ETV Bharat / sports

ಅಚ್ಚರಿ! ಈ 5 ಬೌಲರ್​ಗಳು ತಮ್ಮ ಟೆಸ್ಟ್​ ವೃತ್ತಿಜೀವನದಲ್ಲಿ ಒಂದೇ ಒಂದು ಸಿಕ್ಸರ್​ ಹೊಡೆಸಿಕೊಂಡಿಲ್ಲ! - BOWLERS NOT CONSIDED A SINGLE SIX

ಈ 5 ಬೌಲರ್​ಗಳು ತಮ್ಮ ಟೆಸ್ಟ್​ ವೃತ್ತಿ ಜೀವನದಲ್ಲಿ ಒಮ್ಮೆಯೂ ಸಿಕ್ಸರ್​ ಹೊಡೆಸಿಕೊಳ್ಳದೆ ದಾಖಲೆ ಬರೆದಿದ್ದಾರೆ.

TEST CRICKET  WHICH BOWLER NOT CONSIDED A SIX  BOWLER NEVER CONCEDED SIX IN TEST  DEREK PRINGLE
ಸಾಂದರ್ಭಿಕ ಚಿತ್ರ (Getty Image)
author img

By ETV Bharat Sports Team

Published : Dec 31, 2024, 5:28 PM IST

ಹೈದರಾಬಾದ್​: ಟಿ20 ಫಾರ್ಮೆಟ್​ ಬಂದ ನಂತರ ಕ್ರಿಕೆಟ್​ನಲ್ಲಿ ದೊಡ್ಡ ಬದಲಾವಣೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಟೆಸ್ಟ್‌ನಲ್ಲಿಯೂ ಬ್ಯಾಟ್ಸ್‌ಮನ್‌ಗಳು ಬೌಂಡರಿ ಸಿಕ್ಸರ್​ ಸಿಡಿಸುವ ಮೂಲಕ ವೇಗವಾಗಿ ರನ್ ಗಳಿಸಲು ಆರಂಭಿಸಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ, ಟೆಸ್ಟ್ ಕ್ರಿಕೆಟ್‌ನಲ್ಲಿ ಯಾವುದೇ ಭಯವಿಲ್ಲದೆ ಸಿಕ್ಸರ್‌ ಸಿಡಿಸುತ್ತಿದ್ದಾರೆ. ಎಂತಹ ಶ್ರೇಷ್ಠ ಬೌಲರ್​ ಎನಿಸಿಕೊಂಡಿದ್ದರೂ ತಮ್ಮ ವೃತ್ತಿ ಜೀವನದಲ್ಲಿ ಸಿಕ್ಸರ್​ ಹೊಡಿಸಿಕೊಂಡಿರುತ್ತಾರೆ.

1. ಡೆರೆಕ್​ ಪ್ರಿಂಗಲ್​ (ಇಂಗ್ಲೆಂಡ್​)

ಇಂಗ್ಲೆಂಡ್​ನ ಬೌಲರ್ ಡೆರೆಕ್ ಪ್ರಿಂಗಲ್ ತಮ್ಮ ಕ್ರಿಕೆಟ್​ ವೃತ್ತಿಜೀವನದಲ್ಲಿ ಒಟ್ಟು 30 ಟೆಸ್ಟ್​ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ 5,287 ಎಸೆತಗಳನ್ನು ಬೌಲ್ ಮಾಡಿ 70 ವಿಕೆಟ್​ ಪಡೆದಿದ್ದಾರೆ. ಇದರಲ್ಲಿ ಅವರು 35.70ರ ಸರಾಸರಿಯಲ್ಲಿ ಬೌಲಿಂಗ್ ಮಾಡಿ 70 ವಿಕೆಟ್​ಗಳನ್ನು ಪಡೆದಿದ್ದಾರೆ. ಆದರೆ ಡೆರೆಕ್ ತನ್ನ ಟೆಸ್ಟ್​ ವೃತ್ತಿಜೀವನದಲ್ಲಿ ಒಂದೇ ಒಂದು ಸಿಕ್ಸರ್ ಹೊಡೆಸಿಕೊಂಡಿಲ್ಲ.

