ದುಬೈ: ಭಾರೀ ನಿರೀಕ್ಷೆ ಮೂಡಿಸಿದ್ದ ವನಿತೆಯರ ಟಿ-20 ವಿಶ್ವಕಪ್ನಲ್ಲಿ ಹೊಸ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ದಕ್ಷಿಣಾ ಆಫ್ರಿಕಾ ವನಿತೆಯರ ಮೇಲೆ ಸವಾರಿ ಮಾಡಿದ ನ್ಯೂಜಿಲ್ಯಾಂಡ್ ವನಿತೆಯರು ಚೊಚ್ಚಲ ವಿಶ್ವಕಿರೀಟವನ್ನು ಮುಡಿಗೇರಿಸಿಕೊಂಡರು. ಸತತ 2ನೇ ಬಾರಿಗೆ ಹರಿಣಗಳ ತಂಡ ನಿರಾಸೆ ಅನುಭವಿಸಿ ಚೋಕರ್ಸ್ ಹಣೆಪಟ್ಟಿಯನ್ನು ಹಾಗೇ ಉಳಿಸಿಕೊಂಡಿತು.
ಕಿವೀಸ್ನ ಅಮೇಲಿಯಾ ಕೆರ್ ಆಲ್ರೌಂಡರ್ ಆಟ, ತಂಡದ ಸಾಂಘಿಕ ಪ್ರದರ್ಶನದಿಂದ ನ್ಯೂಜಿಲ್ಯಾಂಡ್ ಮಹಿಳೆಯರು ದುಬೈನ ಕ್ರೀಡಾಂಗಣದಲ್ಲಿ ನಡೆದ ಫೈನಲ್ ರಾರಾಜಿಸಿದರು. ಯಾವುದೇ ಹಂತದಲ್ಲಿ ಹರಿಣಗಳ ತಂಡ ಮೇಲೇಳದಂತೆ ತಡೆದರು. ಇದರಿಂದ ತಂಡ 32 ರನ್ಗಳ ಸೋಲು ಕಂಡಿತು.
What a win! 🎉
— T20 World Cup (@T20WorldCup) October 20, 2024
The White Ferns are the Women's #T20WorldCup 2024 champions 🤩#WhateverItTakes | #SAvNZ 📝: https://t.co/szzxGPRxxK pic.twitter.com/m7u0Vwq0Q6
ಮೊದಲು ಬ್ಯಾಟ್ ಮಾಡಿದ ನ್ಯೂಜಿಲ್ಯಾಂಡ್ ವನಿತೆಯರು ಸೂಜಿ ಬೆಟ್ಸ್, ಅಮೇಲಿಯಾ ಕೆರ್, ಬ್ರೂಕ್ ಹ್ಯಾಲ್ಲಿಡೇ ಅವರ ಭರ್ಜರಿ ಬ್ಯಾಟಿಂಗ್ನಿಂದಾಗಿ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗೆ 158 ರನ್ ಗಳಿಸಿತು. ಬಲಿಷ್ಠ ಆಟಗಾರ್ತಿಯರಿದ್ದರೂ ಒತ್ತಡ ನಿಭಾಯಿಸಲಾಗದೇ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ದಕ್ಷಿಣ ಆಫ್ರಿಕಾ ವನಿತೆಯರು 9 ವಿಕೆಟ್ಗೆ 126 ರನ್ ಗಳಿಸಲಷ್ಟೆ ಶಕ್ತವಾಗಿ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ತಪ್ಪಿಸಿಕೊಂತು.
ಅಮಲೇರಿಸಿದ ಅಮೆಲಿಯಾ ಆಟ: ಕಿವೀಸ್ನ ಅಮೇಲಿಯಾ ಕೆರ್ ಭರ್ಜರಿ ಆಲ್ರೌಂಡರ್ ಆಟ ಫೈನಲ್ ಪಂದ್ಯಕ್ಕೆ ಸೊಬಗು ತಂದಿತು. ಬ್ಯಾಟಿಂಗ್ನಲ್ಲಿ 38 ಎಸೆತಗಳಲ್ಲಿ 43 ರನ್ ಬಾರಿಸಿದರೆ, 4 ಓವರ್ಗಳ ಕೋಟಾದಲ್ಲಿ 24 ರನ್ ನೀಡಿ 3 ವಿಕೆಟ್ ಕಬಳಿಸಿ ಹರಿಣಗಳನ್ನು ಬೇಟೆಯಾಡಿದರು.
👑 CHAMPIONS 👑
— T20 World Cup (@T20WorldCup) October 20, 2024
New Zealand win their maiden Women's #T20WorldCup title 🏆#WhateverItTakes #SAvNZ pic.twitter.com/Ab0lbjRM4w
ಕಿವೀಸ್ಗೆ ಚೊಚ್ಚಲ ವಿಶ್ವಕಪ್ ಕಿರೀಟ: ನ್ಯೂಜಿಲ್ಯಾಂಡ್ ಮಹಿಳೆಯರು ಇದೇ ಮೊದಲ ಬಾರಿಗೆ ಟಿ-20 ವಿಶ್ವಕಪ್ನ ಫೈನಲ್ ತಲುಪಿದ್ದರು. ಚೊಚ್ಚಲ ಪ್ರಯತ್ನದಲ್ಲೇ ಸೋಫಿ ಡಿವೈನ್ ನೇತೃತ್ವದ ತಂಡ ವಿಶ್ವಕಿರೀಟವನ್ನು ಮುಡಿಗೇರಿಸಿಕೊಂಡು ಕುಣಿದಾಡಿತು. ಇನ್ನೂ ದಕ್ಷಿಣ ಆಫ್ರಿಕಾ ವನಿತೆಯರ ಅದೃಷ್ಟ ಮತ್ತೆ ಕೈಕೊಟ್ಟಿತು. 2023 ರ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡು ಪ್ರಶಸ್ತಿಯಿಂದ ವಂಚಿತರಾಗಿದ್ದರು. ಈ ಬಾರಿ ಕಿವೀಸ್ ಪಡೆಯ ಮುಂದೆ ಸೋಲು ಕಂಡು ಸತತ ಎರಡನೇ ಬಾರಿಯೂ ವಿಶ್ವಕಪ್ ಅನ್ನು ಕಳೆದುಕೊಂಡಿತು.
ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧ ಸೋತ ಭಾರತಕ್ಕೆ ಬಿಗ್ ಶಾಕ್; ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಹೇಗಿದೆ ಸ್ಥಾನ?