ETV Bharat / sports

ತಂದೆಯಂತೆಯೇ ಮಗ; ಟೀಂ ಇಂಡಿಯಾ ಪರ ಆಡಿದ ಅಪ್ಪ- ಮಕ್ಕಳಿವರು! - Father And Son In Cricket - FATHER AND SON IN CRICKET

ಕ್ರಿಕೆಟ್‌ನಲ್ಲಿ ಸಹೋದರರು ಒಟ್ಟಿಗೆ, ಇಲ್ಲವೇ ಬೇರೆ ಬೇರೆ ಸಮಯದಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿರುವುದನ್ನು ಹೆಚ್ಚಾಗಿ ಕಾಣಬಹುದು. ಆದರೆ, ಅಪ್ಪ-ಮಗ ಕೂಡ ಟೀಂ ಇಂಡಿಯಾವನ್ನು ಪ್ರತಿನಿಧಿಸಿರುವುದು ನಿಮಗೆ ಗೊತ್ತಾ?

Father And Son In Cricket
ಯುವರಾಜ್ ಸಿಂಗ್, ಸಂಜಯ್ ಮಂಜ್ರೇಕರ್, ಸ್ಟುವರ್ಟ್ ಬಿನ್ನಿ (Source: Getty Images)
author img

By ETV Bharat Karnataka Team

Published : Jul 13, 2024, 9:10 AM IST

ಕ್ರೀಡಾರಂಗದಲ್ಲಿ ದೇಶವನ್ನು ಪ್ರತಿನಿಧಿಸುವುದು ಅಸಾಮಾನ್ಯ ಗೌರವ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡು, ಛಾಪು ಮೂಡಿಸಲು ಕಠಿಣ ಪರಿಶ್ರಮ ಮತ್ತು ಅದೃಷ್ಟವೂ ಅಗತ್ಯ. ಅದರಲ್ಲೂ ಎರಡು ತಲೆಮಾರಿನ ಕ್ರಿಕೆಟಿಗರು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವುದು ಸುಲಭದ ಮಾತಲ್ಲ. ಆದರೆ, ಭಾರತೀಯ ಕ್ರಿಕೆಟ್‌ನಲ್ಲಿ ತಂದೆ - ಮಗ ಇಬ್ಬರೂ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿ ಗಮನ ಸೆಳೆದ ನಿದರ್ಶನಗಳಿವೆ. ಅಂತಹವರ ಬಗ್ಗೆ ತಿಳಿಯೋಣ ಬನ್ನಿ.

ಪಟೌಡಿ ಪರಂಪರೆ: ನವಾಬ್ ಮೊಹಮ್ಮದ್ ಇಫ್ತಿಕರ್ ಅಲಿ ಖಾನ್ ಪಟೌಡಿ ಒಟ್ಟು 6 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇವರು ಎರಡು ದೇಶಗಳ ಪರ ನಾಯಕನಾಗಿ ಆಡಿರುವ ಅಪರೂಪದ ದಾಖಲೆ ಹೊಂದಿದ್ದಾರೆ. ಅಲಿ ಖಾನ್ ಮೊದಲ 3 ಟೆಸ್ಟ್‌ಗಳನ್ನು ಇಂಗ್ಲೆಂಡ್‌ ಮತ್ತು ಬಳಿಕದ 3 ಟೆಸ್ಟ್‌ ಪಂದ್ಯಗಳನ್ನು ಭಾರತದ ಪರ ಆಡಿದರು. ಪಟೌಡಿ 1932-34ರ ನಡುವೆ ಇಂಗ್ಲೆಂಡ್ ಪರ ಆಡಿದರೆ, ಆ ಬಳಿಕ ಮೂರು ಟೆಸ್ಟ್‌ಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. 1946ರಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಿದ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವ ವಹಿಸಿದ್ದರು.

ಪಟೌಡಿ ಭಾರತ - ಇಂಗ್ಲೆಂಡ್ ಪರ ಆಡಿದ ಏಕೈಕ ಟೆಸ್ಟ್ ಕ್ರಿಕೆಟಿಗರಾದರು. ಇಫ್ತಿಕರ್ ಪಟೌಡಿ ಅವರ ಮಗ ಮನ್ಸೂರ್ ಅಲಿ ಖಾನ್ ಪಟೌಡಿ ಕೂಡ ತಮ್ಮ ತಂದೆಯ ಪರಂಪರೆಯನ್ನು ಮುಂದುವರೆಸಿದರು. ಅಲಿ ಖಾನ್ ಪಟೌಡಿ ಭಾರತ ಕ್ರಿಕೆಟ್ ತಂಡದ ನಾಯಕರಾಗಿ ಸೇವೆ ಸಲ್ಲಿಸಿದ್ದರು. ಅವರು ಪಟೌಡಿ ಜೂನಿಯರ್ ನವಾಬ್ ಎಂದೇ ಖ್ಯಾತರಾಗಿದ್ದರು. 46 ಟೆಸ್ಟ್‌ಗಳಲ್ಲಿ ಅವರು 2,739 ರನ್ ಗಳಿಸಿದ್ದರು.