2. ಮುದಸ್ಸರ್ ನಾಜರ್ (ಪಾಕಿಸ್ತಾನ)

1976 ರಿಂದ 1989ರ ವರೆಗೆ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದ ಮುದಸ್ಸರ್ ನಾಜರ್ ಒಟ್ಟು 76 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಒಟ್ಟು 5867 ಎಸೆತಗಳನ್ನು ಬೌಲ್ ಮಾಡಿ 66 ವಿಕೆಟ್​ಗಳನ್ನು ಪಡೆದಿದ್ದಾರೆ. ಇವರೂ ಕೂಡ ತಮ್ಮ ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದೂ ಸಿಕ್ಸರ್​ಗೆ ಅವಕಾಶ ನೀಡಿಲ್ಲ.

3. ಮೊಹಮ್ಮದ್ ಹುಸೇನ್ (ಪಾಕಿಸ್ತಾನ)

ಪಾಕಿಸ್ತಾನದ ಮಾಜಿ ವೇಗದ ಬೌಲರ್ ಮೊಹಮ್ಮದ್ ಹುಸೇನ್ ಪಾಕಿಸ್ತಾನ ಪರ 27 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು 5910 ಎಸೆತಗಳನ್ನು ಬೌಲ್ ಮಾಡಿ 68 ವಿಕೆಟ್ ಪಡೆದಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಎಂದಿಗೂ ಸಿಕ್ಸರ್ ಹೊಡೆಸಿಕೊಂಡಿಲ್ಲ.

4. ಕೀತ್ ಮಿಲ್ಲರ್ (ಆಸ್ಟ್ರೇಲಿಯಾ)

ಆಸ್ಟ್ರೇಲಿಯಾ ಪರ 55 ಟೆಸ್ಟ್ ಪಂದ್ಯಗಳನ್ನಾಡಿರುವ ಕೀತ್ ಮಿಲ್ಲರ್ ತಮ್ಮ ವೃತ್ತಿ ಜೀವನದಲ್ಲಿ 170 ವಿಕೆಟ್ ಕಬಳಿಸಿದ್ದಾರೆ. ಈ ಅವಧಿಯಲ್ಲಿ, ಅವರು 10 ಸಾವಿರದ 461 ಎಸೆತಗಳನ್ನು ಎಸೆದಿದ್ದಾರೆ. ಆದರೆ ಇವರ ಬೌಲಿಂಗ್​​ನಲ್ಲಿ ಒಬ್ಬನೇ ಒಬ್ಬ ಬ್ಯಾಟರ್​ಗೆ ಸಿಕ್ಸರ್ ಹೊಡೆಯಲು ಸಾಧ್ಯವಾಗಿಲ್ಲ.

5. ನೀಲ್ ಹಾಕ್ (ಆಸ್ಟ್ರೇಲಿಯಾ)

ಆಸ್ಟ್ರೇಲಿಯಾದ ಮಾಜಿ ಆಟಗಾರ ನೀಲ್ ಹಾಕ್​ 1963ರಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಮತ್ತು 27 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಈ ಅವಧಿಯಲ್ಲಿ, ಅವರು 6987 ಎಸೆತಗಳನ್ನು ಎಸೆದು 91 ವಿಕೆಟ್​ ಪಡೆದಿದ್ದರು. ಆದ್ರೆ ಇವರು ಒಂದೇ ಒಂದು ಸಿಕ್ಸರ್​ ಹೊಡೆಸಿಕೊಂಡಿರಲಿಲ್ಲ.

ಇದನ್ನೂ ಓದಿ: ರೋಹಿತ್​, ಕೊಹ್ಲಿ ಜೊತೆಗೆ ಸ್ಟಾರ್​ ಆಟಗಾರನಿಗೂ ತಂಡದಲ್ಲಿಲ್ಲ ಸ್ಥಾನ: ನಾಯಕನಾಗಿ ಬುಮ್ರಾ; ಹೀಗಿದೆ ಅಂತಿಮ ತಂಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.