದ ನಂತರ ಫೋಗಟ್ ತೂಕದ ಮಿತಿ 2.7 ಕೆಜಿಯಷ್ಟು ಹೆಚ್ಚಾಗಿದೆ ಎಂದು ಬಹಿರಂಗಪಡಿಸಿದ್ದರು. ಆಹಾರ ಮತ್ತು ನೀರಿನ ಸೇವನೆಯನ್ನು ನಿರ್ಬಂಧಿಸುವ ಮೂಲಕ ತೂಕ ಕಡಿಮೆ ಮಾಡಲು ಪ್ರಯತ್ನಿಸಲಾಗಿದೆ ಎಂದು ಅವರು ಸ್ಪಷ್ಟ ಪಡಿಸಿದ್ದರು.
ಫೋಗಟ್ ಬುಧವಾರ ತಮ್ಮ ಅನರ್ಹತೆಯ ನಂತರ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಸಿಎಎಸ್‌ಗೆ ಮೇಲ್ಮನವಿ ಕೂಡಾ ಸಲ್ಲಿಸಿದ್ದಾರೆ. IOA ಮೂಲದ ಪ್ರಕಾರ, ಫೋಗಟ್ ಸಿಎಎಸ್‌ಗೆ ಬೆಳ್ಳಿ ಪದಕವನ್ನು ನೀಡುವಂತೆ ವಿನಂತಿಸಿದ್ದಾರೆ. ಗುರುವಾರ ಬೆಳಗ್ಗೆ ತೀರ್ಪು ಬರುವ ನಿರೀಕ್ಷೆ ಇದೆ.