ಅಮರನಾಥ್ ಜೋಡಿ: ಲಾಲಾ ಅಮರನಾಥ್ ಟೀಂ ಇಂಡಿಯಾದ ಅಪ್ರತಿಮ ಆಟಗಾರರಲ್ಲಿ ಒಬ್ಬರು. ಲಾಲಾ ಅಮರನಾಥ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಶತಕ ಬಾರಿಸಿದ ಆಟಗಾರ ಎಂಬ ದಾಖಲೆ ಬರೆದವರು. ಲಾಲಾ ಅಮರನಾಥ್ 24 ಟೆಸ್ಟ್‌ಗಳಲ್ಲಿ ಟೀಮ್ ಇಂಡಿಯಾದಲ್ಲಿ ಆಡಿದ್ದು, 878 ರನ್ ಗಳಿಸಿದ್ದಾರೆ. ಲಾಲಾ ಅಮರನಾಥ್ ಅವರ ಪುತ್ರ ಮೊಹಿಂದರ್ ಅಮರನಾಥ್ ಕೂಡ ಭಾರತವನ್ನು ಪ್ರತಿನಿಧಿಸಿದ್ದರು. ಮೊಹಿಂದರ್ ಅಮರನಾಥ್ ಅವರು 1983ರ ಏಕದಿನ ವಿಶ್ವಕಪ್ ಗೆದ್ದ ತಂಡದ ಪ್ರಮುಖ ಸದಸ್ಯರಾಗಿದ್ದರು. ಮೊಹಿಂದರ್ ಅಮರನಾಥ್ ಅವರು ಭಾರತದ ಪರ 69 ಟೆಸ್ಟ್ ಮತ್ತು 85 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

ವಿನೂ ಮಂಕಡ್ - ಅಶೋಕ್ ಮಂಕಡ್: ವಿನೂ ಮಂಕಡ್ 44 ಟೆಸ್ಟ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, 162 ವಿಕೆಟ್ ಪಡೆದರು. ವಿನೂ ಮಂಕಡ್ ಅವರ ಪುತ್ರ ಅಶೋಕ್ ಮಂಕಡ್ ಕೂಡ ಭಾರತದ ಪರ 22 ಟೆಸ್ಟ್ ಮತ್ತು ಒಂದು ಏಕದಿನ ಪಂದ್ಯವನ್ನು ಆಡಿದ್ದಾರೆ. ಅವರು ಟೆಸ್ಟ್‌ನಲ್ಲಿ 991 ರನ್ ಗಳಿಸಿದರೆ, ಏಕದಿನದಲ್ಲಿ 44 ರನ್ ಬಾರಿಸಿದ್ದರು.

ವಿಜಯ್ ಮಂಜ್ರೇಕರ್ - ಸಂಜಯ್ ಮಂಜ್ರೇಕರ್: ವಿಜಯ್ ಮಂಜ್ರೇಕರ್ 1952 - 1965ರ ನಡುವೆ ಭಾರತ ತಂಡದಲ್ಲಿ ಆಡಿದ್ದರು. ಅವರು 55 ಟೆಸ್ಟ್‌ಗಳಲ್ಲಿ 3,208 ರನ್ ಗಳಿಸಿದ್ದಾರೆ. ವಿಜಯ್ ಪುತ್ರ ಸಂಜಯ್ ಮಂಜ್ರೇಕರ್ ಕೂಡ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದರು. ಅವರು 37 ಟೆಸ್ಟ್‌ಗಳಲ್ಲಿ 2,043 ರನ್ ಮತ್ತು 74 ಏಕದಿನಗಳಲ್ಲಿ 1,994 ರನ್ ಗಳಿಸಿದ್ದಾರೆ.

