ಚಂಡೀಗಢ : ಆರಂಭದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿದ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ನಿತೀಶ್ ರೆಡ್ಡಿ ಬಿರುಸಿನ ಬ್ಯಾಟಿಂಗ್ ಮಾಡುವ ಮೂಲಕ ಪಂಜಾಬ್ ಕಿಂಗ್ಸ್ ಎದುರು 182 ರನ್ಗಳನ್ನು ಕಲೆ ಹಾಕಲಾಗಿದೆ. ಈ ಪಂದ್ಯವನ್ನು ಪಂಜಾಬ್ ಕಿಂಗ್ಸ್ ಗೆಲ್ಲಲು 183 ರನ್ಗಳ ಅವಶ್ಯಕತೆ ಇದೆ. ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 183 ಟಾರ್ಗೆಟ್ ಅನ್ನು ಎಸ್ಆರ್ಹೆಚ್ ಪೇರಿಸಿದೆ.
ಪಂಜಾಬ್ ಎದುರು ಟಾಸ್ ಸೋತ ಪರಿಣಾಮವಾಗಿ ಮೊದಲು ಹೈದರಾಬಾದ್ ಬ್ಯಾಟಿಂಗ್ ಮಾಡಿತು. ಆರಂಭಿಕರಾಗಿ ಬಂದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಕಳೆದ ಪಂದ್ಯದಲ್ಲಿ ಅಬ್ಬರಿಸಿದಂತೆ ಶಿಖರ್ ಧವನ್ ಪಡೆ ವಿರುದ್ಧ ಸಿಡಿದೆಲೆಳಲು ಸಾಧ್ಯವಾಗಲಿಲ್ಲ. ಟ್ರಾವಿಸ್ ಹೆಡ್ (21) ಔಟ್ ಆದರೇ, ಅದೇ ಓವರ್ನಲ್ಲಿ ಐಡೆನ್ ಮಾರ್ಕಾಮ್ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡು ನಿರಾಸೆ ಮೂಡಿಸಿದರು. ಇದರ ಹಿಂದೆಯೇ ಅಭಿಷೇಕ್ ಶರ್ಮಾ (16) ಕೂಡ ಬ್ಯಾಕ್ ಟು ಬ್ಯಾಕ್ ವಿಕೆಟ್ ನೀಡುವಂತಾಯಿತು.
ಬಳಿಕ ಬಂದ ಒಂದಾದ ನಿತೀಶ್ ರೆಡ್ಡಿ ಮತ್ತು ರಾಹುಲ್ ತ್ರಿಪಾಠಿ ಆರ್ಎಸ್ಹೆಚ್ ಪರ ಚೇತರಿಕೆ ಆಟವಾಡಿದರು. ರಾಹುಲ್ ತ್ರಿಪಾಠಿ ಅವರು ನಿತೀಶ್ ರನ್ಗಳಿಸಲು ಸಾಥ್ ನೀಡಿದರು. ಆದರೆ, ತ್ರಿಪಾಠಿ 11 ರನ್ಗಳಿಗೆ ಹರ್ಷಲ್ ಪಟೇಲ್ ಬೌಲಿಂಗ್ನಲ್ಲಿ ಔಟ್ ಆದರು. ಇನ್ನು ಸ್ಪೋಟಕ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ (11) ಕೂಡ ಬೇಗನೇ ವಿಕೆಟ್ ಒಪ್ಪಿಸಿದರು. ಈ ಪಂದ್ಯದಲ್ಲಿ ಕ್ಲಾಸೆನ್ ಅಬ್ಬರಿಸುತ್ತಾರೆ ಎಂದು ಅಭಿಮಾನಿಗಳು ಕಾತರಗೊಂಡಿದ್ದರು. ಆದರೆ, ಅಭಿಮಾನಿಗಳ ನಿರೀಕ್ಷೆ ಹುಸಿಯಾಯಿತು.
