ETV Bharat / sports

2 ಬಾರಿ ಒಲಿಂಪಿಕ್ಸ್​ ಚಿನ್ನ ವಿಜೇತ ಹಾಕಿ ತಂಡದ ಉಪನಾಯಕ ಕೆ.ಡಿ.ಸಿಂಗ್​ ಮನೆ ಹರಾಜು - ಹಾಕಿ ಆಟಗಾರ ಕೆ ಡಿ ಸಿಂಗ್​

ಹಾಕಿ ಮಾಂತ್ರಿಕ ಮೇಜರ್​ ಧ್ಯಾನ್​ ಚಂದ್ ಅವ​ರ ಸಮಕಾಲೀನರಾಗಿದ್ದ ಕುನ್ವರ್​ ದಿಗ್ವಿಜಯ್​ ಸಿಂಗ್ ಅವರ ಬಾಲ್ಯದ ಮನೆಯನ್ನು ಹರಾಜು ಹಾಕಲಾಗುತ್ತಿದೆ.

ಕೆಡಿ ಸಿಂಗ್​ರ ಮನೆ ಹರಾಜು
ಕೆಡಿ ಸಿಂಗ್​ರ ಮನೆ ಹರಾಜು
author img

By ETV Bharat Karnataka Team

Published : Mar 3, 2024, 1:02 PM IST

ಬಾರಾಬಂಕಿ(ಉತ್ತರಪ್ರದೇಶ): ಕುನ್ವರ್​ ದಿಗ್ವಿಜಯ್​ ಸಿಂಗ್​ (ಕೆ.ಡಿ.ಸಿಂಗ್​). ಇದು ಭಾರತದ ಹಾಕಿ ಇತಿಹಾಸದಲ್ಲಿ ಅಚ್ಚಳಿಯದ ಹೆಸರು. ಒಲಿಂಪಿಕ್ಸ್​ನಲ್ಲಿ 2 ಬಾರಿ ಚಿನ್ನದ ಪದಕ ಗೆದ್ದ ತಂಡದ ಮುಖ್ಯ ಫಾರ್ವರ್ಡ್​ ಆಟಗಾರರಾಗಿದ್ದ ಸಿಂಗ್​ ಅವರ ಬಾಲ್ಯದ ಮನೆ ಈಗ ಹರಾಜಿಗೆ ಬಂದಿದೆ. ಸಹೋದರರ ಆಸ್ತಿ ಹಂಚಿಕೆ ಕಿತ್ತಾಟದಲ್ಲಿ ಮಾರ್ಚ್​ 11ರಂದು ಮನೆಯನ್ನು ಮಾರಾಟ ಮಾಡಲಾಗುತ್ತಿದೆ. ಆದರೆ, ಇದನ್ನು ಸರ್ಕಾರವೇ ಖರೀದಿಸಿ ವಸ್ತುಸಂಗ್ರಹಾಲಯ ಮಾಡಬೇಕು ಎಂಬುದು ಅಭಿಮಾನಿಗಳ ಆಶಯ.

35 ಸಾವಿರದ 241 ಚದರ ಅಡಿ ವಿಸ್ತೀರ್ಣದ ಮನೆ ಇದಾಗಿದ್ದು, ಕೆ.ಡಿ.ಸಿಂಗ್‌ರ ಆರು ಮಂದಿ ಸಹೋದರ ಮಧ್ಯೆ ಆಸ್ತಿ ಹಂಚಿಕೆ ವಿವಾದವಿದೆ. 2009ರಲ್ಲಿ ಸ್ಥಳೀಯ ನ್ಯಾಯಾಲಯವು ಮಹಲನ್ನು ಮಾರಾಟ ಮಾಡಿ ಬಂದ ಹಣದಲ್ಲಿ ವಾರಸುದಾರರಿಗೆ ಸಮಾನ ಹಂಚಿಕೆ ಮಾಡಲು ಆದೇಶಿಸಿದೆ.