ಸುನಿಲ್ ಗವಾಸ್ಕರ್ - ರೋಹನ್ ಗವಾಸ್ಕರ್: ಭಾರತದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು ತಮ್ಮ ಅದ್ಭುತ ವೃತ್ತಿಜೀವನದಲ್ಲಿ ಹಲವು ದಾಖಲೆಗಳನ್ನು ಮಾಡಿದವರು. 125 ಟೆಸ್ಟ್‌ಗಳಲ್ಲಿ 10,122 ರನ್ ಮತ್ತು 108 ಏಕದಿನ ಪಂದ್ಯಗಳಲ್ಲಿ 3,092 ರನ್ ಪೇರಿಸಿದ್ದಾರೆ. ಸುನಿಲ್ ಗವಾಸ್ಕರ್ ಅವರ ಪುತ್ರ ರೋಹನ್ ಗವಾಸ್ಕರ್ ಕೂಡ ತಂದೆಯ ಹಾದಿಯಲ್ಲಿ ಪಯಣಿಸಿದರೂ ಕೂಡ ಆ ಮಟ್ಟದಲ್ಲಿ ಸಾಧನೆ ಮಾಡಲಾಗಲಿಲ್ಲ. ಭಾರತದ ಪರವಾಗಿ ರೋಹನ್ ಗವಾಸ್ಕರ್ 11 ಏಕದಿನ ಪಂದ್ಯಗಳನ್ನು ಆಡಿದ್ದು, 151 ರನ್ ಗಳಿಸಿದ್ದಾರೆ.

ರೋಜರ್ ಬಿನ್ನಿ - ಸ್ಟುವರ್ಟ್ ಬಿನ್ನಿ: ಪ್ರಸ್ತುತ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಅವರ ಮಗ ಸ್ಟುವರ್ಟ್ ಬಿನ್ನಿ ಕೂಡ ಭಾರತವನ್ನು ಪ್ರತಿನಿಧಿಸಿದ್ದಾರೆ. ರೋಜರ್ ಬಿನ್ನಿ ಭಾರತ ಪರ 27 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 47 ವಿಕೆಟ್ ಪಡೆದಿದ್ದಾರೆ. ಅವರು 830 ರನ್ ಕೂಡ ಗಳಿಸಿದ್ದಾರೆ. 72 ಏಕದಿನ ಪಂದ್ಯಗಳಲ್ಲಿ 77 ವಿಕೆಟ್ ಹಾಗೂ 629 ರನ್ ಬಾರಿಸಿದ್ದಾರೆ. ರೋಜರ್ ಬಿನ್ನಿ ಅವರ ಪುತ್ರ ಸ್ಟುವರ್ಟ್ ಬಿನ್ನಿ 6 ಟೆಸ್ಟ್, 14 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು 2015ರ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದರು.

ಯುವರಾಜ್ ಸಿಂಗ್ - ಯೋಗರಾಜ್ ಸಿಂಗ್: ಯೋಗರಾಜ್ ಸಿಂಗ್ ಅವರು ಟೀಮ್ ಇಂಡಿಯಾದ ದಿಗ್ಗಜ ಆಲ್​​ರೌಂಡರ್ ಮತ್ತು ವಿಶ್ವಕಪ್ ವಿಜೇತ ಯುವರಾಜ್ ಸಿಂಗ್ ಅವರ ತಂದೆ. ಭಾರತ ಪರ ಆರು ಏಕದಿನ ಹಾಗೂ ಒಂದು ಟೆಸ್ಟ್ ಪಂದ್ಯವನ್ನಾಡಿರುವ ಯೋಗರಾಜ್, ಕ್ರಿಕೆಟ್​​​ನಲ್ಲಿ ತಾವು ಮಾಡಲಾಗದ ಸಾಧನೆ, ದಾಖಲೆಗಳನ್ನು ಮಗನ ಮೂಲಕ ಸಾಧಿಸಿದ್ದಾರೆ. ಯುವರಾಜ್​ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 6 ಬಾಲ್​ಗೆ 6 ಸಿಕ್ಸರ್​ ಸೇರಿದಂತೆ ಹಲವು ದಾಖಲೆ ಬರೆದಿದ್ದಾರೆ. ಅಂಡರ್-19, ಟಿ20 ಹಾಗೂ ಏಕದಿನ ಕ್ರಿಕೆಟ್​ ವಿಶ್ವಕಪ್​ ಗೆದ್ದಿರುವ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: ವಿಂಡೀಸ್​ ವಿರುದ್ಧ ಇಂಗ್ಲೆಂಡ್​ಗೆ ಗೆಲುವು: 21 ವರ್ಷಗಳ ಟೆಸ್ಟ್ ಕರಿಯರ್​ಗೆ ಗುಡ್​ಬೈ ಹೇಳಿದ ಜೇಮ್ಸ್ ಆ್ಯಂಡರ್ಸನ್ - James Anderson Signs Off

ETV Bharat Logo

Copyright © 2024 Ushodaya Enterprises Pvt. Ltd., All Rights Reserved.