ಸಂಪೂರ್ಣ ಬಿಗ್ ಹಿಟರ್ ಬ್ಯಾಟ್ಮೆನ್ಸ್ ಔಟ್ ಆದರೂ ಸಹಾ ನಿತೀಶ್ ರೆಡ್ಡಿ ತಮ್ಮ ಅಬ್ಬರವನ್ನು ಬಿಡಲಿಲ್ಲ. ಸಿಕ್ಸರ್ ಮತ್ತು ಬೌಂಡರಿಗಳನ್ನು ಹೊಡೆಯುತ್ತಿದರು. ನಿತೀಶ್ಗೆ ಜೊತೆಯಾದ ಅಬ್ದುಲ್ ಸಮದ್ ಕೂಡ ತಂಡ ಮೊತ್ತ ಹೆಚ್ಚಿಸಲು ಬಿರುಸಿನ ಬ್ಯಾಟಿಂಗ್ ಮಾಡಿದರು. ಹೀಗಾಗಿ 6 ವಿಕೆಟ್ಗೆ ಅಬ್ದುಲ್ ಸಮದ್ (25) ಔಟ್ ಆಗುವ ಹೊತ್ತಿಗೆ ಹೈದರಾಬಾದ್ 150 ರನ್ಗಳನ್ನು ಗಳಿಸಿತ್ತು. ಬಳಿಕ ಅದೇ ಓವರ್ನಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ ನಿತೀಶ್ ರೆಡ್ಡಿ (64) ವಿಕೆಟ್ ಕಳೆದುಕೊಂಡರು. ಕುಸಿದ ಎಸ್ಆರ್ಹೆಚ್ ಗೆ ಆಸರೆಯಾದ ನಿತೀಶ್ ರೆಡ್ಡಿ 5 ಭರ್ಜರಿ ಸಿಕ್ಸರ್ ಹಾಗೂ 4 ಬೌಂಡರಿ ಹೊಡೆದು ಪಂಜಾಬ್ ಬೌಲರ್ಸ್ಗೆ ನಡುಕ ಹುಟ್ಟಿಸಿದರು.
ಇನ್ನುಳಿದ ಯಾವುದೇ ಬ್ಯಾಟರ್ಗಳು ಸಹಾ ಹೈದರಾಬಾದ್ ಪರ ಗಮರ್ನಾಹ ಪ್ರದರ್ಶನವನ್ನು ನೀಡಲಿಲ್ಲ. ನಾಯಕ ಪ್ಯಾಟ್ ಕಮಿನ್ಸ್ (3) ಭುವನೇಶ್ವರ್ ಕುಮಾರ್ (6) ವಿಕೆಟ್ ನೀಡಿದರು. ಕೊನೆ ಎಸೆತ ಸಿಕ್ಸರ್ಗೆ ಹಟ್ಟಿದ ಜಯದೇವ್ ಉನದ್ಕತ್ (6), ಆಲ್ ರೌಂಡರ್ ಶಹಬಾಜ್ ಅಹ್ಮದ್ (14) ಅಜೇಯರಾಗಿ ಉಳಿದರು.
ಪಂಜಾಬ್ ಪರ ಮೊದಲ ಹಂತದಲ್ಲಿ ಬೌಲರ್ಸ್ ವಿಕೆಟ್ ಪಡೆದುಕೊಂಡರು, ಆದರೆ ಪಂದ್ಯದ ಮಧ್ಯದಲ್ಲಿ ಬೇಜವಾಬ್ದಾರಿಯುಕ್ತ ಬೌಲಿಂಗ್ ಪ್ರದರ್ಶನ ಕಂಡು ಬಂದಿತ್ತು. ಹೀಗಾಗಿ ಎಸ್ಆರ್ಹೆಚ್ ತಂಡದ ಮೊತ್ತ ಹೆಚ್ಚಸಲು ಸಾಧ್ಯವಾಯಿತು. ಅರ್ಷದೀಪ್ ಸಿಂಗ್ 4 ವಿಕೆಟ್, ಹರ್ಷಲ್ ಪಟೇಲ್, ಸ್ಯಾಮ್ ಕರ್ರಾನ್ 2 ವಿಕೆಟ್ ಹಾಗೂ ಕಗಿಸೊ ರಬಾಡ 1 ವಿಕೆಟ್ ಕಬಳಿಸಿದರು.
ತಂಡಗಳು : ಸನ್‌ರೈಸರ್ಸ್ ಹೈದರಾಬಾದ್ : ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್‌ರಾಮ್, ಹೆನ್ರಿಚ್ ಕ್ಲಾಸೆನ್ (ವಿ.ಕೀ), ಅಬ್ದುಲ್ ಸಮದ್, ನಿತೀಶ್ ರೆಡ್ಡಿ, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನದ್ಕತ್, ಟಿ ನಟರಾಜನ್
ಪಂಜಾಬ್ ಕಿಂಗ್ಸ್ : ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋವ್, ಜಿತೇಶ್ ಶರ್ಮಾ (ವಿ.ಕೀ), ಅಶುತೋಷ್ ಶರ್ಮಾ, ಸ್ಯಾಮ್ ಕರ್ರಾನ್, ಶಶಾಂಕ್ ಸಿಂಗ್, ಸಿಕಂದರ್ ರಜಾ, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ಅರ್ಷದೀಪ್ ಸಿಂಗ್
ಇದನ್ನೂ ಓದಿ : ಚೆನ್ನೈಗೆ ಶರಣಾದ ಕೆಕೆಆರ್: ಚೆಪಾಕ್ನಲ್ಲಿ ಸಿಎಸ್ಕೆ ಹ್ಯಾಟ್ರಿಕ್ ಗೆಲುವು - CSK Beat KKR