ಹಲವು ಕಾರಣಗಳಿಗೆ ಮನೆಯ ಮಾರಾಟ ಮುಂದೂಡುತ್ತಲೇ ಬರಲಾಗಿದೆ. ಇದೀಗ ಫೆಬ್ರವರಿ 16ರಂದು ಹೆಚ್ಚುವರಿ ಸಿವಿಲ್ ಕೋರ್ಟ್​, ಈ ಮನೆಯನ್ನು ಮಾರ್ಚ್ 11ರಂದು ಹರಾಜು ಮಾಡಲು ಸೂಚಿಸಿದೆ. ನ್ಯಾಯಾಲಯದ ಆದೇಶದ ಮೇರೆಗೆ ಸಾರ್ವಜನಿಕ ಹರಾಜಿನ ನೋಟಿಸ್ ಮನೆಗೆ ಅಂಟಿಸಲಾಗಿದೆ. ಅಂದು ಮಧ್ಯಾಹ್ನ 2.30ಕ್ಕೆ ಸಿವಿಲ್ ಕೋರ್ಟ್​ನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಆಸ್ತಿಯ ಮೂಲ ಮಾರಾಟದ ಮೊತ್ತ 5 ಕೋಟಿ ರೂಪಾಯಿ ಆಗಿದೆ. ಮಹಲನ್ನು ಖರೀದಿ ಮಾಡುವ ಆಸಕ್ತರು ಅಂದಿನ ಬಿಡ್​ನಲ್ಲಿ ಭಾಗವಹಿಸಬಹುದು.

ಮ್ಯೂಸಿಯಂ ಮಾಡಲು ಒತ್ತಾಯ: ಕ್ರೀಡಾ ತಾರೆಯ ಬಾಲ್ಯದ ಮಹಲನ್ನು ಹರಾಜು ಮಾಡುವ ಬದಲು ಸರ್ಕಾರವೇ ಖರೀದಿ ಮಾಡಿ, ಅದನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಬೇಕು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರಿಗೆ ಬಿಜೆಪಿ ಮುಖಂಡರು ಸೇರಿ ಸಾರ್ವಜನಿಕರು ಪತ್ರ ಬರೆದಿದ್ದಾರೆ. ದೇಶದ ಕೀರ್ತಿಯನ್ನು ಬೆಳಗಿದ ಆಟಗಾರನಿಗೆ ಗೌರವ ಸಲ್ಲಿಸುವ ಭಾಗವಾಗಿ ಮನೆಯನ್ನು ಮ್ಯೂಸಿಯಂ ಆಗಿ ಬಳಸಿಕೊಳ್ಳಬೇಕು ಜನರು ಆಗ್ರಹಿಸಿದ್ದಾರೆ.

ಬಾಬು ಕೆ.ಡಿ.ಸಿಂಗ್​ ಬಗ್ಗೆ ಮಾಹಿತಿ: ಬಾರಾಬಂಕಿಯಲ್ಲಿ 1922ರಲ್ಲಿ ಜನಿಸಿದ ಕುನ್ವರ್ ದಿಗ್ವಿಜಯ್ ಸಿಂಗ್ ಅವರು 14ನೇ ವಯಸ್ಸಿನಲ್ಲಿ ಅತ್ಯುತ್ತನ ಹಾಕಿ ಆಟಗಾರರಾಗಿ ಗುರುತಿಸಿಕೊಂಡರು. 16 ವರ್ಷಗಳ ಕಾಲ ಉತ್ತರ ಪ್ರದೇಶ ತಂಡವನ್ನು ಪ್ರತಿನಿಧಿಸಿದರು. ನಂತರ ಭಾರತ ಹಾಕಿ ತಂಡದ ಉಪ ನಾಯಕರಾದರು. 1948 ಮತ್ತು 1952 ರ ಒಲಿಂಪಿಕ್ಸ್‌ ವಿಜೇತ ತಂಡದ ಉಪನಾಯಕರಾಗಿದ್ದರು. ಈ ಎರಡೂ ಪಂದ್ಯಾವಳಿಗಳಲ್ಲಿ ಭಾರತಕ್ಕೆ ಚಿನ್ನದ ಪದಕ ಬರಲು ಸಿಂಗ್​ ಪ್ರಮುಖ ಪಾತ್ರ ವಹಿಸಿದ್ದರು.

ಕೆ.ಡಿ.ಸಿಂಗ್ ಅಮೆರಿಕಾದಲ್ಲಿ ಹೋಮ್ಸ್ ಪ್ರಶಸ್ತಿಯನ್ನು ಪಡೆದ ಏಷ್ಯಾದ ಮೊದಲ ಆಟಗಾರ. ಇದನ್ನು ಲಾಸ್ ಏಂಜಲೀಸ್‌ನ ಹೆಮ್ಸ್‌ಫೋರ್ಡ್ ಫೌಂಡೇಶನ್ ನೀಡುತ್ತದೆ. ಇದನ್ನು ಕ್ರೀಡೆಯ ನೊಬೆಲ್ ಪ್ರಶಸ್ತಿ ಎಂದೂ ಕರೆಯಲಾಗುತ್ತಿತ್ತು. ಹಾಕಿಯ ಮಾಂತ್ರಿಕ ಎಂದು ಕರೆಯಲ್ಪಡುವ ಮೇಜರ್ ಧ್ಯಾನ್ ಚಂದ್ ಅವರ ನಾಯಕತ್ವದಲ್ಲಿ ತಂಡವು ಆಡಿದ ಪಂದ್ಯಗಳಲ್ಲಿ ಕೆ.ಡಿ.ಸಿಂಗ್ ಗರಿಷ್ಠ 70 ಗೋಲುಗಳನ್ನು ಬಾರಿಸಿದ್ದರು.

ಕುನ್ವರ್ ದಿಗ್ವಿಜಯ್ ಸಿಂಗ್ ಹಾಕಿ ಮಾತ್ರವಲ್ಲದೆ ಫುಟ್‌ಬಾಲ್, ಬ್ಯಾಡ್ಮಿಂಟನ್, ಕ್ರಿಕೆಟ್‌ನಲ್ಲೂ ಆಸಕ್ತಿ ಹೊಂದಿದ್ದರು. ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಫುಟ್‌ಬಾಲ್‌ ಆಡಿದರೆ, ಕ್ರಿಕೆಟ್ ಕ್ಲಬ್ ಪರವಾಗಿ ರಾಷ್ಟ್ರೀಯ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ 4 ಶತಕಗಳನ್ನೂ ಗಳಿಸಿದ್ದಾರೆ.

ಕೆ.ಡಿ.ಸಿಂಗ್ ಅವರನ್ನು ಆಗಿನ ಪ್ರಧಾನಿ ಇಂದಿರಾಗಾಂಧಿ ಅವರು ರಾಜಕೀಯಕ್ಕೆ ಬರುವಂತೆ ಆಹ್ವಾನಿಸಿದ್ದರು. ರಾಜ್ಯಸಭಾ ಸದಸ್ಯರನ್ನಾಗಿ ಮಾಡುವ ಬಗ್ಗೆ ಆಶ್ವಾಸನೆ ನೀಡಿದ್ದರು. ಆದರೆ, ಸಿಂಗ್​ ರಾಜಕೀಯದಿಂದ ದೂರವಿದ್ದರು.

ಇದನ್ನೂ ಓದಿ: ವೆಲ್ಲಿಂಗ್ಟನ್ ಟೆಸ್ಟ್‌ನಲ್ಲಿ ಆಸೀಸ್​ ವಿರುದ್ಧ ಕಿವೀಸ್​ಗೆ ಸೋಲು: WTC ಅಗ್ರಸ್ಥಾನಕ್ಕೇರಿದ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.